ಫೇಸ್ಬುಕ್ ನ ಇನ್ಸ್ಟಾಗ್ರಾಮ್ ಈಗಾಗಲೇ ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್. ಭಾರತದಲ್ಲೂ ಇನ್ಸ್ಟಾಗ್ರಾಮ್ಅನ್ನು ಯುವಜನೆತೆ ಅತಿಹೆಚ್ಚು ಬಳಸುತ್ತಿದ್ದು , ದೈನಂದಿನ ಚಟುವಟಿಕೆಗಳು, ಫೋಟೋಸ್ , ವೀಡಿಯೋಸ್ ಗಳನ್ನು ಪೋಸ್ಟ್ ಮಾಡುತ್ತಾರೆ .
ಭಾರತ ಸರ್ಕಾರ ಟಿಕ್ ಟಾಕ್ (tiktok ) ಅಪ್ಲಿಕೇಶನ್ ನಿಷೇಧಿಸಿದ ಬೆನ್ನಲ್ಲೇ ಇನ್ಸ್ಟಾಗ್ರಾಮ್, ರೀಲ್ಸ್ (reels) ಅನ್ನು ಅದರ ಎಕ್ಸ್ಪ್ಲೋರ್ (explore ) ಪೇಜ್ನಲ್ಲಿ ಸೇರಿಸಲಾಗಿತ್ತು. ರೀಲ್ಸ್ ನಲ್ಲಿ ಕೇವಲ 15 ಸೆಕೆಂಡಿವರೆಗೂ ಮಾತ್ರ ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಬಳಕೆದಾರನ ದೈನಂದಿನ ಅಪ್ಪ್ಲಿಕೇಟೆಷನ್ ಚಟುವಟಿಕೆಗಳು ಹಾಗೂ ಬಳಕೆದಾರ ಫಾಲೋ ಮಾಡುತ್ತಿರುವ ಅಕೌಂಟ್ಗಳ ಆಧಾರದ ಮೇಲೆ ರೀಲ್ಸ್ ನಲ್ಲಿ ವೀಡಿಯೋಸ್ ತೋರಿಸಲಾಗುತ್ತದೆ . ಇಂದಿನ ಅಪ್ಡೇಟ್ನಲ್ಲಿ (update) ರೀಲ್ಸ್ ಗೆಂದೇ(reels) ನೇವಿಗೇಶನ್ ಬಾರಿನಲ್ಲಿ(navigation bar) ಬಟನ್ ದೊರಕಿಸಿಕೊಡಲಾಗಿದ್ದು ಕೇವಲ ಭಾರತೀಯರಿಗೆ ಮಾತ್ರ ಲಭ್ಯವಿರುತ್ತದೆ ಎಂದು ಇನ್ಸ್ಟಾಗ್ರಾಮ್ ಹೇಳಿದೆ. ಎಕ್ಸ್ಪ್ಲೋರ್ ಆಯ್ಕೆಯ ಬಟನ್ ಅಪ್ಲಿಕೇಶನ್ ನ ಮೇಲ್ಭಾಗಕ್ಕೆ ಸ್ಥಳಾಂತರಿಸಲಾಗಿದೆ.
ಭಾರತೀಯ ಯುವಜನತೆ ಈಗಾಗಲೇ ಇನ್ಸ್ಟಾಗ್ರಾಮ್ ಗೆ ಅಡಿಕ್ಟ್(addict) ಆಗಿದ್ದು ಇನ್ಸ್ಟಾಗ್ರಾಮ್ ನ ಮೀಸಲಾದ ರೀಲ್ಸ್ ಬಟನ್ ಇದನ್ನು ಇನ್ನಷ್ಷ್ಟು ಅಡಿಕ್ಟೀವ್ ಮಾಡುವ ಸಾಧ್ಯತೆ ಹೆಚ್ಚಿದೆ. ಬಳಕೆದಾರರು ತಮ್ಮ ಹಿಡಿತದಲ್ಲಿರಲು ಇನ್ಸ್ಟಾಗ್ರಾಮ್ ನಲ್ಲಿ ನಿಮ್ಮ ಪ್ರೊಫೈಲ್ ನ your activity ಆಯ್ಕೆಯಲ್ಲಿ ಆ ದಿನ ನೀವು ಅಪ್ಲಿಕೇಶನ್ ಬಳಸಿದ ಒಟ್ಟು ಸಮಯವನ್ನು ನೋಡಬಹುದು ಹಾಗೂ ನೀವು ದಿನಬಳಕೆಯ ಲಿಮಿಟ್ ಗೆ ರಿಮೈಂಡರ್(reminder) ಕೂಡ ಸೆಟ್ ಮಾಡಬಹುದು. ವ್ಯಯುಕ್ತಿಕವಾಗಿ ನಾನು ಈ ಆಯ್ಕೆಯನ್ನು ಬಳಸಲು ಉತ್ತೇಜಿಸುತ್ತೇನೆ.


1 Response
[…] ಗಳ ವಿಡಿಯೋ ರೆಕಾರ್ಡ್ ಹಾಗು ಶೇರ್ ಮಾಡುವ ರೀಲ್ಸ್ ಅನ್ನು ಭಾರತದಲ್ಲಿ ಹೊರಬಿಟ್ಟಿತ್ತು . ಈಗ […]