ಶತ್ರು ಪಡೆಯ RADAR ಉಪಕರಣಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸಬಲ್ಲ ನಮ್ಮ ಭಾರತ ನಿರ್ಮಿತ ಮೊದಲ ಆ್ಯಂಟಿ ರೇಡಿಯೇಶನ ಮಿಸೈಲ್ ‘ರುದ್ರಂ-1’. ಡಿ.ಆರ್.ಡಿ.ಒ.(DRDO) ವಿಜ್ಞಾನಿಗಳು ರುದ್ರಂ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಭಾರತದ ವಾಯುಪಡೆಗೆ ಆನೆಬಲ ಬಂದಂತಾಗಿದೆ.
ರುದ್ರಂ ಆಕಾಶದಿಂದ ಚಿಮ್ಮಿ ಭೂಮಿಯೆಡೆಗಿನ RADAR ಅನ್ನು ಧ್ವಂಸಮಾಡಬಲ್ಲ ಮಿಸೈಲ್. ಪರೀಕ್ಷೆಯ ಸಂದರ್ಭದಲ್ಲಿ SU-30 MKI ಯುದ್ಧ ವಿಮಾನಕ್ಕೆ ಅಳವಡಿಸಿಲಾಗಿದ್ದ ರುದ್ರಂ, ಒಡಿಶಾದ ವೀಲರ್ ದ್ವೀಪದಲ್ಲಿರಿಸಿದ್ದ RADAR ಉಪಕರಣವನ್ನು ಅತಿ ನಿಖರವಾಗಿ ಹೊಡೆದುರುಳಿಸಿದೆ ಎಂದು DRDO ತಿಳಿಸಿದೆ. ರುದ್ರಂ ನ ಮುಂಭಾಗದಲ್ಲಿ INS-GPS ಅಳವಡಿಸಲಾಗಿದ್ದು, ಪ್ರೋಗ್ರಾಮ್ ಮಾಡಲಾದ ಪ್ರಕಾರ ಹಲವಾರು frequencyಗಳ ತರಂಗಗಳನ್ನು ಪತ್ತೆ ಮಾಡಬಲ್ಲದು.
ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡುವ ಮೂಲಕ ಡಿ.ಆರ್.ಡಿ.ಒ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ.
ಈ ಮೂಲಕ ಭಾರತ ತನ್ನ ವಾಯುಪಡೆಯ ತಾಕತ್ತು ಪ್ರದರ್ಶಿಸಿದ್ದು, ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದಂತಾಗಿದೆ. ಇತ್ತೀಚೆಗಷ್ಟೇ ಭಾರತ ಹೈಪರ್ಸಾನಿಕ್ ತಂತಜ್ಞಾನ ಹೊಂದಿರುವ ವಿಶ್ವದ 4ನೇ ದೇಶವಾಗಿ ಹೊರಹೊಮ್ಮಿತ್ತು.
ಮೂಲ ಸುದ್ದಿ : PIB India