iOSಗೆ ನೇರ ಸ್ಪರ್ಧಿಯಾಗಿರುವ ಗೂಗಲ್ ನ ಆಂಡ್ರಾಯ್ಡ್ OS ಕಾಲ ಕಾಲಕ್ಕೆ ಹೊಸ ಅಪ್ಡೇಟುಗಳನ್ನು ನೀಡುವ ಮೂಲಕ ಬಳಕೆದಾರರ ದೈನಂದಿನ ಜೀವನವನ್ನು ಸುಲಭವಾಗಿಸುತ್ತ ಬಂದಿದೆ. ಗೂಗಲ್ ನ Maps, Voice assistant, ಇನ್ನಿತರ ಅಪ್ಲಿಕೇಶನ್ನುಗಳು ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿವೆ. ಮುಂದಿನ ಉಪ್ಡೇಟುಗಳಲ್ಲಿ ಏನೇನಿದೆ ಎಂಬುದರ ಪಕ್ಷಿನೋಟ ಇಲ್ಲಿದೆ.
ಎಮೋಜಿಗಳ ಮಿಶ್ರಣ
ನೀವು ಈಗಾಗಲೇ ಗೂಗಲ್ ನ ಕೀಲಿಮಣೆ(G-board) ಬಳಸುತ್ತಿದ್ದರೆ ಅದರಲ್ಲಿ ಲಭ್ಯವಿರುವ ಎಮೋಜಿಗಳ ಆಯ್ಕೆ ಬಗ್ಗೆ ತಿಳಿದಿರುತ್ತದೆ. ಲಭ್ಯವಿರುವ ಎಮೋಜಿಗಳನ್ನು, 2 ಅಥವಾ ಹೆಚ್ಚು ಎಮೋಜಿಗಳ ಸಂಯೋಜನೆಯಿಂದ ಸುಮಾರು 14000ಕ್ಕೂ ಹೆಚ್ಚು stickerಗಳನ್ನೂ ಅಭಿವೃದ್ಧಿಗೊಳಿಸಲಾಗಿದೆ.
ಇನ್ನು ಮುಂದೆ ನೀವು ಯಾವುದಾದದೆರಡು ಎಮೋಜಿಗಳನ್ನು ಆಯ್ದುಕೊಂಡರೆ ಲಭ್ಯವಿರುವ ಸಂಯೋಜನೆಯ stickerಗಳು ಗೋಚರಿಸುತ್ತವೆ. ಇದು ಈಗಾಗಲೇ G-boardನ beta ಬಳಕೆದಾರರಿಗೆ ಲಭ್ಯವಿದ್ದು ಮುಂದಿನ ವಾರದಲ್ಲಿ ಎಲ್ಲರಿಗು ದೊರೆಯಲಿದೆ.
Computer Generated ಧ್ವನಿಗಳ ಮೂಲಕ ಇನ್ನಷ್ಟು ಆಡಿಯೋ ಪುಸ್ತಕಗಳು
ನಿಮಗೆ ಗೊತ್ತಿರುವಂತೆ ಯುವಜನತೆಯಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾದ ಕಾರಣ, ಬರವಣಿಗೆಯನ್ನು ಆಡಿಯೋ ಪುಸ್ತಕಗಳನ್ನಾಗಿವತ್ತ ಬಹಳಷ್ಟು ಕೆಲಸಗಳು ನಡೆದಿವೆ. ಆಡಿಯೋ ಪುಸ್ತಕ ಮಾಡಲು ಧ್ವನಿ ನೀಡುವ ನಿರೂಪಕನ ಪಾತ್ರ ಬಹಳ ಮುಖ್ಯವಾಗುತ್ತದೆ.
ಗೂಗಲ್ ಈಗಾಗಲೇ Computer Generated ಧ್ವನಿಗಳನ್ನು ಪುಸ್ತಕದ ನಿರೂಪಣೆಗೆ ಬಳಸಲು ಮುಂದಾಗಿದೆ. ಈ ಮೂಲಕ ಬಹಳಷ್ಟು ಪುಸ್ತಕಗಳು ಆಡಿಯೋ ಅವತರಣಿಕೆಗೆ ಬರಲಿವೆ. ಈಗಾಗಲೇ ಅಮೇರಿಕಾ ಮತ್ತು UK ಪುಸ್ತಕ ಪ್ರಕಾಶಕರ ಜೊತೆಗೆ ಈ ಪ್ರಕ್ರಿಯೆ ಬಗ್ಗೆ ಮಾತು ಕಥೆ ನಡೆದಿದ್ದು ಸಾವಿರಾರು ಪುಸ್ತಕಗಳ ಆಡಿಯೋ ಅವತರಣಿಕೆ 2021ರ ಮೊದಲಲ್ಲಿ ಲಭ್ಯವಾಗಲಿದೆ.
Voice Access ನೊಂದಿಗೆ ಮುನ್ನಡೆಯೋಣ
ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ರೂಪುಗೊಳಿಸಲಾದ Voice Access ಅಪ್ಲಿಕೇಶನ್ ಸಹಾಯದಿಂದ ಧ್ವನಿಯ ಮೂಲಕ ನಿಮ್ಮ ಮೊಬೈಲನ್ನು ಬಳಸಬಹುದಾಗಿದೆ. Machine learningನ ಸಹಾಯದಿಂದ ಸರಳ voice commandಗಳನ್ನು ಪ್ರತಿ ಅಪ್ಲಿಕೇಶನ್ನಿಗೆ ಸೇರಿಸಬಹುದಾಗಿದೆ.
