ಗೂಗಲ್ ಮೀಟ್ ನಲ್ಲಿ ಈಗ ಒಮ್ಮೆಲೇ 49 ಜನ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳಬಹುದು.(Google Meet introduces 49 person grid view)

Share

ಕೋವಿಡ್-19 ಕಾರಣದಿಂದ ವಿಶ್ವದೆಲ್ಲೆಡೆ ಜಾರಿಯಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ವ್ಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗದ ಕಾರಣ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಿರುವ ಜೂಮ್ ಮತ್ತು ಗೂಗಲ್ ಮೀಟ್ ಮೊರೆ ಹೋಗಿದ್ದರು. ಗೂಗಲ್ ಮೀಟ್ ನಲ್ಲಿ ಬರೋಬ್ಬರಿ 100 ಜನ ವಿಡಿಯೋ ಕರೆಯಲ್ಲಿ ಪಾಲ್ಗೊಳ್ಳಬಹುದಾದರೂ ಒಮ್ಮೆಲೇ ಸ್ಕ್ರೀನ್ ಮೇಲೆ ಕೇವಲ 16 ಮಂದಿ ಮಾತ್ರ ಕಾಣಿಸಿಕೊಳ್ಳಬಹುದಾಗಿತ್ತು .

ಗೂಗಲ್ ನ ಮಾಹಿತಿ ಪ್ರಕಾರ ಇನ್ನು ಮುಂದೆ ಒಮ್ಮೆಲೇ 49 ಮಂದಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಬಹುದಾಗಿದೆ. ಜೂಮ್ ಈ ಆಯ್ಕೆಯನ್ನು ಕಳೆದ ಅಪ್ಡೇಟ್ ನಲ್ಲೆ ಹೊರಬಿಟ್ಟಿತ್ತು. ಇದರೊಟ್ಟಿಗೆ ಚಂದಾದಾರರು ತಮ್ಮ ವಿಡಿಯೋದ ಹಿನ್ನೆಲೆಯನ್ನು ಬ್ಲರ್ (blur) ಮಾಡುವ ಆಯ್ಕೆಯನ್ನು ಕೊಡಲಾಗಿದೆ. ಹೊಸ ಗೂಗಲ್ ಮೀಟ್ ಈಗಾಗಲೇ ಗೂಗಲ್ ಕ್ರೋಮ್ ನಲ್ಲಿ ಚಾಲ್ತಿಯಲ್ಲಿದೆ.

ಸ್ಕ್ರೀನ್ ಮೇಲೆ ಒಮ್ಮೆಲೇ 49 ಜನರನ್ನು ನೋಡುವ ಆಯ್ಕೆ ಕೃಪೆ : ಗೂಗಲ್

ಚಂದಾದಾರರ ಇಚ್ಛೆಯನುಸಾರ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಹಾಗು ಕಾಣಿಸಿಕೊಳ್ಳದಿರಿಸಲು ಆಯ್ಕೆ ಕೊಡಲಾಗಿದೆ. ಪೂರ್ವನಿಯೋಜಿತವಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವರ ಸಂಖ್ಯೆ 9 ಇರುತ್ತದೆ. ಚಂದಾದಾರರು ಸ್ಲೈಡರ್ ಮೂಲಕ 49ರವರೆಗೆ ಹೆಚ್ಚಿಸಿಕೊಳ್ಳಬಹುದಾಗಿದೆ.

ವಿಡಿಯೋ ಹಿನ್ನೆಲೆ ಬ್ಲರ್ ಮಾಡುವ ಆಯ್ಕೆ .ಕೃಪೆ : ಗೂಗಲ್

ಈ ಅಪ್ಡೇಟ್ ಕೇವಲ ಗೂಗಲ್ ಮೀಟ್ ವೆಬ್ (web) ಅಂದರೆ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಮಾತ್ರ ಲಭ್ಯವಿದೆ. ಎಂದು ತಿಳಿಸಿದೆ. ಈ ಅಪ್ಡೇಟ್ ಮೂಲಕ ಗೂಗಲ್ ಮೀಟ್ ಬಳಕೆದಾರರ ವಿಡಿಯೋ ಕರೆಗಳ ಅನುಭವವನ್ನು ಉತ್ತಮಗೊಳಿಸಲಿದೆ.

ಮೂಲ ಸುದ್ದಿ : ವಿಡಿಯೋ ಹಿನ್ನೆಲೆ ಬ್ಲರ್ ಮತ್ತು ಸ್ಕ್ರೀನ್ ಅಪ್ಡೇಟ್