ನಿಮ್ಮ ಲ್ಯಾಪ್ಟಾಪ್/PCಯಲ್ಲಿ RAM (Random Access Memory) ಎಷ್ಟು ಮುಖ್ಯ?

Share

ನೀವು ಲ್ಯಾಪ್ಟಾಪ್ ಖರೀದಿಸುವ ಮುನ್ನ ನೋಡುವ ಮುಖ್ಯ ಅಂಶಗಳಲ್ಲಿ RAM ಕೂಡ ಒಂದು.

ಇದು ಹೇಗೆ ನಿಮ್ಮಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಯೋಣ.

ನಾವು ಕಂಪ್ಯೂಟರ್ ನಲ್ಲಿ ಯಾವುದೇ ಕೆಲಸ ಮಾಡಿದರು ಆ ಡೇಟಾ ಪ್ರೋಸೆಸ್ ಆಗುವ ಮೊದಲು RAM ನಲ್ಲಿ ಸ್ಟೋರ್ ಆಗುತ್ತದೆ. 

ಈ ಕಾರಣ ನಿಮ್ಮ ಕಂಪ್ಯೂಟರ್ ನಲ್ಲಿ ಎಷ್ಟು ಹೆಚ್ಚು RAM ಇರುತ್ತದೋ ಅಷ್ಟು ಹೆಚ್ಚು ಅಪ್ಲಿಕೇಶನ್ ಗಳನ್ನು ಒಂದೇ ಬಾರಿಗೆ ತೆರೆಯಬಹುದು.

RAM ನ ಅವತರಣಿಕೆಗಳು

RAMಗಳಲ್ಲಿ ಅವು ಬೆಂಬಲಿಸುವ ವೇಗದ ಮೇಲೆ ವಿಂಗಡಿಸಲಾಗುತ್ತದೆ. ಇವುಗಳಲ್ಲಿ DDR6 RAM ಇತ್ತೀಚಿನದು ಹಾಗು ಇದು 19-21 Gbit/s ವರೆಗಿನ ವೇಗ ಹೊಂದಿದೆ. 

RAM ಕೊಳ್ಳುವಾಗ ನೆನಪಿಡಬೇಕಾದ ಅಂಶಗಳು:

  • ನೀವು ಆಗಲೇ ಇರುವ PCಗೆ ಇನ್ನಷ್ಟು RAM ಜೋಡಿಸಲು ಬಯಸಿದರೆ, ನಿಮ್ಮ Mother Board ನ ಪ್ರಾಡಕ್ಟ್ ಪೇಜ್ ಗೆ ಹೋಗಿ, ಗರಿಷ್ಟ ಏಷ್ಟು ವೇಗದ RAMಗೆ ಬೆಂಬಲವಿದೆ ಎಂದು ಪರಿಶೀಲಿಸಿ. ಇದಕ್ಕಿಂತ  ಹೆಚ್ಚಿನ ವೇಗದ RAM ಕೊಂಡರೆ ಅದರ ಪೂರ್ಣ ಸಾಮರ್ಥ್ಯದಷ್ಟು ಬಳಸಲಾಗುವುದಲ್ಲ. (Mother Board ಬಾಕ್ಸ್ ನ ಮೇಲೆ ಅಥವಾ ಬೋರ್ಡ್ ನಲ್ಲಿ ನಿಮ್ಮ version ಸಿಗುತ್ತದೆ)
  • ನೀವು ನಿಮ್ಮ laptopಗೆ ಹೆಚ್ಚಿನ RAM ಹಾಕುವುದಾದರೆ, ಮೊದಲು Laptopನಲ್ಲಿ ಮತ್ತೊಂದು RAM ಹಾಕಲು ಜಾಗ ಇದೆಯೇ ಎಂದು ಗೂಗಲ್ ಮಾಡಿ ನೋಡಿ. ಇದ್ದ ಪಕ್ಷದಲ್ಲಿ, ನಿಮ್ಮ laptopನ ಪ್ರಾಡಕ್ಟ್ ಪೇಜ್ ಗೆ ಹೋಗಿ ಎಷ್ಟು ವೋಲ್ಟೇಜ್ ನ RAM ಬೇಕು ಎಂಬುದನ್ನು ನೋಡಿ, ಅಷ್ಟೇ voltageನ RAM ಖರೀದಿಸಿ.
  • ನಿಮ್ಮಬಳಿ ಈಗಾಗಲೇ 4 GB RAM ಇದ್ದಲ್ಲಿ, ಮತ್ತೊಂದು 8 GBಯ RAM ಹಾಕಿದಲ್ಲಿ, ನಿಮ್ಮಕಂಪ್ಯೂಟರ್ ಕಡಿಮೆ ವೇಗದಲ್ಲಿ RAM ಬಳಸುತ್ತದೆ. ಎರಡೂ RAM ಕಡ್ಡಿಗಳು ಒಂದೇ ಗಾತ್ರದ್ದಾಗಿದ್ದು, ಕೆಳಗೆ ತೋರಿಸಿರುವ A2 – B2 ರೀತಿಯಲ್ಲಿ ಹಾಕಿದಲ್ಲಿ, ನಿಮ್ಮ ಸಿಪಿಯು ಸಮಾನಾಂತರವಾಗಿ ಎರಡೂ RAMಗಳಿಂದ ಗರಿಷ್ಟ ವೇಗದಲ್ಲಿ ಡೇಟಾ ಪಡೆಯುತ್ತದೆ. 
RAM-configuration
RAM ಜೋಡಿಸುವ ವಿಧಾನ