ಅಕ್ಟೋಬರ್ 13, 2020 ರಿಂದ, Google ಡ್ರೈವ್‌ನಲ್ಲಿನ ಅನುಪಯುಕ್ತ ಫೈಲುಗಳನ್ನು ಉಳಿಸಿಕೊಳ್ಳುವ ನೀತಿಗಳನ್ನು ಬದಲಾಯಿಸುತ್ತಿದೆ. ಹೊಸ ಕಾರ್ಯ ನೀತಿ ಪ್ರಕಾರ ನೀವು delete ಮಾಡಿದಾಗ trashನಲ್ಲಿ ಬಂದು ಕೂರುವ ಫೈಲುಗಳು 30ದಿನದ ನಂತರ ಅವು ಶಾಶ್ವತವಾಗಿ ತೆಗೆದುಹಾಕುತ್ತದೆ. ಈಗಾಗಲೇ ಇರುವ ಫೈಲುಗಳು ಬಳಕೆದಾರರು ಕುದ್ದಾಗಿ ತೆಗೆಯುವವರೆಗು ಹಾಗೆಯೇ trashನಲ್ಲಿರುತ್ತದೆ.
ಆದರೆ 13ರ ನಂತರ ಡಿಲೀಟ್ ಮಾಡುವ ಎಲ್ಲಾ ಫೈಲುಗಳು ಈ ನೀತಿಯೊಳಗೆ ಬರುವುದರಿಂದ trashನಲ್ಲಿರುವ ಫೈಲುಗಳ ಆಯಸ್ಸು ಕೇವಲ 30 ದಿನಗಳು ಮಾತ್ರ. ಇದೇ ನೀತಿಯನ್ನು Gmail ಹಾಗು G Suite productsಗಳಲ್ಲಿ ಪಾಲಿಸಲಾಗುತ್ತಿದೆ. ಆ ಸಾಲಿಗೆ ಹೊಸ ಸೇರ್ಪಡೆ Google drive.
ಎಲ್ಲರಿಗೂ ಸಹಾಯ ಆಗಲೆಂದು ಗೂಗಲ್ ಡ್ರೈವ್, ಬದಲಾವಣೆಯ ಸವಿವರಗಳೊಂದಿಗೆ ಬ್ಯಾನರ್ ಅನ್ನು ಪ್ರದರ್ಶಿಸುತ್ತದೆ ಮತ್ತು drive, docs ಮತ್ತು forms ಅಪ್ಲಿಕೇಶನ್‌ನಲ್ಲಿ ನೋಟಿಫಿಕೇಶನ್ ಗಳನ್ನು ತೋರಿಸುತ್ತದೆ.