ಉದಾಹರಣೆಗೆ google Photos ಅಪ್ಲಿಕೇಶನ್ ನಲ್ಲಿ “tap search”, “tap your map” ಹೀಗೆ ಹಲವಾರು commandಗಳನ್ನು ಉಪಯೋಗಿಸುವುದರ ಮೂಲಕ, ಕೈಗಳ ಬಳಕೆಯಿಲ್ಲದೆಯೇ ಸುಲಭವಾಗಿ navigate ಮಾಡಲು ಸುಲಭವಾಗಲಿದೆ. ಬಳಕೆದಾರರು play storeನಲ್ಲಿ beta ಆವೃತ್ತಿಯ Voice Access ಅಪ್ಲಿಕೇಶನ್ ಬಳಸಬಹುದಾಗಿದೆ.
Google mapsನ Go tab
Google mapsಗೆ ಹೊಸದಾಗಿ ‘Go’ ಎಂಬ tab ಸೇರಿಸಲಾಗಿದ್ದು ನೀವು ಆಗ್ಗಾಗ್ಗೆ ಭೇಟಿ ನೀಡುವ ಸ್ಥಳಗಳಾದ ಶಾಲೆ, ಕಚೇರಿ ಇತ್ಯಾದಿಗಳನ್ನು pinಮಾಡಿ, ಟ್ರಾಫಿಕ್, ವಿವಿಧ ದಾರಿಗಳು ಮತ್ತು ತಲುಪಲು ಬೇಕಾಗುವ ಅಂದಾಜು ಸಮಯವನ್ನು ನಿಖರವಾಗಿ ತಿಳಿಯಬಹುದಾಗಿದೆ
ನೀವು ಸಾರ್ವಜನಿಕ ಸಾರಿಗೆ ಬಳಸುತ್ತಿದ್ದರೆ ನಿರ್ದಿಷ್ಟ ಮಾರ್ಗವನ್ನು pin ಮಾಡಬಹುದಾಗಿದ್ದು, ಆಗಮನ ಮತ್ತು ನಿರ್ಗಮನ ಜೊತೆಗೆ ತಲುಪಲು ಬೇಕಾಗುವ ಅಂದಾಜು ಸಮಯವನ್ನು Go tabನಿಂದ ಮಾಹಿತಿ ಲಭ್ಯವಾಗಲಿದೆ. ಒಂದೇ ವಿಳಾಸಕ್ಕೆ ಹಲವಾರು ಮಾರ್ಗಗಳನ್ನು pin ಮಾಡುವ ಆಯ್ಕೆಯು ದೊರೆಯಲಿದೆ. ಮುಂಬರುವ ವಾರದಲ್ಲಿ ಈ update ಲಭ್ಯವಾಗಲಿದೆ.
ಹೆಚ್ಚು ದೇಶಗಳಿಗೆ Android auto
ನಿಮ್ಮ ಮೊಬೈಲ್ ನಲ್ಲಿರುವ ಅಪ್ಲಿಕೇಶನ್ನುಗಳು ಮತ್ತು ಸೇವೆಗಳು ಕಾರಿನ displayಗೆ ತರುವಲ್ಲಿ Android auto ಯಶಸ್ವಿಯಾಗಿದ್ದು, ಚಲಿಸುವಾಗ googleನೊಂದಿಗೆ ಮಾತನಾಡುವ ಮೂಲಕ ಹಾಡುಗಳನ್ನು play ಮಾಡಲು, ಸಂದೇಶ ಮತ್ತು ಕರೆಗಳನ್ನು ಮಾಡಲು ಬಳಸಬಹುದು.
ಆಂಡ್ರಾಯ್ಡ್ 9ನೇ ಆವೃತ್ತಿಯಿಂದ ಇತ್ತೀಚಿನ ಎಲ್ಲ ಮೊಬೈಲುಗಳಲ್ಲಿ android auto ಲಭ್ಯವಿದ್ದು, ಇನ್ನಷ್ಟು ದೇಶಗಳಲ್ಲಿ ಬಳಸಲು ಸಿದ್ಧವಿದೆ.
Near by share ಮೂಲಕ ಫೈಲು/ಅಪ್ಲಿಕೇಶನ್ನುಗಳ ಹಂಚಿಕೆ
“google play store > my apps and games > Near by share” ಗೆ ತೆರಳುವ ಮೂಲಕ ಸಮೀಪವಿರುವ ಯಾವುದೇ android ಫೋನಿಗೆ ಇಂಟರ್ನೆಟ್ ನ ಅಗತ್ಯವಿಲ್ಲದೆ ಅಪ್ಲಿಕೇಶನ್ ಗಳನ್ನು ಹಂಚಬಹುದಾಗಿದೆ. ಮುಂದಿನ ವಾರದಲ್ಲಿ ಈ ಅಪ್ಡೇಟ್ ಹೊರಬೀಳಲಿದೆ.
