ಭಾರತದಲ್ಲಿ ಮೊದಲ ಬಾರಿಗೆ free space quantum ಸಂವಹನ ಪ್ರಕ್ರಿಯೆಯನ್ನು 300 ಮೀಟರ್ ಅಂತರದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು ಎಂದು ಇಸ್ರೋ ಹೇಳಿಕೊಂಡಿದೆ. ಹೆಮ್ಮೆಯ ಸಂಗತಿಯೆಂದರೆ ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಉಪಕರಣಗಳು ಹಾಗು ತಂತ್ರಜ್ಞಾನ ಬಳಸಿ, ಈ ಪ್ರಕ್ರಿಯೆಯನ್ನು ಪ್ರದರ್ಶಿಸಲಾಯಿತು. ಇವುಗಳಲ್ಲಿ ಪ್ರಮುಖವಾದದ್ದು ಟ್ರಾನ್ಸ್ಮಿಟರ್ ಮತ್ತು ರಿಸೀವರ್ ನಡುವೆ time synchronization ಗೆ ಬಳಸಲಾದ ‘ನಾವಿಕ್’.
ಅಹ್ಮದಾಬಾದ್ ನಲ್ಲಿ 300 ಮೀಟರ್ ಅಂತರವಿರುವ 2 ಕಟ್ಟಡಗಳ ನಡುವೆ quantum encryption key ಗಳನ್ನು ಬಳಸಿ ವಿಡಿಯೋ ಕರೆಯನ್ನು ಮಾಡಲಾಯಿತು. ಉಪಗ್ರಹಗಳನ್ನು ಸಂಪರ್ಕಿಸಲು quantum ಸಂವಹನ ಅತ್ಯಂತ ಸುರಕ್ಷಿತ ಹಾಗು ವಿಶ್ವದ ಕೆಲವೇ ದೇಶಗಳು ಈ ತಂತ್ರಜ್ಞಾನವನ್ನು ಹೊಂದಿವೆ.

ಸಾಂಪ್ರದಾಯಿಕ encryption algorithmಗಳು ಗಣಿತದಿಂದ ಪ್ರೇರೇಪಿತಗೊಂಡಿದ್ದು ಭೇದಿಸಲು ಸುಲಭಸಾಧ್ಯ. ಆದರೆ quantum encryption ಭೌತಶಾಸ್ತ್ರದ ನಿಯಮಗಳಿಂದ ಮಾಡಲ್ಪಟ್ಟಿದ್ದು, ಅಭೇದ್ಯವಾಗಿದೆ. ಮುಂದಿನ ದಿನಗಳಲ್ಲಿ ಎರಡು ಉಪಗ್ರಹಗಳ ground station ನಡುವೆ quantum ಸಂವಹನ ನಡೆಸಲು ಇಸ್ರೋ ತಯಾರಿ ನಡೆಸಿದೆ.
ಮೂಲ ಸುದ್ದಿ: ಇಸ್ರೋ blogpost