ಐಫೋನ್ ತಯಾರಿಕ ಘಟಕ ಈಗ ನಮ್ಮ ಬೆಂಗಳೂರಿನಲ್ಲಿ!

Share

ಆಪಲ್ ಇತ್ತೀಚೆಗೆ ಚೆನೈನಲ್ಲಿ ಐಫೋನ್ 11 ಅನ್ನು ತಯಾರಿಸಲು ಪ್ರಾರಂಭಿಸಿದೆ. ಇದರ ಬೆನ್ನಲ್ಲೇ ಹೊಸ ವರದಿಯ ಪ್ರಕಾರ ಕಂಪನಿಯು ತನ್ನ 2020ರ ಪ್ರಮುಖ ಐಫೋನ್ 12 ಆವೃತ್ತಿಯ ಮೊಬೈಲ್ಅನ್ನು ಕೂಡಾ ತಯಾರಿಸಲಿದೆ. ಈ ಪ್ರಕ್ರಿಯೆಗಾಗಿ ಆಪಲ್ ಬೆಂಗಳೂರು ಸ್ಥಾವರದಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡುತ್ತಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಹೇಳಿದೆ. ಆಪಲ್ ನ ಗುತ್ತಿಗೆ ತಯಾರಕ ಸಂಸ್ಥೆ ವಿಸ್ಟ್ರಾನ್, ಸುಮಾರು 10,000 ಜನರನ್ನು ನೇಮಕಗೊಳಿಸಲು ಯೋಜಿಸುತ್ತಿದೆ.

ಬೆಂಗಳೂರಿನ ನರಸಿಪುರದಲ್ಲಿ ಈ ಘಟಕ ಸ್ಥಾಪನೆಯಾಗುತ್ತಿದೆ. ಈಗಲಾದರು ಕೈಗೆಟುಕುವ ಬೆಲೆಯಲ್ಲಿ ಹೊಸ ಐಫೋನ್ಅನ್ನು ನಿರೀಕ್ಷಿಸಬಹುದು.