ವಾಟ್ಸ್ ಅಪ್ ಬಳಕೆದಾರರ ಗೌಪ್ಯತೆಗೆ ಬಹಳಷ್ಟು ಒತ್ತು ಕೊಟ್ಟಿದ್ದು ಕಳೆದ ವರ್ಷದಿಂದ ಸಾಕಷ್ಟು ಅಪ್ಡೇಟುಗಳನ್ನು ಹೊರಬಿಟ್ಟಿದೆ. ಅವುಗಳಲ್ಲಿ ಬಹುಮುಖ್ಯವಾದದ್ದು ‘ಫಿಂಗರ್ ಪ್ರಿಂಟ್ ಲಾಕ್’ ಆಯ್ಕೆ. ಇದನ್ನು ಬಳಸುವುದರಿಂದ ಫೋನಿನಲ್ಲಿ ವಾಟ್ಸ್ ಅಪ್ ಅಪ್ಲಿಕೇಶನ್ ತೆರೆಯಲು ನಿಮ್ಮ ಫಿಂಗರ್ ಪ್ರಿಂಟ್ ನ ಅಗತ್ಯವಿರುತ್ತದೆ. ಈ ಲೇಖನದಲ್ಲಿ “ಫಿಂಗರ್ ಪ್ರಿಂಟ್ ಲಾಕ್” ಸಕ್ರಿಯಗೊಳಿಸುವುದು ಹೇಗೆ ಎಂದು ತಿಳಿಸಲಿದ್ದೇನೆ.
1. ವಾಟ್ಸ್ ಅಪ್ ನ ಬಲ ತುದಿಯಲ್ಲಿರುವ 3 ಚುಕ್ಕೆಗಳ ಬಟನ್ ಮೇಲೆ ಒತ್ತಿ, ‘Settings’ ಆಯ್ದುಕೊಳ್ಳಿ

2. ‘Settings’ನಲ್ಲಿ, Account > Privacy > Fingerprint Lock ಗೆ ಹೋಗಿ

3. ನಂತರ ‘unlock with Fingerprint’ ಆಯ್ಕೆಯನ್ನು ಸಕ್ರಿಯಗೊಳಿಸಿ ಮತ್ತು ಅಪ್ಲಿಕೇಶನ್ ನಿಂದ ಹೊರಬಂದಾಗ ಎಷ್ಟು ಸಮಯದ ನಂತರ ಲಾಕ್ ಮಾಡಬೇಕು ಎಂಬ ಪ್ರಶ್ನೆಗೆ ನಿಮ್ಮ ಇಚ್ಛೆಯನುಸಾರ ಆಯ್ದುಕೊಳ್ಳಿ. ವಯಕ್ತಿಕವಾಗಿ ನಾನು ‘Immediately’ ಆಯ್ಕೆಯನ್ನು ಬಳಸಲು ಉತ್ತೇಜಿಸುತ್ತೇನೆ.
