ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಭಾರತದ IRNSS

Share

ಭಾರತ ISRO ದ ಉಪಗ್ರಹಗಳನ್ನು ಬಳಸಿ ತನ್ನದೇ ಆದ ಪ್ರಾದೇಶಿಕ ಸಂಚಾರ ಉಪಗ್ರಹ ವ್ಯವಸ್ಥೆ ಸಿದ್ಧಪಡಿಸಿತ್ತು. ಉಪಗ್ರಹ ಸಂಚಾರ ವ್ಯವಸ್ಥೆಗೆ Indian Regional Navigation Satellite System(IRNSS) ಎಂದು ಕರೆಯಲಾಗಿದ್ದು, International Maritime Organization(IMO) ಇಂದ World Wide Radio Navigation System (WWRNS) ನ ಭಾಗವಾಗಿ ಗುರುತಿಸಲ್ಪಟ್ಟಿದೆ.

ಈ ಮೂಲಕ IRNSS, ಅಮೆರಿಕಾದ Global Positioning System(GPS), ರಷ್ಯಾದ Global Navigation Satellite System(GLONASS) ಮತ್ತು ಚೀನಾದ BeiDou ಗುಂಪಿಗೆ ಸೇರಿಕೊಂಡಿದೆ.

IRNSS ಹಿಂದೂ ಮಹಾಸಾಗರದಲ್ಲಿ ಸಂಚರಿಸುವ ಹಡಗುಗಳಿಗೆ ನಿಖರವಾದ ದಿಕ್ಸೂಚಿಯಾಗಲಿದ್ದು, 50°N latitude, 55°E longitude, 5°S latitude and 110°E longitude ಭಾರತದ ಗಡಿಯಿಂದ ಸುಮಾರು 1500ಕಿಮಿ ದೂರದವರೆಗೂ ಸೇವೆ ಒದಗಿಸಲಿದೆ. ಇನ್ನು ಮುಂದೆ ಈ ವಿಸ್ತೀರ್ಣದಲ್ಲಿ ಸಂಚರಿಸುವ ಹಡಗುಗಳು GPS ಬದಲಿಗೆ IRNSS ಬಳಸಬಹುದಾಗಿದೆ.

ಅಮೆರಿಕಾದ GPS ಮೇಲೆ ಹೆಚ್ಚು ಅವಲಂಬಿತವಾಗಿರುವುದು ಸುರಕ್ಷಿತವಲ್ಲ ಹಾಗು ಎಲ್ಲ ದೇಶಗಳು ತಮ್ಮದೇ ಆದ Navigation System ಅಭಿವೃದ್ಧಿಗೊಳಿಸಲು IMO ಸೂಚಿಸಿತ್ತು. ಇತ್ತೀಚೆಗೆ ನಡೆದ 104ನೇ ಸಭೆಯಲ್ಲಿ IMO ಭಾರತ ನಿರ್ಮಿತ IRNSS, World Wide Radio Navigation System(WWRNS) ನ ಭಾಗವಾಗಿ ಗುರುತಿಸಿದೆ.

ಮೂಲ ಸುದ್ದಿ: PIB press report