ಗೂಗಲ್ ತನ್ನ ಬ್ಲಾಗ್ ಪೋಸ್ಟ್ ನಲ್ಲಿ ವಿಡಿಯೋ ಕರೆಗಳು ನಮ್ಮ ದೈನಂದಿನ ಜೀವನದ ಭಾಗವಾಗಿದ್ದು, ಉಚಿತ ಅನಿಯಮಿತವಿ ಡಿಯೋ ಕರೆಗಳು 2021ರ ಏಪ್ರಿಲ್ ನ ವರಿಗೆಯೂ ಮುಂದುವರೆಯಲಿವೆ ಎಂದು ಹೇಳಿಕೊಂಡಿದೆ.
ಇಲ್ಲಿಯವರೆಗೂ ಗೂಗಲ್ ಮೀಟ್ ನ ಉಚಿತ ವಿಡಿಯೋ ಕರೆಗಳಿಗೆ ಯಾವುದೇ ಅವಧಿಯ ನಿರ್ಬಂಧವಿರಲಿಲ್ಲ. ಸೆಪ್ಟೆಂಬರ್ 30ರ ಬಳಿಕ ಕರೆಗಳು 60ನಿಮಿಷಕ್ಕೆ ಮಾತ್ರ ಸೀಮಿತವಾಗಿರುತ್ತವೆಂದು The Verge ವರದಿ ಮಾಡಿದೆ.
‘G suite ಎಂಟರ್ಪ್ರೈಸ್‘ ಚಂದಾದಾರಿಗೆ ಮಾತ್ರ ದೊರೆಯುತ್ತಿದ್ದ ಫೀಚರ್ ಗಳನ್ನು, G suite ಮತ್ತು G Suite for Education ಬಳಕೆದಾರರಿಗೆ ಲಾಕ್ ಡೌನ್ ಸಮಯದಲ್ಲಿ ಉಚಿತವಾಗಿ ನೀಡಲಾಗಿತ್ತು. ಇವುಗಳು ಕೂಡ ಸೆಪ್ಟೆಂಬರ್ 30ರ ಬಳಿಕ ಕಡಿತಗೊಳ್ಳಲಿವೆ.
- ಕರೆಗಳಲ್ಲಿ ಗರಿಷ್ಟ ಮಂದಿಯನ್ನು 250 ರಿಂದ 150 ಕ್ಕೆ ಇಳಿಸಲಾಗುವುದು.
- 1 ಲಕ್ಷ ಮಂದಿಗೆ ನೇರ ಪ್ರಸಾರ ಮಾಡುವ ಆಯ್ಕೆಯನ್ನು ನಿಲ್ಲಿಸಲಾಗುವುದು.
- ಕರೆಗಳ ರೆಕಾರ್ಡ್ ಅನ್ನು ಗೂಗಲ್ ಡ್ರೈವ್ ನಲ್ಲಿ ಸ್ಟೋರ್ ಮಾಡಲಾಗುವುದಿಲ್ಲ.
ಬಳಕೆದಾರರು ಅನಿಯಮಿತ ಕರೆಗಳಿಗೆ G SUITE ಚಂದಾದಾರಿಕೆ ಪಡೆಕೊಳ್ಳಬೇಕಾಗಿದ್ದು, ಈ ಬಗ್ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಗೂಗಲ್ ಮೀಟ್ ನ ಹೊಸ ದರ ಹಾಗು ಪ್ಲಾನ್ ಗಳ ಮಾಹಿತಿಗೆ: Plans & Pricing