ಗೂಗಲ್ ನ ಪಿಕ್ಸೆಲ್ ಆವೃತ್ತಿಯ ಮುಂದುವರಿದ ಫೋನುಗಳನ್ನು ಇಂದು ವರ್ಚುಯಲ್ ಈವೆಂಟ್ ನಲ್ಲಿ ಭಾರತದ ಕಾಲಮಾನ 11:30pm ಗೆ ಅನಾವರಣಗೊಳಿಸಲಿದೆ. ಇವತ್ತು ಗೂಗಲ್ ನಿಂದ ಪಿಕ್ಸೆಲ್ ಫೋನುಗಳ ಜೊತೆಗೆ ಕ್ರೋಮ್ ಕ್ಯಾಸ್ಟ್ ಹಾಗು ನೆಸ್ಟ್ ಹೆಸರಿನ ಸ್ಮಾರ್ಟ್ ಸ್ಪೀಕರ್ ಗಳು ಸಹ ಬಿಡುಗಡೆಮಾಡಲಿದೆ.
ಆನ್ಲೈನ್ ಈವೆಂಟ್ ನೋಡುವುದು ಹೇಗೆ?
ಅಧಿಕೃತ ಯೂಟ್ಯೂಬ್ ಚಾನೆಲ್ Made by Google ನಲ್ಲಿ ಈಗಾಗಲೇ ನಿರಂತರ ಪ್ರಸಾರ ಮಾಡಲು ಸಿದ್ದವಾಗಿದೆ. ಲೈವ್ ನೋಡಲು ಲಿಂಕ್ ಅನ್ನು ಕೆಳಗೆ ಲಗತ್ತಿಸಲಾಗಿದೆ.
Google Pixel 5
ಕಳೆದಬಾರಿಯ ಪಿಕ್ಸೆಲ್ 4 ಭಾರತದ ಮಾರುಕಟ್ಟೆಗೆ ನಾನಾ ಕಾರಣದಿಂದ ಬಿಡುಗಡೆಗೊಳ್ಳಲಿಲ್ಲ. ಈ ವರ್ಷದ pixel 5 ಫೋನುಗಳು ಸಹ ಖಚಿತವಾಗಿ ಬರಬಹುದು ಎಂದು ಹೇಳಲಾಗುತ್ತಿಲ್ಲ. ಇವತ್ತಿನ ಈವೆಂಟ್ ನಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿದೊರೆಯಲಿದೆ.
ಇನ್ನು pixel 5 ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 6 ಇಂಚಿನ 1080×2340 pixels ಒಳಗೊಂಡ 90Hz refresh rate, Gorilla Glass 6, ಮತ್ತು 19.5:9 aspect ratio ಇರುವ ಪರದೆಯನ್ನು ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಎಫ್ / 1.7 ಲೆನ್ಸ್ ಹೊಂದಿರುವ 12.2 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹಾಗು 16-ಮೆಗಾಪಿಕ್ಸೆಲ್ ವೈಡ್-ಆಂಗಲ್, 107 ಡಿಗ್ರಿ ಫೀಲ್ಡ್ ಆಫ್ ವ್ಯೂ (field of view) ಮತ್ತು ಎಫ್ / 2.2 ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರುವ ನಿರೀಕ್ಷೆಯಿದೆ. ಇನ್ನು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೋನಿ ಐ.ಎಂ.ಎಕ್ಸ್. 355 ಸ್ನ್ಯಾಪರ್ ಅನ್ನು ಒಳಗೊಂಡಿರಬಹುದು.
18W Qi ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,080mAh ಬ್ಯಾಟರಿ ಇದ್ದು, ಜೊತೆಗೆ 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯ ಹೊಂದಿದೆ. 6 GB RAM ಮತ್ತು 128 GB ಸ್ಟೋರೇಜ್, ಸ್ನಾಪ್‌ಡ್ರಾಗನ್ 765 ಜಿ ಪ್ರೊಸೆಸರ್ ಇದೆ. ಈ ಹಿಂದೆ ವರದಿ ಮಾಡಿದ್ದ Googleನ Pixel “5 ಈಗ 5s” ಗು ಉತ್ತರದೊರೆಯಲಿದೆ.
