ನಿಮ್ಮ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್ (Google assistant) disable ಮಾಡುವುದು ಹೇಗೆ ( How to disable Google assistant in Kannada)

Share

ಪ್ರತಿ ಬಾರಿ ನೀವು “ಓಕೆ ಗೂಗಲ್ ” ಅಥವಾ “ಹೇ ಗೂಗಲ್” ಎಂದಾಗ ನಿಮ್ಮ ಫೋನಿನಲ್ಲಿ ಗೂಗಲ್ ಅಸಿಸ್ಟೆಂಟ್, ನಿಮ್ಮ ಮಾತುಗಳು ಹಾಗು ಸಂಭಾಷಣೆಯನ್ನು ಸಂಗ್ರಹಿಸುತ್ತದೆ. ಹೀಗೆ ಸಂಗ್ರಹಿಸಿದ ಡೇಟಾ ಗೂಗಲ್ ಅಸಿಸ್ಟೆಂಟ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಳಸಲಗುವುದಲ್ಲದೇ ಜಾಹಿರಾತುಗಳನ್ನು ತೋರಿಸಲು ಉಪಯೋಗಿಸುತ್ತಾರೆ. ಅದಲ್ಲದೇ ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೇ ಗೂಗಲ್ ಅಸಿಸ್ಟೆಂಟ್ ಕದ್ದಾಲಿಸುವ ಸಾಧ್ಯತೆ ಹೆಚ್ಚಿದೆ.

ನಿಮ್ಮ ಗೌಪ್ಯತೆ (privacy ) ಕಾಪಾಡಲು ಗೂಗಲ್ ಅಸಿಸ್ಟೆಂಟ್ disable ಮಾಡುವ ವಿಧಾನವನ್ನು ಕೆಳಗೆ ತಿಳಿಸಿದ್ದೇನೆ.

1. ನಿಮ್ಮ ಫೋನಿನ settings ಆಯ್ಕೆಯಲ್ಲಿ google ಎಂದು ಹುಡುಕಿ

2. ನಂತರ “Account services” ಮೇಲೆ ಕ್ಲಿಕ್ಕಿಸಿ .

3. ನಂತರ “Search , Assistant & Voice” ಮೇಲೆ ಕ್ಲಿಕ್ಕಿಸಿ

4. ನಂತರ “Google Assistant” ಮೇಲೆ ಕ್ಲಿಕ್ಕಿಸಿ.

5. ‘Assistant’ ಅಂಕಣದಲ್ಲಿನ “Assistant Devices” ಆಯ್ಕೆಯಡಿಯಲ್ಲಿ ‘phone’ ಮೇಲೆ ಕ್ಲಿಕ್ಕಿಸಿ.

6. Google Assistant ಆಯ್ಕೆಯನ್ನು disable ಮಾಡಿ.