ನಿಮ್ಮ ಫೋನ್ ನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ?

Share

ನೀವು ನಿಮ್ಮ ಫೋನಿನಲ್ಲಿ ಕನ್ನಡ ಸಂದೇಶಗಳನ್ನು ಕಳಿಸಲು ಇಷ್ಟಪಡುವುದಾದರೆ, ಕನ್ನಡವನ್ನುಇಂಗ್ಲಿಷಿನಲ್ಲಿ ಕಳಿಸುವುದಕ್ಕಿಂತ, ಕನ್ನಡ ಲಿಪಿಯಲ್ಲೇ ಬರೆದು ಕಳಿಸುವುದು ಉತ್ತಮ. ಈಗ ಮೊಬೈಲಿನಲ್ಲಿ ಕನ್ನಡ ಬರೆಯುವುದು ತುಂಬಾ ಸುಲಭ. ಅದು ಹೇಗೆ ಎಂದು ತಿಳಿಯೋಣ. 

ಆಂಡ್ರಾಯ್ಡ್(Android)

  • ಗೂಗಲ್ ನ G -Board ಕೀಲಿಮಣೆ

ನೀವು ಗೂಗಲ್ ನ ಕೀಬೋರ್ಡ್ ಅನ್ನು ಬಳಸುತಿದ್ದಲ್ಲಿ, ಸ್ಪೇಸ್ ಬಾರ್ ನ ಪಕ್ಕ ಇರುವ ಗ್ಲೋಬ್ ಐಕಾನ್  ಅನ್ನು ಒತ್ತಿ. ಇಲ್ಲಿ ಬರುವ ಮೆನುವಿನಲ್ಲಿ ಕೊನೆಗೆ ತೋರಿಸುವ “Language  Settings” ಆಯ್ಕೆ ಒತ್ತಿ. 

ಸ್ಕ್ರೀನ್ ನ ಕೊನೆಯಲ್ಲಿ add keyboard ಆಯ್ಕೆಯನ್ನು ಒತ್ತಿ , ಅಲ್ಲಿ ಕನ್ನಡ (Latin) ಭಾಷೆಯನ್ನು ಆರಿಸಿ.

ಇದಾದ ನಂತರ ನಿಮ್ಮ ಮೊಬೈಲ್ ನ ಕೀಬೋರ್ಡ್ನಲ್ಲಿ space bar ಒತ್ತಿ ಹಿಡಿದರೆ, ನಿಮಗೆ english-ಕನ್ನಡ ಆಯ್ಕೆ ಕಾಣುತ್ತದೆ,ಇದನ್ನು ಕ್ಲಿಕ್ಕಿಸಿದಲ್ಲಿ ನೀವು ನಿಮ್ಮ ಮೊಬೈಲ್ನಲ್ಲಿ ಇಂಗ್ಲೀಷಿನಲ್ಲಿ ಬರೆದ ಪದಗಳು ಕನ್ನಡ ಲಿಪಿಯಲ್ಲೇ ತೋರುತ್ತವೆ .

  • ಇದಲ್ಲದೆ, ನಿಮಗೆ ಪ್ಲೇಸ್ಟೋರ್ ನಲ್ಲಿ ಇನ್ನು ಹಲವಾರು ಅಪ್ಲಿಕೇಶನ್ನುಗಳು ಲಭ್ಯವಿದ್ದು, ಇದರಲ್ಲಿ ಯಾವುದಾದರೊಂದನ್ನು ನೀವು ಇನ್ಸ್ಟಾಲ್  ಮಾಡಿಕೊಳ್ಳಬಹುದು. ಇವುಗಳಲ್ಲಿ just ಕನ್ನಡ ಅಪ್ಲಿಕೇಶನ್ ಉತ್ತಮವಾಗಿದೆ. ನೀವು ತುಳು ಭಾಷಿಕರಾಗಿದ್ದರೆ, ಜಸ್ಟ್ ಕನ್ನಡ ಅಪ್ಲಿಕೇಶನಿನಲ್ಲಿ ಅದಕ್ಕೂ ಬೆಂಬಲವಿದೆ.

ಐಒಎಸ್(iOS)

iOSನಲ್ಲಿ ಕನ್ನಡ ಕೀಲಿಮಣೆಯ ಬಳಕೆಗಾಗಿ, Settings > General > Keyboard > Keyboards ಅಲ್ಲಿ “Add New Keyboard..”ಗೆ ಹೋಗಿ ಕನ್ನಡ ಭಾಷೆಯನ್ನು ಆಯ್ಕೆಮಾಡಿ.

ಜಸ್ಟ್ ಕನ್ನಡ ತಂತ್ರಾಂಶವು iOS ನಲ್ಲೂ ಲಭ್ಯವಿದೆ.