ಆನ್ಲೈನ್ ನಲ್ಲಿ Browse ಮಾಡುವಾಗ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಜಾಗರೂಕವಾಗಿರುವುದು ನಮ್ಮೆಲ್ಲರ ಕರ್ತವ್ಯ, ಏಕೆಂದರೆ ನಮ್ಮ personal data ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ. ಈ ಬಗ್ಗೆ ಸಲಹೆಗಳು ನಿಮಗಾಗಿ.
1. ಬಲವಾದ password
ಒಂದು ಸಮೀಕ್ಷೆಯ ಪ್ರಕಾರ ಈ ವರ್ಷ 25 ಲಕ್ಷಕ್ಕೂ ಹೆಚ್ಚು ಬಾರಿ “123456” password ಆಗಿ ಬಳಸಲಾಗಿದೆ. ನಿಮ್ಮ password ಇತರರಿಗೆ ಊಹಿಸಲು ಕ್ಲಿಷ್ಟಕರವಾಗಿದ್ದರೆ ಒಳಿತು. ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ, ನಿಮ್ಮ ತಂದೆ ತಾಯಿಯ ಹೆಸರುಗಳನ್ನು ಎಂದಿಗೂ password ಆಗಿ ಬಳಸಬೇಡಿ. password ಗಳು 8 ಅಕ್ಷರ ಅಥವಾ ಹೆಚ್ಚು ಉದ್ದವಿದ್ದು , capital ಅಕ್ಷರ, special character (*@% ಇತ್ಯಾದಿ) ಹೊಂದಿರಬೇಕು.
2. Logout ಆಗಲು ಮರೆಯದಿರಿ
ಸಾಮಾಜಿಕ ಜಾಲತಾಣದ ಖಾತೆಗಳಾದ Facebook, Instagram, Twitter ಹಾಗು ಮಿಂಚಂಚೆ(email)ಗಳನ್ನು ನೋಡಲು ಪರರ ಫೋನ್ ಅಥವಾ ಕಂಪ್ಯೂಟರನ್ನು ಬಳಸಿದಾಗ logout ಮಾಡಲು ಮರೆಯದಿರಿ. ಹಲವಾರು ಬಾರಿ cyber cafe ಗಳಲ್ಲಿ ನಾವು ಮರೆಯುವ ಸಾಧ್ಯತೆಗಳಿದ್ದು, ನಮ್ಮ data ದುರ್ಬಳಕೆಯಾಗುವ ಎಲ್ಲ ಸಾಧ್ಯತೆಗಳಿರುತ್ತವೆ.
3. Open WiFi ನೆಟ್ವರ್ಕ್ ಬಳಸದಿರುವುದು ಸೂಕ್ತ
ಬಹಳಷ್ಟು shopping mall ಗಳಲ್ಲಿ, ರೈಲು/ಮೆಟ್ರೋ ಮತ್ತು ಬಸ್ ನಿಲ್ದಾಣಗಳಲ್ಲಿ Open WiFi ನೆಟ್ವರ್ಕ್ ಲಭ್ಯವಿದ್ದು, connect ಆಗಿರುವ gadget ಗಳನ್ನು hack ಮಾಡುವದು ಸುಲಭ ಎಂದು ಹಲವಾರು ಸಮೀಕ್ಷೆಗಳು ವರದಿ ಮಾಡಿವೆ. ನಿಮ್ಮ ಫೋನಿನ WiFi settings>automatically connect to a open WiFi network when detected ಆಯ್ಕೆಯನ್ನು ಈಗಲೇ ನಿಷ್ಕ್ರಿಯಗೊಳಿಸಿ.
