ಭಾರತವು Ola ಮತ್ತು Uberಗೆ, ತರಗು ಹಾಗು surge pricing ಮೇಲೆ ನಿಯಮಗಳನ್ನು ನಿಗದಿಪಡಿಸಿದೆ

Share

Photo by Dan Gold on Unsplash

ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಸೇವೆ ಒದಗಿಸುವ ಅಪ್ಲಿಕೇಶನ್ ಆಧಾರಿತ ಸಂಸ್ಥೆಗಳು ಭಾರತದಲ್ಲಿ ವಿಧಿಸುವ ದರದಲ್ಲಿ ಕೇವಲ 20% ವರೆಗೆ ಶುಲ್ಕವನ್ನು ತರಗು(commission) ಪಡೆಯಬಹುದು ಎಂದು ಭಾರತ ಸರ್ಕಾರದ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಬೇಡಿಕೆ ಹೆಚ್ಚಿದ್ದ ಸಮಯದಲ್ಲಿ ವಿಧಿಸುವ surge pricing ಮೇಲೆ ಕೂಡ ನಿಯಂತ್ರಣ ತಂದಿದೆ. ಓಲಾ, ಉಬರ್ ಮತ್ತು ಇತರ ಯಾವುದೇ ಪ್ರಯಾಣ ಮಾಡಲು ಉಪಯೋಗಿಸುವ ಸಂಸ್ಥೆಯು ಮೂಲ ಶುಲ್ಕದ ಗರಿಷ್ಠ 1.5 ಪಟ್ಟು ಮಾತ್ರ ವಿಧಿಸಬಹುದು. ಬೇಕಾದರೆ ಅವರು ತಮ್ಮ ಸೇವೆಗಳನ್ನು ಮೂಲ ಶುಲ್ಕದ 50% ದರದಲ್ಲಿ ನೀಡಲು ಆಯ್ಕೆ ಮಾಡಬಹುದು.

ಇದಲ್ಲದೆ ride cancel ಮಾಡಿದಾಗ ಗ್ರಾಹಕ ಅಥವಾ ಚಾಲಕನಿಗೆ ಒಟ್ಟು ಶುಲ್ಕದ 10% ರಷ್ಟು, ಗರಿಷ್ಠ 100 ರೂ.ಗಳವರಗೆ ಮಾತ್ರ ದಂಡ ವಿಧಿಸಬಹುದು ಎಂದು ಸೂಚಿಸಿದೆ. 

ದಿನದಲ್ಲಿ 12 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಚಾಲಕರಿಗೆ ಅನುಮತಿ ಇರುವುದಿಲ್ಲ ಮತ್ತು ಕಂಪನಿಗಳು ಅವರಿಗೆ ವಿಮಾ ರಕ್ಷಣೆಯನ್ನು ಒದಗಿಸಬೇಕು ಎಂದು ನಿಯಮಗಳಲ್ಲಿ ಹೇಳಿದೆ.

ಮೂಲಗಳ ಪ್ರಕಾರ ಓಲಾ ಮತ್ತು ಉಬರ್‌ ಚಾಲಕರಿಗೆ ಮೂಲ ಶುಲ್ಕದ 74% ರಷ್ಟು ಮಾತ್ರ ಲಭಿಸುತಿತ್ತು, ಆದರೆ ಹೊಸ ನಿಯಮದಂತೆ ಕನಿಷ್ಠ 80% ಸಿಗುತ್ತದೆ.

ಹೊಸ ಮಾರ್ಗಸೂಚಿಗಳ ಪರಿಣಾಮ ಕಂಪನಿಗಳ ಲಾಭದಲ್ಲಿ ಇಳಿಮುಖವಾಗಳಿದೆ. ಆದ್ದರಿಂದ ಸವಾರಿ ಶುಲ್ಕದಲ್ಲಿ ಹೆಚ್ಚಳವಾದರೆ ಅಚ್ಚರಿಯೇನಿಲ್ಲ. ಇವನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಕಾದುನೋಡಬೇಕು.

ಮೂಲ ಸುದ್ದಿ: Techcruch