ಭಾರತ ಈಗ ಹೈಪರ್ಸೋನಿಕ್ ಮಿಸೈಲ್ ತಂತ್ರಜ್ಞಾನ ಹೊಂದಿರುವ ವಿಶ್ವದ 4ನೇ ರಾಷ್ಟ್ರ (India is the 4th country in the world to have hypersonic missile technology)

Share

ಭಾರತ ಸೆಪ್ಟೆಂಬರ್ 7ರಂದು ಹೈಪರ್ಸೋನಿಕ್ ವಾಹನವನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಹೈಪರ್ಸೋನಿಕ್ ಎಂದು ಪರಿಗಣಿಸಲು ವಾಹನವು ಶಬ್ದದ ವೇಗಕ್ಕಿಂತ (340ಮೀ./ಸೆಕೆಂಡ್) 5 ಪಟ್ಟು ಹೆಚ್ಚಿನ ವೇಗದಲ್ಲಿರಬೇಕು , 5 ಮ್ಯಾಕ್ ( 5 mach ) ವೇಗ ಹೊಂದಿರಬೇಕು. ಭಾರತ ಪರೀಕ್ಷಿಸಿದ ವಾಹನವು 6 ಮ್ಯಾಕ್ ವೇಗ ಹೊಂದಿದೆ(ಸುಮಾರು 2ಕಿಮೀ/ಸೆಕೆಂಡ್ ) .

ಭಾರತದ ಡಿ. ಆರ್. ಡಿ. ಒ. (DRDO) ವಿಜ್ಞಾನಿಗಳು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಹೈಪೆರ್ಸನೋನಿಕ್ ಮಿಸೈಲ್ ಗಳು ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿಸಿದರು. ಪ್ರಧಾನಿ ಮೋದಿ ಸೇರಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ DRDO ವಿಜ್ಞಾನಿಗಳಿಗೆ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.

ರಷ್ಯಾ, ಚೀನಾ ಮತ್ತು ಅಮೇರಿಕಾ ದೇಶಗಳು ಈಗಾಗಲೇ ಈ ತಂತ್ರಜ್ಞಾನ ಹೊಂದಿದ್ದು ಭಾರತ ಈ ಗುಂಪಿಗೆ ಹೊಸ ಸೇರ್ಪಡೆ. ಈ ಮೂಲಕ ಭಾರತದ ರಕ್ಷಣಾ ಪಡೆಗಳಿಗೆ ಆನೆ ಬಲ ಬಂದಂತಾಗಿದೆ.