ನಮ್ಮ ಬೆಂಗಳೂರು ಹಲವಾರು startup ಕಂಪನಿಗಳ ತವರು. ಹೊರಬಾನು(ಬಾಹ್ಯಾಕಾಶ) ಅಧ್ಯಯನದ startup ಆದ ‘Bellatrix Aerospace’ ಕಂಪನಿಯು ದೇಶದ ಮೊದಲ space taxi, Orbital Transfer Vehicle(OTV) ಅಭಿವೃದ್ಧಿಗೊಳಿಸುತ್ತಿದ್ದು, ಸಣ್ಣ ಉಪಗ್ರಹಗಳನ್ನು ಭೂಮಿಯ ವಿವಿಧ ಕಕ್ಷೆಯಲ್ಲಿರಿಸಲು ನೆರವಾಗಲಿದೆ.
ಈ ಹಿಂದೆ ಚಿಕ್ಕ ಉಪಗ್ರಹಗಳನ್ನು ದೊಡ್ಡ ಉಪಗ್ರಹಗಳೊಂದಿಗೆ ಉಡಾವಣೆ ಮಾಡಲಾಗುತ್ತಿತ್ತು. ಎರಡೂ ಉಪಗ್ರಹಗಳನ್ನು ಒಂದೇ ಕಕ್ಷೆಯಲ್ಲಿ ಇರಿಸಲಾಗುತ್ತಿತ್ತು, ಒಂದು ವೇಳೆ ಚಿಕ್ಕ ಉಪಗ್ರಹದ ಕಕ್ಷೆ ಬೇರೆಯಾಗಿದ್ದರೆ ಇನ್ನು ಹೆಚ್ಚಿನ ಇಂದನವನ್ನು ಬಳಸಿ ನಿರ್ದಿಷ್ಟ ಕಕ್ಷೆಗೆ ಸೇರಿಸಬೇಕಾಗಿತ್ತು. ಇದರಿಂದ ಚಿಕ್ಕ ಉಪಗ್ರಹಗಳ ಆಯಸ್ಸು ಕಡಿಮೆಯಾಗುವುದಲ್ಲದೆ ಬಹಳದ ದುಬಾರಿ ಪ್ರಕ್ರಿಯೆ ಕೂಡ ಆಗಿತ್ತು.
ಆದರೆ Bellatrix Aerospace ನ OTVಯನ್ನು ಬಳಸಿ ಅಗ್ಗದ ಬೆಲೆಯಲ್ಲಿ ಚಿಕ್ಕ ಉಪಗ್ರಹಗಳನ್ನು ಅವುಗಳ ನಿರ್ದಿಷ್ಟ ಕಕ್ಷೆಯಲ್ಲಿ ಇಡಬಹುದಾಗಿದ್ದು, ಅಂತರಿಕ್ಷಕ್ಕೆ ಕಳುಹಿಸುವ Taxi ಸೇವೆಯ ರೀತಿಯಲ್ಲಿ ಕೆಲಸ ಮಾಡಲಿದೆ.
ಈ ಹಿಂದೆ Bellatrix Aerospace ವಿದ್ಯುತ್ ಹಾಗು ರಾಸಾಯನಿಕ ಶಕ್ತಿಯಿಂದ ಕೆಲಸ ಸಾಧಿಸ ಬಲ್ಲ thruster ಗಳನ್ನು ವಿನ್ಯಾಸಗೊಳಿಸಿದ್ದರು. ಇವುಗಳಿಂದ ಉಪಗ್ರಹಗಳ ವೇಗ, ದಿಕ್ಕುಗಳನ್ನು ನಿಯಂತ್ರಿಸಬಹುದಾಗಿತ್ತು. ಈ ಅಧ್ಯಯನವನ್ನೇ ಮುಂದುವರೆಸಿ ಈಗ OTV ಸಿದ್ಧಗೊಳಿಸಲು ಎಲ್ಲಾ ತಯಾರಿ ನಡೆಸಿದೆ.
ಈ ಹಿನ್ನೆಲೆಯಲ್ಲಿ Bellatrix Aerospace ಮತ್ತು Skyroot Aerospace ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಪ್ರಕಾರ Skyroot ನ ರಾಕೆಟ್ ವಿಕ್ರಮ್ ಬಳಸಿ Bellatrix 2023 ರಲ್ಲಿ ತನ್ನ ಮೊದಲ OTV ಬಳಸಿ ಚಿಕ್ಕ ಉಪಗ್ರಹಗಳನ್ನು ಹೊರಬಾನಿನತ್ತ ಕಳಿಸಲಿದೆ.
ಕಳೆದ ವರ್ಷ ಭಾರತ ಸರ್ಕಾರ ಅಂತರಿಕ್ಷದ ಉಸಾಬರಿಯನ್ನು ಖಾಸಗಿ ಮಾಡಿದ ತಕ್ಷಣ, ಹಲವಾರು startup ಗಳು ಜನ್ಮ ತಾಳಿದ್ದವು. ಇನ್ನುಮುಂದೆ ಸ್ಪರ್ಧಾತ್ಮಕ ಬದಲಾವಣೆಗಳು ಹೊರಬಾನು(ಬಾಹ್ಯಾಕಾಶ) ವಿಭಾಗದಲ್ಲಿ ಕಾಣಸಿಗಲಿವೆ.
ಮೂಲ ಸುದ್ದಿ: economictimes