ನೀತಿ ಉಲ್ಲಂಘನೆಯ ಕಾರಣದಿಂದ Google Play Storeನಿಂದ Paytm ಅಪ್ಲಿಕೇಶನ್ಅನ್ನು ತೆಗೆಯಲಾಗಿದೆ

Share
Paytm ಅಪ್ಲಿಕೇಶನ್ Google Play Storeಗೆ ಮರಳಿದೆ

ಗೂಗಲ್ ನ ಜೂಜಿನ ನೀತಿ(gambling policies)ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜನಪ್ರಿಯ ಭಾರತೀಯ ಹಣಕಾಸು ಸೇವೆಗಳ ಅಪ್ಲಿಕೇಶನ್ ಪೇಟಿಎಂ(Paytm)ಅನ್ನು ಪ್ಲೇ ಸ್ಟೋರ್‌ ನಿಂದ ತೆಗೆದುಹಾಕಲಾಗಿದೆ. ಈ ಸಂಬಂಧ ಪ್ಲೇ ಸ್ಟೋರ್‌(Play Store)ನಲ್ಲಿ ಪರಿಶೀಲಿಸಿದಾಗ ಪೇಟಿಎಂ(Paytm) ಅಪ್ಲಿಕೇಶನ್ ಕಾಣಸಿಗುತ್ತಿಲ್ಲ.

ಭಾರತದಲ್ಲಿ ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಆನ್‌ಲೈನ್ ಕ್ಯಾಸಿನೊಗಳು ಮತ್ತು ಇತರ ಜೂಜಾಟದ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್ ನಿಷೇಧಿಸುತ್ತದೆ ಎಂದು ಗೂಗಲ್ ಈಗಾಗಲೇ ಹೇಳಿದೆ. ಈ ನೀತಿಯನ್ನು ಪದೇ ಪದೇ ಉಲ್ಲಂಘಿಸಿರುವುದೇ ಪೇಟಿಎಂಅನ್ನು ತೆಗೆಯಲು ಕಾರಣವಾಗಿದೆ. 

ಯಾವುದೇ ಒಂದು ಆಂಡ್ರಾಯ್ಡ್ ಅಪ್ಲಿಕೇಶನ್ ಗ್ರಾಹಕರನ್ನು ಬೇರೆಯ ವೆಬ್‌ಸೈಟ್‌ಗೆ ಕರೆದೊಯ್ದು ನಗದು ಬಹುಮಾನಗಳನ್ನು ಗೆಲ್ಲುವಂತಹ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರೆ ಅದು ಪ್ಲೇ ಸ್ಟೋರ್ ನೀತಿಗಳನ್ನು ಉಲ್ಲಂಘಿಸಿದಂತೆ. Goolgeನ blog ಪೋಸ್ಟ್ ನಲ್ಲಿ ಈ ರೀತಿಯ ಜೂಜಿನ ನೀತಿಯ ಬಗ್ಗೆ ಪ್ರಕಟಿಸಿದೆ. 

“ಬಳಕೆದಾರರಿಗೆ ಆಗಬಹುದಾದ ಹಾನಿಯಿಂದ ರಕ್ಷಿಸಲು ನಾವು ಈ ನೀತಿಗಳನ್ನು ಹೊಂದಿದ್ದೇವೆ. ಅಪ್ಲಿಕೇಶನ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ನಾವು ಉಲ್ಲಂಘನೆಯ ಬಗ್ಗೆ ಡೆವಲಪರ್‌ಗಳಿಗೆ ತಿಳಿಸುತ್ತೇವೆ ಮತ್ತು ಡೆವಲಪರ್ ಅಪ್ಲಿಕೇಶನ್ಅನ್ನು ಮರು ಅ೦ಗೀಕಾರ ಅಗುವವರೆಗು ನಾವು Google Play ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕುತ್ತೇವೆ ”

ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಉತ್ಪನ್ನ, ಆಂಡ್ರಾಯ್ಡ್ ಭದ್ರತೆ ಮತ್ತು ಗೌಪ್ಯತೆ ಉಪಾಧ್ಯಕ್ಷೆ ಸೂಝನ್ನೇ ಫ್ರೆಯ್ ಬರೆದಿದ್ದಾರೆ. 

“ಪುನರಾವರ್ತಿತ ನೀತಿ ಉಲ್ಲಂಘನೆಯಾದಲ್ಲಿ, ನಾವು ಹೆಚ್ಚು ಗಂಭೀರವಾದ ಕ್ರಮವಾಗಿ Google Play ಡೆವಲಪರ್ ಖಾತೆಗಳನ್ನು ಕೊನೆಗೊಳಿಸಬಹುದು. ನಮ್ಮ ಈ ನೀತಿಗಳು ಎಲ್ಲಾ ಡೆವಲಪರ್‌ಗಳ ಮೇಲೆ ಸಮಾನವಾಗಿ ಅನ್ವಯಿಸಲಾಗುತ್ತದೆ”ಎಂದು ಹೇಳಿದ್ದಾರೆ.

ಇದಕ್ಕೆ ಪೇಟಿಎಂ(Paytm) ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Update/ನವೀಕರಿಸಿದ

“ಅಪ್ಲಿಕೇಶನ್ ಮರಳಿ ತರಲು, ನಾವು Googleನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಿತ್ತೇವೆ. ನಮ್ಮ ಎಲ್ಲ ಬಳಕೆದಾರರ ಹಣ ಮತ್ತು ಲಿಂಕ್ ಮಾಡಿದ ಖಾತೆಗಳು ಶೇಕಡಾ 100ರಷ್ಟು ಸುರಕ್ಷಿತವೆಂದು ನಾವು ಭರವಸೆ ನೀಡುತ್ತೇವೆ. ಅಸ್ತಿತ್ವದಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ನಮ್ಮ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನೀವು ಮೊದಲಿನಂತೆ ಪೇಟಿಎಂ(Paytm) ಅನ್ನು ಆನಂದಿಸಬಹುದಾಗಿದೆ” ಎಂದು ಹೇಳಿಕೆ ನೀಡಿದೆ.

ಇದಾಗಿ ಕೆಲವೇ ಗಂಟೆಗಳಲ್ಲಿ, ಅದೇ ದಿನ Paytm ಅಪ್ಲಿಕೇಶನ್ Google Play Store ಗೆ ಮರಳಿದೆ.