ಹೊಸ ಅವತಾರದಲ್ಲಿ “Jio Browser”

Share

ರಿಲಯನ್ಸ್, Jio Browser ಅನ್ನು blink ಎಂಬ rendering engine ಬಳಸಿ ವೇಗವಾಗಿ ಕಾರ್ಯನಿರ್ವಹಿಸುವಂತೆ, ಹೊಸ ಆವೃತ್ತಿಯನ್ನು ಹೊರತಂದಿದೆ. ಅದಕ್ಕೆ JioPages ಎಂದು ಮರು ನಾಮಕರಣ ಮಾಡಿದೆ.

ಕನ್ನಡ ಸೇರಿ ಹಿಂದಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ಲಭ್ಯವಿದ್ದು, ಬಳಕೆದಾರರ ಇಚ್ಚೆಯನುಸಾರ ಪ್ರಾದೇಶಿಕ ವೆಬ್ಸೈಟುಗಳನ್ನು ವಿಂಗಡಿಸಿ ತೋರಿಸುತ್ತದೆ. QR ಕೋಡ್ ಸ್ಕ್ಯಾನರ್ ಆಯ್ಕೆ ನೀಡಲಾಗಿದೆ.

ಹೊಸ ಸುದ್ದಿಗಳು ಮತ್ತು ವಿಡಿಯೋಗಳು explorerನಲ್ಲಿ ಪ್ರತ್ಯೇಕವಾಗಿ ಕಾಣಸಿಗುವಂತೆ ಮಾಡಲಾಗಿದ್ದು, ಡೌನ್‌ಲೋಡ್ ಮ್ಯಾನೇಜರ್ ತ್ವರಿತವಾಗಿ ಡೌನ್‌ಲೋಡ್ ಮಾಡುತ್ತದೆ. ಚಿತ್ರಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ಪುಟಗಳನ್ನು ಒಳಗೊಂಡಂತೆ ಫೈಲ್‌ಗಳನ್ನು ಅವುಗಳ ಪ್ರಕಾರವನ್ನು ಆಧರಿಸಿ ವಿಂಗಡಿಸಿ ತೋರಿಸುತ್ತದೆ.

Incognito ಮೋಡ್ ಬಳಸುವಾಗ ಸಾಮನ್ಯವಾಗಿ ವೆಬ್ಸೈಟ್ ಕೊಂಡಿಗಳನ್ನು bookmark ಮಾಡಲು ಅಸಾಧ್ಯ. ಆದರೆ JioPagesನಲ್ಲಿ bookmark ಮಾಡಿ ಅದನ್ನು ಪಿನ್ ಮಾಡುವ ಮೂಲಕ ರಕ್ಷಿಸಬಹುದು. ಜಾಹಿರಾತುಗಳನ್ನು ತೋರಿಸದಂತೆ ಮಾಡಲು ‘AdblockPlus’ ಆಯ್ಕೆಯಿದೆ.

ಸಧ್ಯಕ್ಕೆ ಆಂಡ್ರಾಯ್ಡ್ playstoreನಲ್ಲಿ ಮಾತ್ರ ಲಭ್ಯವಿದ್ದು, ಕೆಳಗೆ ನೀಡಿರುವ ಲಿಂಕಿನ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.