ಕೋವಿಡ್ 19 ಕಾರಣದಿಂದ ವಿಶ್ವದಾದ್ಯಂತ ಲಾಕ್ ಡೌನ್ ಬಹಳ ಸಮಯದವರೆಗೂ ಜಾರಿಯಲ್ಲಿತ್ತು. ಜನರು ತಮ್ಮ ಮನೆಯ 4 ಗೋಡೆಗೆ ಸೀಮಿತವಾದುದರಿಂದ, ಡಿಜಿಟಲ್ ಮಾರುಕಟ್ಟೆಯಲ್ಲಿ ವಿಡಿಯೋ ಕರೆಗಳನ್ನು ಮಾಡಬಹುದಾದ ಅಪ್ಲಿಕೇಶನ್ ಗಳಿಗೆ ಬೇಡಿಕೆ ಹೆಚ್ಚಾಯ್ತು. ಈ ಅವಕಾಶವನ್ನು ಸರಿದುಪಯೋಗಪಡಿಸಿಕೊಂಡ ಅಪ್ಲಿಕೇಶನ್ ಗಳಲ್ಲಿ ಜೂಮ್ ಪ್ರಮುಖವಾದದ್ದು.
ಜೂಮ್ ನಲ್ಲಿ ಬರೋಬ್ಬರಿ 100 ಮಂದಿ ವಿಡಿಯೋ ಕರೆಯಲ್ಲಿ ಪಾಲ್ಗೊಳ್ಳಬಹುದು. ಜೂಮ್ ಆಂಡ್ರಾಯ್ಡ್ ಅಪ್ಲಿಕೇಶನ್ ಗೆ ಅಪ್ಡೇಟ್ ಬಿಡಲಾಗಿದ್ದು, ಪ್ರಮುಖವಾದವನ್ನು ಈ ಲೇಖನದಲ್ಲಿ ಹೇಳಲಿದ್ದೆನೆ.
ಇನ್ನು ಮುಂದೆ ಬಳಕೆದಾರರು ತಮ್ಮ ವಿಡಿಯೋ ಕರೆಯ ಹಿನ್ನೆಲೆಯನ್ನು ತಮ್ಮ ಇಚ್ಛೆಗನುಸಾರ ಬದಲಿಸಬಹುದು. ಹಲವು ಬಣ್ಣದ ಹಿನ್ನೆಲೆಗಳು ಅಪ್ಲಿಕೇಶನ್ ನಲ್ಲಿ ಲಭ್ಯವಿವೆ. ಇಲ್ಲವಾದಲ್ಲಿ ನಿಮಗಿಷ್ಟವಾದ ಫೋಟೋವನ್ನು ಫೋನಿನ ಗ್ಯಾಲರಿ ಮೂಲಕ ಆಯ್ದುಕೊಳ್ಳಬಹುದು.
ಕರೆಯ ಹಿನ್ನೆಲೆಗೆ ವಿಡಿಯೋವನ್ನು ಆಯ್ದುಕೊಳ್ಳುವ ಅನುಕೂಲ ಸದ್ಯಕ್ಕೆ ವಿಂಡೋಸ್ ಅಪ್ಲಿಕೇಶನ್ ಗೆ (ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ) ಮಾತ್ರ ಸೀಮಿತ . ಇದರೊಟ್ಟಿಗೆ ಹೊಸ ಅಪ್ಡೇಟ್ ನಲ್ಲಿ ಜೂಮ್ ಕ್ಯಾಲಂಡರ್ ಕೂಡ ಅಳವಡಿಸಿದೆ. ಇದರಿಂದ ಕರೆಗಳನ್ನು ದಿನಾಂಕ ಮತ್ತು ಸಮಯಕ್ಕೆ ಯೋಜಿಸಲು ಸುಲಭವದಂತಾಗಿದೆ. ಉಳಿದಂತೆ ಫೋನಿನ/ಲ್ಯಾಪ್ಟಾಪ್/ ಕಂಪ್ಯೂಟರ್ ನ ಆಡಿಯೋ ಕೂಡ ಶೇರ್ ಮಾಡುವ ಆಯ್ಕೆ ದೊರತಿದೆ. ಸಂಪೂರ್ಣ ಅಪ್ಡೇಟ್ ನ ಮಾಹಿತಿಗೆ zoom help centre ಗೆ ಭೇಟಿ ಕೊಡಿ.
ಈ ಹಿಂದೆ ಗೂಗಲ್ ಮೀಟ್ ಹೊಸ ಅಪ್ಡೇಟ್ ನಲ್ಲಿ ವಿಡಿಯೋ ಕರೆಗಳ ಹಿನ್ನೆಲೆಯನ್ನು ಬ್ಲರ್ ಮಾಡುವ ಆಯ್ಕೆ ಹೊರಬಿಟ್ಟಿತ್ತು. ಹೀಗೆ ಗೂಗಲ್ ಮೀಟ್ ಮತ್ತು ಜೂಮ್ ಬಳಕೆದಾರರ ವಿಡಿಯೋ ಕರೆಗಳ ಅನುಭವವನ್ನು ಉತ್ತಮಗೊಳಿಸಲು ಪೈಪೋಟಿ ನಡೆಸಿವೆ.
ಸುದ್ದಿಯ ಮೂಲ: zoom help centre