ವಾಟ್ಸ್ ಅಪ್ ನಲ್ಲಿ ನಿಮ್ಮ ಇಚ್ಛೆಯನುಸಾರ ಅಪ್ಲಿಕೇಶನಿನ ಭಾಷೆಯನ್ನು ಆಯ್ದುಕೊಳ್ಳಬಹುದಾಗಿದೆ. ಈ ಲೇಖನದಲ್ಲಿ ಭಾಷೆ ಆಯ್ದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿದ್ದೇನೆ.
1. ವಾಟ್ಸ್ ಅಪ್ ನ ಬಲ ತುದಿಯಲ್ಲಿರುವ 3 ಚುಕ್ಕೆಗಳ ಬಟನ್ ಮೇಲೆ ಒತ್ತಿ, ‘Settings’ ಆಯ್ದುಕೊಳ್ಳಿ.

2. ‘Settings’ನಲ್ಲಿ Chats > App Language ಗೆ ಹೋಗಿ, ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.



ಇದೇ ರೀತಿ ನೀವು ಬಳಸುವ ಎಲ್ಲಾ ಅಪ್ಲಿಕೇಶನ್ನುಗಳಲ್ಲಿ ಕನ್ನಡ ಭಾಷೆಯ ಆಯ್ಕೆ ಸೆಟ್ಟಿಂಗ್ಸ್ ನಲ್ಲಿ ಲಭ್ಯವಿದ್ದು, ಕನ್ನಡ ಭಾಷೆಯನ್ನು ಆಯ್ದುಕೊಂಡು ಬಳಸುವುದರಿಂದ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಕನ್ನಡ ಬಳಕೆದಾರರ ಮಾರುಕಟ್ಟೆಯ ವಿಸ್ತಾರ ತಿಳಿಯುತ್ತದೆ.
ಹೀಗೆ ಮಾಡುವುದರಿಂದ ಕನ್ನಡವಿರದ ತಂತ್ರಾಂಶಗಳಲ್ಲಿ, ಕನ್ನಡವನ್ನು ಆಯ್ಕೆಯನ್ನಾಗಿ ತರಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇಂಗ್ಲಿಷ್ ಬಾರದ ಸ್ಮಾರ್ಟ್ ಫೋನ್ ಬಳಕೆದಾರರಿಗೆ ನಿಮ್ಮಿಂದ ಪರೋಕ್ಷವಾಗಿ ಸಹಾಯವಾಗುತ್ತದೆ.
ಮಾಹಿತಿ ತಂತ್ರಜ್ಞಾನದ ವಲಯದಲ್ಲಿ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ಸುಲಭವಾಗುತ್ತದೆ. ನಿಮ್ಮ ಮೊಬೈಲ್ನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ ಎಂದು ತಿಳಿಯಲು ಈ ಲೇಖನ ಓದಿ.