ಪ್ರೊಸೆಸರ್ | Qualcomm® Snapdragon™ 765G 5G |
ಪರದೆಯ ಗಾತ್ರ | 6.00 – inch |
RAM | 8GB |
ಸ್ಟೋರೇಜ್ | 128GB |
ಬ್ಯಾಟರಿ | 4,080mAh |
ಆಪರೇಟಿಂಗ್ ಸಿಸ್ಟಮ್ ಆವೃತ್ತಿ | Android 11.0 |
ಕ್ಯಾಮೆರಾ | – ಹಿಂಭಾಗ: 12.2MP (OSI / f/1.7) ಮತ್ತು 16MP wide angle (107° / f/2.2) –ಮುಂಭಾಗ: 8MP |
ಬೆಲೆ | $699 (ಸುಮಾರು Rs. 51,400) |

Google Pixel 4a 5G
ಗೂಗಲ್ ಪಿಕ್ಸೆಲ್ 4a ನ 5G ಆವೃತ್ತಿಯ ಮೊಬೈಲ್ ಬರುವುದಾಗಿ 4a ಬಿಡುಗಡೆಗೊಂಡಾಗಲೇ ತಿಳಿಸಿತ್ತು. ಇದು ಸಹ ಆಂಡ್ರಾಯ್ಡ್ 11 ರಲ್ಲಿ ಬರಲಿದ್ದು, 6.2-ಇಂಚಿನ(1080×2340 pixels) ಫುಲ್-ಎಚ್.ಡಿ. ಪ್ಲಸ್, ಒ.ಎಲ್.ಇಡಿ. ಪರದೆ 60 Hz ರಿಫ್ರೆಶ್ ರೇಟ್, ಎಚ್‌ಡಿಆರ್ ಬೆಂಬಲ, ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3ರ ರಕ್ಷಣೆಯನ್ನು ಒಳಗೊಂಡಿರಬಹುದು. ಇದು 6 GB RAM ಮತ್ತು 128 GB ಸ್ಟೋರೇಜ್ ನೊಂದಿಗೆ ಸ್ನಾಪ್‌ಡ್ರಾಗನ್ 765 ಜಿ ಪ್ರೊಸೆಸರ್ ಚಾಲಿತವಾಗಿದೆ.
ಪಿಕ್ಸೆಲ್ 5 ಗೆ ಇರುವ ಕ್ಯಾಮೆರಾಗಳೇ ಇಲ್ಲೂ ಇರಲಿದ್ದು ಜೊತೆಗೆ 3.5mm ಆಡಿಯೋ ಜಾಕ್ ಇರಲಿದೆ. 18W ನ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 3,885mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಪ್ರೊಸೆಸರ್ | Qualcomm® Snapdragon™ 765G 5G |
ಪರದೆಯ ಗಾತ್ರ | 6.20 – inch |
RAM | 6GB |
ಸ್ಟೋರೇಜ್ | 128GB |
ಬ್ಯಾಟರಿ | 3,885mAh |
ಆಪರೇಟಿಂಗ್ ಸಿಸ್ಟಮ್ ಆವೃತ್ತಿ | Android 11.0 |
ಕ್ಯಾಮೆರಾ | – ಹಿಂಭಾಗ: 12.2MP ಮತ್ತು 16MP –ಮುಂಭಾಗ: 8MP |
ಬೆಲೆ | $499 (ಸುಮಾರು Rs. 37,000) |
Google TV ಯೊಂದಿಗೆ ಕ್ರೋಮ್ ಕ್ಯಾಸ್ಟ್ ಮತ್ತು ನೆಸ್ಟ್ ಸ್ಮಾರ್ಟ್ ಸ್ಪೀಕರ್ಗಳು

ಈ ಹೊಸ ಸ್ಟ್ರೀಮಿಂಗ್ ಡಾಂಗಲ್,ಕ್ರೋಮ್ ಕ್ಯಾಸ್ಟ್ ಪೂರ್ಣ ಪ್ರಮಾಣದ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವುದಲ್ಲದೆ, ಪರಿಷ್ಕೃತ ಆಂಡ್ರಾಯ್ಡ್ ಟಿವಿ ಇಂಟರ್ಫೇಸ್‌ನೊಂದಿಗೆ ಬರುತ್ತದೆ ಎಂದು ವರದಿಯಾಗಿದೆ. ಇದರ ಜೊತೆಗೆ ರಿಮೋಟ್ ಕೂಡಾ ಲಭಿಸುವುದರಿಂದ ಮೀಸಲಾದ ಬಟನ್ನುಗಳನ್ನು ಬಳಸಿ ಸುಲಭವಾಗಿ ನಿಯಂತ್ರಿಸಬಹುದಾಗಿದೆ.
ಇನ್ನು ಸ್ಮಾರ್ಟ್ ಸ್ಪೀಕರ್ಗಳು ಗೂಗಲ್ ಅಸಿಸ್ಟೆಂಟ್ ನೊಂದಿಗೆ ಬರಲಿದ್ದು ಇನ್ನಷ್ಟು ಮಾಹಿತಿಗಳು ಈವೆಂಟ್ ಸಮಯದಲ್ಲಿ ಗೂಗಲ್ ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತದೆ.
Google Pixel 5, Pixel 4a 5G ಎರಡು ಫೋನುಗಳು ಭಾರತದ ಮಾರುಕಟ್ಟೆಗೆ ಬರುವುದಿಲ್ಲ.