4. ಕ್ಲಿಕ್ಕಿಸುವ ಮುನ್ನ link ನೇ ಮೇಲೆ ಗಮನವಿರಲಿ
“http://” ಇಂದ ಶುರುವಾಗುವ ಲಿಂಕ್ ಗಳು ಸುರಕ್ಷಿತವಲ್ಲ ಹಾಗು ನಿಮ್ಮ ಡೇಟಾ ಸೋರಿಕೆಯಾಗುವ ಎಲ್ಲ ಸಾಧ್ಯತೆ ಇರುತ್ತವೆ. “https://”ಇಂದ ಶುರುವಾಗುವ ಲಿಂಕ್ ಗಳು ಸುರಕ್ಷಿತವಾಗಿದ್ದು encryption ಗೆ ಒಳಪಟ್ಟಿರುತ್ತವೆ. ಹಾಗಾಗಿ ನೀವು ಕ್ಲಿಕ್ಕಿಸುವ ಮುನ್ನ link ನಲ್ಲಿ “https://” ಇದೆಯೇ ಎಂದು ಖಚಿತಪಡಿಸಿಕೊಳ್ಳಿ.
ವಿ.ಸೂ :(kannadadallitechnology.in https ಹೊಂದಿದ್ದು, ನೀವು ನಮ್ಮ ವೆಬ್ಸೈಟಿನಲ್ಲಿರುವಾಗ ನಿಮ್ಮ ಡೇಟಾ ಸುರಕ್ಷಿತವಾಗಿರುತ್ತದೆ)
5. ಮೊಬೈಲ್ application ಗಳಿಗೆ ಅನುಮತಿ ಕೊಡುವ ಮುನ್ನ
ಹೊಸದಾಗಿ ಒಂದು application ಅನ್ನು install ಮಾಡಿ setup ಮಾಡುವಾಗ ಯಾವೆಲ್ಲಾ service ಗಳಿಗೆ ಅನುಮತಿ ನೀಡಬೇಕು ಅನ್ನುವುದರ ಬಗ್ಗೆ ಗಮನ ಕೊಡದೆ, ಫೋನಿನ files, location, camera, microphone ಮತ್ತು contacts ಗಳನ್ನು ಬೇಡದಿರುವ appಗಳಿಗೂ ಅನುಮತಿ ನೀಡಿರುತ್ತೇವೆ. ಇದರಿಂದ ನಮ್ಮ ವೈಯಕ್ತಿಕ data 3ನೇ ವ್ಯಕ್ತಿಯ ಕೈ ಸೇರುತ್ತದೆ. ಈ ಡೇಟಾವನ್ನು ಅವನು ಮನ ಬಂದಂತೆ ಬಳಸಬಹುದು.
ಉದಾಹರಣೆಗೆ ವಿಡಿಯೋ player application ಗೆ ನಮ್ಮ contacts, camera ಮತ್ತು microphone ಗಳ ಅನುಮತಿ ನೀಡುವ ಅಗತ್ಯವಿಲ್ಲ. ಯೋಚಿಸಿ. ಮುಂದಿನ ಬಾರಿ ಅನುಮತಿಸುವ ಮುನ್ನ ಗಮನವಿರಲಿ.
6. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಗಾಳಿ ಸುದ್ದಿ
WhatsApp, Facebook ಮತ್ತು Twitter ನಲ್ಲಿ ಯಾವುದೇ ಸುದ್ದಿ ಓದಿದರೂ ಅದನ್ನು forward ಮಾಡುವ ಮುನ್ನ ಅದು ನಿಜವೇ ಎಂದು ವಿಶ್ವಾಸರ್ಹ ಮೂಲಗಳಿಂದ ಖಚಿತಪಡಿಸಿಕೊಳ್ಳಿ. ಸಮೀಕ್ಷೆಯ ಪ್ರಕಾರ Twitter ನಲ್ಲಿ ಸತ್ಯಾಂಶಕ್ಕಿಂತ ಸುಳ್ಳುಸುದ್ದಿ 6 ಪಟ್ಟು ವೇಗದಲ್ಲಿ ಪಸರಿಸುತ್ತದೆ ಎಂದು ವರದಿಯಾಗಿದೆ.
ಕೆಳಗೆ ತೋರಿಸಲಾದ tweet ಸುಳ್ಳುಸುದ್ದಿಯಾಗಿದ್ದು, ಬಹುತೇಕ ಭಾರತೀಯರನ್ನು ತಲುಪ್ಪಿತ್ತು. ನೀವು ಇದನ್ನು ನಂಬಿದ್ದರೆ, ಸರಿಪಡಿಸ್ಕೊಳ್ಳಿ.
