ಭಾರತೀಯ ವಿಜ್ಞಾನ ಸಂಸ್ಥೆಯ, instrumentation and applied science ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸಂಜೀವ್ ಸಂಬಂದನ್ ಹಾಗು ಅವರ ತಂಡ “ಎಲೆಕ್ಟ್ರಾನಿಕ್ ಮಾತ್ರೆ”ಯ ಅನ್ವೇಷಣೆಗೆ ರಾಷ್ಟೀಯ ಜೈವಿಕ ಉದ್ಯಮಶೀಲತೆ(national Bio Entrepreneurship) ಆಯೋಜಿಸಿದ್ದ ಸ್ಪರ್ಧೆಯ 11 ವಿಜೇತರಲ್ಲಿ ಸ್ಥಾನ ಪಡೆದಿದ್ದರೆ.
Electronic ಮಾತ್ರೆಯಲ್ಲಿ ಹಲವಾರು ಉಪಯುಕ್ತ sensorಗಳನ್ನು ಬಳಸಲಾಗಿದ್ದು ಇವು ಮಾನವನ ಜೀರ್ಣಾಂಗ ನಾಳ ದಲ್ಲಿ ಹಾದುಹೋಗಿ, ವೈದ್ಯಕೀಯವಾಗಿ ಪ್ರಮುಖವಾದ ಮಾಹಿತಿಯನ್ನು ರವಾನಿಸುತ್ತದೆ. ತನ್ನ ಕೆಲಸ ಮುಗಿದ ನಂತರ ಮಾತ್ರೆಯು ಯಾವುದೇ ತೊಂದರೆ ಇಲ್ಲದೆ ಜೀರ್ಣಗೊಳ್ಳುತ್ತದೆ.
ಈ ಮಾತ್ರೆಯು ಪ್ರಮುಖವಾಗಿ sensors, Signal Modulation,battery ಮತ್ತು ಸಿಗ್ನಲ್ ರವಾನಿಸಲು ಬೇಕಾದ ಭಾಗಗಳನ್ನು ಹೊಂದಿದ್ದು, ಬಹುಪಾಲು ಐಸೋಮಲ್ಟ್ ನಿಂದ(Isomalt) ಮಾಡಲ್ಪಟ್ಟಿದೆ. ಐಸೋಮಲ್ಟ್ ಗೆ ಅತಿ ಸೂಕ್ಷ್ಮ ಪ್ರಮಾಣದಲ್ಲಿ ಲೋಹಗಳನ್ನು ಬಳಸಿ circuit ಮಾಡಲಾಗಿದ್ದು, ಬಳಕೆಗೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸಂಬಂದನ್ ತಿಳಿಸಿದರು.
ಇದುವರೆಗೆ ತ್ರಾಸದಾಯಕ ಮತ್ತು ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದ್ದ ಎಂಡೊಸ್ಕೊಪಿ (Endoscopy) ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಮಾತ್ರೆಯಿಂದ ಸುಲಭವಾಗಲಿದೆ ಎಂದು ಪರಿಗಣಿಸಿ ಬಹುಮಾನ ನೀಡಲಾಗಿದೆ.
ಮೂಲ ಸುದ್ದಿ: IISc ಮತ್ತು Deccan Herald