ಬದಲಾದ ಗೂಗಲ್ ಫೋಟೋಸ್ ಸ್ಟೋರೇಜ್ ಪಾಲಿಸಿ!

Share

ಜೂನ್ 1, 2021 ರಿಂದ ಗೂಗಲ್ ಫೋಟೋಸ್ ನಲ್ಲಿ ಸಂಗ್ರಹಣೆ ಮಾಡುತಿದ್ದ ಮೂಲ ಗುಣಮಟ್ಟದ ಫೋಟೋಗಳ backup ಮಾಡುವ ಮಿತಿಯನ್ನು 15 GBಗೆ ಸೀಮಿತಗೊಳಿಸಲಾಗಿದೆ.

ಇಲ್ಲಿಯವರೆಗೆ ಉಚಿತವಾಗಿ ಸೇವೆಯನ್ನು ಒದಗಿಸಿದ ನಂತರ ಗೂಗಲ್ ಒನ್ ಚಂದಾದಾರಿಕೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಹೊಸ ಪಾಲಿಸಿಯನ್ನು ಹೊರತಂದಿದೆ.

ಫೋಟೋಗಳು ಹಾಗು ವಿಡಿಯೋಗಳನ್ನು ಅನಿಯಮಿತವಾಗಿ ಸೇರಿಸಲು ಜೂನ್ 1 ರವರೆಗೂ ಸಮಯವಿದೆ. ಈ ಸೇವೆಯನ್ನು ಬಳಸುವವರ ಸಂಖ್ಯೆ ಹೆಚ್ಚಿರುವುದರಿಂದ ಮುಂಚಿತವಾಗಿ ಮಾಡಲಾಗುವ ದೊಡ್ಡ ಬದಲಾವಣೆಯ ಬಗ್ಗೆ ಈಗಲೇ ತಿಳಿಸುತಿದ್ದೇವೆ ಎಂದು ಗೂಗಲ್ ಫೋಟೋಸ್ ಉಪಾಧ್ಯಕ್ಷ ಶಿಮ್ರಿತ್ ಬೆನ್-ಯೇರ್ blogpostನಲ್ಲಿ ಹೇಳಿದ್ದಾರೆ.

ಇನ್ನು ಗೂಗಲ್ ಪಿಕ್ಸೆಲ್ ಮೊಬೈಲುಗಳನ್ನು ಹೊರೆತುಪಡಿಸಿ ಇನ್ನೆಲ್ಲಾ ಬಳಕೆದಾರರಿಗೆ ಹೊಸ ನೀತಿ ಅನ್ವಯಿಸುತ್ತದೆ.

ಗೂಗಲ್ drive ನಲ್ಲೂ ಬದಲಾವಣೆ ಆಗಲಿದೆ!

ಗೂಗಲ್ ಖಾತೆಯ ಜೊತೆ ಬರುವ ಸಂಗ್ರಹಣೆ ಸಾಮರ್ಥ್ಯವನ್ನು drive, gmail ಮತ್ತು photos ಹಂಚಿಕೊಂಡಿದೆ. ಬದಲಾದ ನೀತಿಯ ಅನುಸಾರ ನಿಮ್ಮ ಎಲ್ಲಾ ಡೇಟಾಗಳು 15 GB ಮಿತಿ ಒಳಗೆ ಬರುತ್ತದೆ. ನಿಮ್ಮ ಖಾತೆಯಲ್ಲಿ ಲಭ್ಯವಿರುವ ಸಂಗ್ರಹಣೆಯ ಮಾಹಿತಿಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

Rich result on Google's SERP when searching "Storage Google Photos"

ಈಗಿರುವ ಫೈಲುಗಳನ್ನು ಹೊರತುಪಡಿಸಿ ಮುಂದಿನ ದಿನಗಳಲ್ಲಿ ಮಾರ್ಪಡಿಸುವ ಅಥವಾ ಸೇರಿಸುವುದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಎರಡು ವರ್ಷಗಳವರೆಗೆ ಒಂದು ಅಥವಾ ಹೆಚ್ಚಿನ ಸೇವೆಗಳನ್ನು ಬಳಸದೆ ನಿಷ್ಕ್ರಿಯವಾಗಿರುವ ಖಾತೆಯಲ್ಲಿನ ಡೇಟಾವನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಹಾಗೆಯೇ, ಶೇಖರಣಾ ಮಿತಿಯನ್ನು ಮೀರಿ ಎರಡು ವರ್ಷಗಳಾಗಿದ್ದಲ್ಲಿ, Gmail, drive ಮತ್ತು photosನಲ್ಲಿರುವ ಡೇಟಾ ಅಳಿಸಲಾಗುವುದು.