IISc ಸಂಶೋಧನೆ: ಚರ್ಮದ ಕ್ಯಾನ್ಸೆರ್ ಗಡ್ಡೆಯನ್ನು ನಶಿಸಬಲ್ಲ ಸ್ಮಾರ್ಟ್ ಬ್ಯಾಂಡೇಜ್(IISc researchers developed a smart bandage which can cure skin cancer)

Share

ಕ್ಯಾನ್ಸರ್ ಎಂದಾಕ್ಷಣ ನಮ್ಮೆಲ್ಲರ ಮನದಲ್ಲೊಂದು ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಈ ಖಾಯಿಲೆ ಎಷ್ಟು ಮಾರಣಾಂತಿಕವೆಂದರೆ ಭಾರತ ಒಂದರಲ್ಲೇ ವರ್ಷಕ್ಕೆ ಸುಮಾರು 7 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ.

ಸೂರ್ಯನಿಂದ ಹೊರಬೀಳುವ ನೇರಳಾತೀತ ವಿಕಿರಣಗಳಿಂದ (ultraviolet radiation) ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ. ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(Indian Institute of Science) ವಿಜ್ಞಾನಿಗಳು ಮತ್ತು ಸಂಶೋಧಕರು ಅಯಸ್ಕಾಂತದ ನಾನೊಫೈಬರ್ ಗಳಿಂದ ಮಾಡಲಾದ ಬ್ಯಾಂಡೇಜ್ ಅನ್ನು ನಿರ್ಮಿಸಿದ್ದು ಇದು ಕ್ಯಾನ್ಸರ್ ಗಡ್ಡೆಯನ್ನು ಶಾಖದ ಉತ್ಪತ್ತಿಯಿಂದ ಕೊಲ್ಲುತ್ತದೆ.

ಈ ಬ್ಯಾಂಡೇಜ್ ಅನ್ನು ಅತಿ ವೇಗದಲ್ಲಿ ಬದಲಾಗುತ್ತಿರುವ ಕಾಂತೀಯ ಕ್ಷೇತ್ರಕ್ಕೆ(oscillating magnetic filed) ಒಳಪಡಿಸಿದಾಗ ಶಾಖ ಉತ್ಪತ್ತಿಯಾಗುತ್ತದೆ. ಇದರಿಂದ ಕ್ಯಾನ್ಸರ್ ಗಡ್ಡೆಯನ್ನು ಕರಗಿಸಲು ಸಹಕಾರಿಯಾಗಿದೆ.

ಈ ಹಿಂದೆಯೂ ಇದೇ ರೀತಿಯ ಪ್ರಕ್ರಿಯೆ ಸಂಶೋದನೆಯಲ್ಲಿತ್ತು ಆದರೆ ರಕ್ತ ಹೆಪ್ಪುಗಟ್ಟುವಿಕೆ, ರಕ್ತಸ್ರಾವದಂತ ಅನೇಕ ದುಷ್ಪರಿಣಾಮಗಳಿದ್ದವು. IISc ನಿರ್ಮಿತ ಬ್ಯಾಂಡೇಜ್ ಅನ್ನು ಕೃತಕವಾಗಿ ಚರ್ಮದ ಕ್ಯಾನ್ಸರ್ ಬರಿಸಿದ ಮಾನವವನ ಜೀವಕೋಶ ಹಾಗು ಇಲಿಗಳ ಮೇಲೆ ಪ್ರಯೋಗಿಸಿದ್ದು ಯಾವುದೇ ದುಷ್ಪರಿಣಾಮಗಳು ಕಂಡುಬಂದಿಲ್ಲ.

ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆಗೆ ಬಳಸುವ ಮುನ್ನ ಬಹಳಷ್ಟು ಪ್ರಯೋಗಗಳು ಮತ್ತು ಅಧ್ಯಯನ ಬಾಕಿಯಿವೆ. ಸ್ಮಾರ್ಟ್ ಬ್ಯಾಂಡೇಜ್ ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದು ವಿಶ್ವದಲ್ಲಿರುವ ಚರ್ಮದ ಕ್ಯಾನ್ಸರ್ ಪೀಡಿತರಿಗೆ ಆಶಾಕಿರಣ ಹೊಮ್ಮಿದಂತಾಗಿದೆ.

ಮೂಲ ಸುದ್ದಿ: IISc ವೆಬ್ಸೈಟ್