ಜೆ ಬಿ ಲ್ (JBL) ನ ಉಪ ಬ್ರಾಂಡ್, ಇಂಫಿನಿಟಿಯ (infinity) ಒಂದು ಉತ್ತಮ ಕ್ವಾಲಿಟಿಯ ಬ್ಲೂ ಟೂತ್ ಸ್ಪೀಕರ್, ಇನ್ಫಿನಿಟಿ ಫ್ಯೂಜ್ ಪಿಂಟ್. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಅತಿ ಹೆಚ್ಚು ರೇಟಿಂಗ್ಸ್ ನಿಂದ ಜನ ಮನ ಗೆದ್ದಿದೆ. ನಾನು ಇನ್ಫಿನಿಟಿ ಫ್ಯೂಜ್ ಪಿಂಟ್ನು ಕಳೆದ 1 ತಿಂಗಳಿಂದ ಬಳಸುತ್ತಿದ್ದು ಇದರ ಸಂಪೂರ್ಣ ರಿವ್ಯೂ (review) ಇಲ್ಲಿದೆ .
ಈ ಸ್ಪೀಕರ್ ನ specifications ಬಗ್ಗೆ ಗಮನ ಹರಿಸುವುದಾದರೆ , ಇದರಲ್ಲಿ ಬ್ಲೂ ಟೂತ್ 5.0 ಟೆಕ್ನಾಲಾಜಿಯನ್ನು ಬಳಸಲಾಗಿದೆ. ಯಾವುದೇ ಅಡೆ ತಡೆಯಿಲ್ಲದೆ 10 ಮೀ. ನಷ್ಟು ದೂರದವರೆಗೂ ಸುಲಭವಾಗಿ ನಿಮ್ಮ ಫೋನ್/ಲ್ಯಾಪ್-ಟಾಪ್ ಅನ್ನು ಕನೆಕ್ಟ್ ಮಾಡಬಹುದು. ಇನ್ಫಿನಿಟಿ ಫ್ಯೂಜ್ ಪಿಂಟ್ ಅತಿ ಸಣ್ಣ ಸ್ಪೀಕರ್ ಆಗಿದ್ದು ಇದರ ತೂಕ ಕೇವಲ 65ಗ್ರಾಂ ಮಾತ್ರ . ಸುಲಭವಾಗಿ ನಿಮ್ಮ ಜೇಬಿನಲ್ಲಿರಿಸಿಕೊಳ್ಳಬಹುದು.


ಸೌಂಡ್ ಕ್ವಾಲಿಟಿ ಬಗ್ಗೆ ಮಾತನಾಡುವುದಾದರೆ ಇನ್ಫಿನಿಟಿ ಫ್ಯೂಜ್ ಪಿಂಟ್ 2 ಆಯ್ಕೆಗಳನ್ನೊಂದಿದೆ deep bass, ಮತ್ತು normal. ಸೌಂಡ್ output 2.5 ವ್ಯಾಟ್ ಇದ್ದು ಸಣ್ಣ ಕೊಠಡಿಯಲ್ಲಿ ಉತ್ತಮ ಸೌಂಡ್ output ನೀಡಬಲ್ಲದು. ಸೌಂಡ್ clarity ಕೂಡ ಚೆನ್ನಾಗಿದೆ. ಇನ್ಫಿನಿಟಿ ಫ್ಯೂಜ್ ಪಿಂಟ್ನಲ್ಲಿರುವ deep bass ಆಯ್ಕೆ ಸಂಗೀತ ಪ್ರಿಯರಿಗೆ ಇಷ್ಟವಾಗವುದು. ಇನ್ಫಿನಿಟಿ ಫ್ಯೂಜ್ ಪಿಂಟ್ ಮೈಕ್ರೋಫೋನ್ (microphone) ಹೊಂದಿದ್ದು ನೀವು ಸುಲಭವಾಗಿ ಕರೆಗಳನ್ನು ಸ್ವೀಕರಿಸಿ ಮಾತನಾಡಬಹುದು. ಮೈಕ್ರೋಫೋನ್ (microphone) ಉತ್ತಮ ಕ್ವಾಲಿಟಿಯದ್ದಾಗಿದ್ದು ನನ್ನ ಟೆಸ್ಟಿಂಗ್ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ. ಜೊತೆಗೆ ಗೂಗಲ್ ವಾಯ್ಸ್ ಅಸಿಸ್ಟೆಂಟ್ (google voice assistant) ಕೂಡ ಅಳವಡಿಸಲಾಗಿದೆ.
ಇನ್ಫಿನಿಟಿ ಫ್ಯೂಜ್ ಪಿಂಟ್ 480 mAh ಬ್ಯಾಟರಿ ಹೊಂದಿದ್ದು ಸಂಪೂರ್ಣ ಚಾರ್ಜ್(100%) ನಿಂದ 5 ಗಂಟೆಗಳ ಕಾಲ ಸುಲಭವಾಗಿ ಉಪಯೋಗಿಸಬಹುದು. ನನ್ನ ಟೆಸ್ಟಿಂಗ್ ಸಮಯದಲ್ಲಿ ಬ್ಯಾಟರಿ ಲೊ ಆಗುವ ಮುನ್ನ ನಾನು 2 ಸಿನಿಮಾ, (ಸುಮಾರು 4 ಘಂಟೆ 45 ನಿಮಿಷ ) ವೀಕ್ಷಿಸಿದೆ. ಚಾರ್ಜ್ ಮಾಡಲು micro USB ಕೇಬಲ್ ಸ್ಪೀಕರ್ ಜೊತೆಗೆ ಲಭ್ಯವಿದ್ದು , 0-100% ಚಾರ್ಜ್ ಮಾಡಲು ಸುಮಾರು 2.5 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ .
ಇನ್ಫಿನಿಟಿ ಫ್ಯೂಜ್ ಪಿಂಟ್ನಲ್ಲಿ ಕೇವಲ ಒಂದು ಬಟನ್ ಲಭ್ಯವಿದ್ದು ಅದನ್ನೇ ಪ್ಲೇ /ಪೌಸ್(ದೀರ್ಘವಾದ ಪ್ರೆಸ್) , ಆನ್ /ಆಫ್(ಪ್ರೆಸ್ ) ಮತ್ತು ಕರೆಗಳನ್ನು ಸ್ವೀಕರಿಸಲು ಬಳಸಿರುವ ರೀತಿ ಶ್ಲಾಘನೀಯ. volume ಕಂಟ್ರೋಲ್ ಗೆ ಬಟನ್ ಗಳಿಲ್ಲ
volume ಕಂಟ್ರೋಲ್ ಬಟನ್ ಗಳಿಲ್ಲದಿರುವುದು ಕಡೆಗಣಿಸಿದರೆ ಇನ್ಫಿನಿಟಿ ಫ್ಯೂಜ್ ಪಿಂಟ್ ಸ್ಪೀಕರ್ 1000ರೂ ಒಳಗೆ ಒಂದು ಒಳ್ಳೆಯ ಆಯ್ಕೆ.