ನಿಮ್ಮ ಫೋನಿನಲ್ಲಿ ವಾಟ್ಸ್ ಅಪ್ ಅಪ್ಲಿಕೇಶನ್ ಇದ್ದು ಹೆಚ್ಚಿನ ವಿಷಯವನ್ನು ಟೈಪ್ ಮಾಡಲು ಕಷ್ಟವಾಗುತ್ತಿದ್ದರೆ ವಾಟ್ಸ್ ಅಪ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಬಳಸಬಹುದು. ಕಂಪ್ಯೂಟರ್ ನಲ್ಲಿ ದೊಡ್ಡ ಪರದೆ ಹಾಗು ಟೈಪ್ ಮಾಡಲು ಕೂಡ ಸುಲಭ. ವಾಟ್ಸ್ ಅಪ್ ಅನ್ನು ಕಂಪ್ಯೂಟರ್ ನಲ್ಲಿ ಬಳಸಲು ನಿಮ್ಮ ಫೋನಿನಲ್ಲಿ ವಾಟ್ಸ್ ಅಪ್ ಅಪ್ಲಿಕೇಶನ್ ಮತ್ತು ಇಂಟರ್ನೆಟ್ ಕನೆಕ್ಷನ್ ಹೊಂದಿರುವ ಕಂಪ್ಯೂಟರ್ ಇರಬೇಕು.
1. ಮೊದಲು ನಿಮ್ಮ ಕಂಪ್ಯೂಟರ್ ನ ಬ್ರೌಸರ್ ನಲ್ಲಿ web.whatspp.com ಗೆ ಭೇಟಿ ಕೊಡಿ. ನಿಮಗೆ QR code ಸ್ಕ್ರೀನ್ ಮೇಲೆ ಮೂಡಿ ಬರುತ್ತದೆ.

2. ನಿಮ್ಮ ಫೋನಿನಲ್ಲಿರು ವಾಟ್ಸ್ ಅಪ್ ಅಪ್ಲಿಕೇಶನ್ ನ, ಬಲತುದಿಯಲ್ಲಿರುವ 3 ಚುಕ್ಕಿಗಳ(settings) ಮೇಲೆ ಕ್ಲಿಕ್ಕಿಸಿ.

3. ನಂತರ Whatsapp Web ಆಯ್ಕೆ ಮೇಲೆ ಕ್ಲಿಕ್ಕಿಸಿ.

4. ನಿಮ್ಮ ಫೋನಿನಲ್ಲಿ QR scanner ಸ್ಕ್ಯಾನ್ ಮಾಡಲು ಸಿದ್ಧವಿರುತ್ತದೆ

5. web.whatspp.com ನಲ್ಲಿ ಲಭ್ಯವಿರುವ QR code ಸ್ಕ್ಯಾನ್ ಮಾಡಿ. ನೀವು ವಾಟ್ಸ್ ಅಪ್ ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಸವಿಯಬಹುದು. ಫೋನಿನ್ನಲ್ಲಿ ಬಳಸಿದಂತೆಯೇ ಇಲ್ಲಿ ಬಳಸಬಹುದು. ನಿಮ್ಮ ಸೆಶನ್ (session) ಮುಗಿದ ಮೇಲೆ 3 ಚುಕ್ಕಿಗಳ ಮೇಲೆ ಕ್ಲಿಕ್ಕಿಸಿ ಲಾಗ್ಔಟ್ ಮಾಡಲು ಮರೆಯದಿರಿ.

ಮುಂದಿನ ದಿನಗಳಲ್ಲಿ ವಾಟ್ಸ್ ಅಪ್ ವೆಬ್ ಗೆ ಆಡಿಯೋ ಮತ್ತು ವಿಡಿಯೋ ಕರೆಗಳ ಫೀಚರ್ ಕೂಡ ಬರಲಿದ್ದು ಈ ಬಗ್ಗೆ ತಿಳಿಯಲು ಈ ಲೇಖನ ಓದಿ.