ನೀವೆಲ್ಲ ಗೂಗಲ್ ನಕ್ಷೆ (google maps ) ಬಳಸಿ ನಿಮಗೆ ಗೊತ್ತಿಲ್ಲದ ಜಾಗಗಳಿಗೆ ಸಂಚರಿಸಿರುತ್ತೀರಿ. ದೊಡ್ಡ ನಗರಗಳಲ್ಲಿ ಗೂಗಲ್ ನಕ್ಷೆ ಇಲ್ಲದೆ ಸಂಚರಿಸುವುದು ಕಷ್ಟ ಸಾಧ್ಯ. ನಿಮಗೆ ಗೊತ್ತಿರುವಂತೆಯೇ ಗೂಗಲ್ ನಕ್ಷೆ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಾವಿರುವ ಸ್ಥಳವನ್ನು ಹಾಗು ಹೋಗಬೇಕಾದ ದಾರಿಯ ದಿಕ್ಕನ್ನು ತೋರುತ್ತದೆ .
ನೀವು ನಿಮ್ಮ ಮನೆಯೊಳಗೆ ಕತ್ತಲಿನಲ್ಲಿ ಯಾವುದೇ ತೊಂದರೆ ಇಲ್ಲದೆ ನಡೆಯಬಲ್ಲಿರಿ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸಿದ್ದಾರೆ. ನಮ್ಮ ಮೆದುಳಿನಲ್ಲೂ ಗೂಗಲ್ ನಕ್ಷೆ ತರಹದ ಒಂದು ನಕ್ಷೆ ಇದೆ. ಸಸ್ತನಿಗಳ (mammals) ಮೆದುಳು ತನ್ನ ಸುತ್ತಮುತ್ತಲಿನಲ್ಲಿ ನೋಡಿ, ವಾಸನೆ ಮುಕಾಂತರ ಮತ್ತಿತರ ಸಂವೇದನೆಗಳ(senses) ಆಧಾರದ ಮೇಲೆ ನಕ್ಷೆಯನ್ನು ರೂಪುಗೊಳಿಸುತ್ತದೆ. ಎರಡು ತರಹದ ನ್ಯೂರಾನ್ ಗಳು ಮೆದುಳಿನಲ್ಲಿ ನಕ್ಷೆ ಹಾಕಲು ಸಹಾಯ ಮಾಡುತ್ತವೆ. ಮೆದುಳಿನ ಭಾಗವಾದ ‘ಹಿಪೊಕ್ಯಾಂಪಸ್’ನಲ್ಲಿರುವ place cells ನಾವು ಭೇಟಿಕೊಟ್ಟ ಜಾಗಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಕರಿಸುತ್ತದೆ. ಮತ್ತೊಂದು ತರಹದ ನ್ಯೂರಾನ್ ಗಳು grid cells ಹಿಪೊಕ್ಯಾಂಪಸ್ ಹಾಗು ಸೆರೆಬ್ರಲ್ ಕಾರ್ಟೆಕ್ಸ್ ನ ಮಧ್ಯಭಾಗದಲ್ಲಿದ್ದು place cells ನಲ್ಲಿ ಸ್ಟೋರ್(store) ಮಾಡಲಾದ ಜಾಗಗಳನ್ನು ಉಪಯೋಗಿಸಿ, ನಾವು ಚಲಿಸಿದಾಗ, ದಾರಿ ಹಾಗು ದಿಕ್ಕನ್ನು ಪ್ರೊಸಸ್ ಮಾಡಲು ಸಹಕರಿಸುತ್ತದೆ. ಹೀಗೆ place cells ಹಾಗು grid cells ಸಂಘಟಿತ ಸಹಾಯದಿಂದ ಮೆದುಳಿನ ನಕ್ಷೆ ಕಾರ್ಯನಿರ್ವಸುತ್ತದೆ.
ಮುಂದಿನ ಬಾರಿ ನೀವು ಕತ್ತಲಲ್ಲಿ ಸುಲಭವಾಗಿ ಮನೆಯೊಳಗೆ ನಡೆದಾಡುವಾಗ, ನಿಮ್ಮಮೆದುಳಿನ ನಕ್ಷೆಗೆ ಧನ್ಯವಾದ ತಿಳಿಸುವುದನ್ನು ಮರೆಯದಿರಿ.