ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆ ಎಷ್ಟು ಮುಖ್ಯ(importance of Kannada usage in information and technology)

Share

ಸ್ನೇಹಿತರೆ ನಾವು, ಕನ್ನಡದಲ್ಲಿ ಟೆಕ್ನಾಲಜಿ ಪೇಜ್ ಅನ್ನು ಪ್ರಾರಂಭಿಸಲು ಮುಖ್ಯ ಕಾರಣ ಕೆ. ಪಿ. ಪೂರ್ಣಚಂದ್ರ ತೇಜಸ್ವಿ. ನಾವು(ಕನ್ನಡಿಗರು) ಕನ್ನಡವನ್ನು ಮಾಹಿತಿ ಮತ್ತು ತಂತ್ರಜ್ಞಾನ ರಂಗದಲ್ಲಿ( ವೆಬ್ಸೈಟ್ಸ್ ಮತ್ತು ಸಾಫ್ಟ್ವೇರ್ ಇತ್ಯಾದಿ) ಬಳಸದೆ ಹೋದರೆ ಕನ್ನಡ ನಶಿಸಿಹೋಗುತ್ತದೆ ಎಂಬ ತೇಜಸ್ವಿಯವರ ಅಭಿಪ್ರಾಯ ನಮ್ಮ ಪೇಜ್ ನ ಬರಹಗಾರರಲ್ಲಿ ಒಂದು ಕಿಚ್ಚು ಹಚ್ಚಿಸಿತು ಎಂದರೆ ತಪ್ಪಾಗಲಾರದು.

ತೇಜಸ್ವಿಯವರು ಕನ್ನಡ ಸಾಫ್ಟ್ವೇರ್ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು, ಸೆಪ್ಟೆಂಬರ್ 8 ತೇಜಸ್ವಿಯವರ ಜನ್ಮದಿನ. 2007 ಇಸವಿಯಲ್ಲಿ ತೇಜಸ್ವಿಯರು ಒಂದು ಸಂದರ್ಶನದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಬಗ್ಗೆ ಮಾತನಾಡಿರುವ ತುಣುಕನ್ನು ಇಲ್ಲಿ ಹೇಳಲು ಇಷ್ಟಪಡುತ್ತೇನೆ .

“ಇ- ಆಡಳಿತದಲ್ಲಿ ಕನ್ನಡ ಬಳಕೆಗೆ ಸೂಕ್ತ ಸಾಫ್ಟ್ವೇರ್ ಬೇಕು. ಇಲ್ಲವಾದರೆ ನೀವು (ಕನ್ನಡಿಗರು ) ಫಿನಿಷ್. ನಿಮ್ಮ ಭಾಷೆಯಲ್ಲೇ ಇಲೆಕ್ಟ್ರಾನಿಕ್ ಮೀಡಿಯಾ ಬಳಸಲು ಸಾಧ್ಯವಾ? ಮೊದಲು ನೋಡಿ”.

” ಒಂದು ಭಾಷೆ ಬಳಕೆ ತಪ್ಪಿಸುವುದರಿಂದ ಅದನ್ನು ಕೊಂದುಹಾಕೋದು ಸುಲಭ ಕಣ್ರಿ. ಇದೇ ಈಗಿನ ಅಪಾಯ. ಹಾಗಂತ ಹೇಳಿದರೆ ಯಾರು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಹೌದಾ ? ನೀವು ಹೇಳಿದ ಮೇಲೆ ನಿಜಾನೆ ಇರಬೇಕು ಬಿಡಿ ಅಂತಾರೆ. ಏನು ಹೇಳೋಣ? ಖಡ್ಗಾಮೃಗಾ ಎನ್ನುವ ಪ್ರಾಣಿ ಸಂತತಿ ನಶಿಸುತ್ತಾ ಬಂದಿದೆ. ಮನುಷ್ಯ , ಪ್ರಾಣಿ ಸಂತತಿಗೆ ಇರೋ ಹಾಗೆ ಭಾಷೆಗೂ ಆಯಸ್ಸು ಇದೆಯಾ? ಕನ್ನಡ ಭಾಷೆ ಮುದಿಯಾಗಿ ಹೋಯಿತಾ? ಎಷ್ಟು ವರ್ಷ ಬದುಕಿರುತ್ತೋ ಅಂತ ಅನುಮಾನ ಕಾಣ್ತಿದೆ ”

ಅವರ ಹುಟ್ಟುಹಬ್ಬದ ದಿನವಾದ ಇಂದು ನಮ್ಮ ಪೇಜ್ ಆರಂಭಿಸಲು ಕಾರಣವಾದರನ್ನು ನೆನೆಯಬೇಕೆಂದಿನಿಸಿತು. ನೀವು ಆಸಕ್ತ ಪುಸ್ತಕ ಓದುಗರಾಗಿದ್ದಲ್ಲಿ ತೇಜಸ್ವಿಯವರ ಪುಸ್ತಕಗಳನ್ನು ಓದಿ . ನಮಗೆ ಪ್ರಿಯವಾದ ತೇಜಸ್ವಿ ಪುಸ್ತಕಗಳೆಂದರೆ ಕರ್ವಾಲೋ , ಅಲೆಮಾರಿಯ ಅಂಡಮಾನ್ ಮತ್ತು ಮಹಾ ನದಿ ನೈಲ್, ಮಹಾಪಲಾಯನ , ಪ್ಯಾಪಿಲಾನ್, ಚಿದಂಬರ ರಹಸ್ಯ ಇತ್ಯಾದಿ …