IEEEನಿಂದ ಮಾನ್ಯತೆ ಪಡೆದ ಭಾರತದ ರೇಡಿಯೋ ದೂರದರ್ಶಕ

Share

ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹಾರಾಷ್ಟ್ರದ ಪುಣೆದಲ್ಲಿರುವ Gaint Meterwave Radio Telescope (GMRT)ನ ಪಾತ್ರವನ್ನು ಪರಿಗಣಿಸಿ IEEE(Institute of Electrical and Electronics Engineers) “ಜಾಗತಿಕ ಮೈಲಿಗಲ್ಲು” ಎಂಬ ಮಾನ್ಯತೆ ನೀಡಿದೆ.

ಅತಿ ಸೂಕ್ಷ್ಮ ರೇಡಿಯೋ ತರಂಗಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ರೇಡಿಯೋ ದೂರದರ್ಶಕಗಳಲ್ಲಿ ಇದೂ ಒಂದು. ಈ ಮಾನ್ಯತೆ ಪಡೆದಿರುವ ಭಾರತದ ಕೇವಲ 3ನೇ ಯೋಜನೆ ಇದಾಗಿದ್ದು. ಮೊದಲೆರಡು ಯೋಜನೆಗಳು, ಜೆ ಸಿ ಬೋಸ್ ಅವರ ರೇಡಿಯೋ ತರಂಗಗಳ ಉತ್ಪಾದನೆ ಮತ್ತು ಗ್ರಹಿಕೆ ಸಂಶೋಧನೆ ಮತ್ತು ಸರ್ ಸಿವಿ ರಾಮನ್ ಅವರ “ರಾಮನ್ effect” ಆಗಿವೆ.

“ಜಾಗತಿಕ ಮೈಲಿಗಲ್ಲು” ಮಾನ್ಯತೆಗೆ ಭಾಜನವಾಗಲು ಸಂಶೋದನೆಗಳು ಅಥವಾ ಯೋಜನೆಗಳು , ಆಧುನಿಕ ತಂತ್ರಜ್ಞಾನಕ್ಕೆ ನಾಂದಿ ಹಾಡುವುದಲ್ಲದೆ ಮನುಕುಲದ ಉದ್ದಾರಕ್ಕೆ ದಾರಿ ಮಾಡಿಕೊಟ್ಟಿರಬೇಕು ಮತ್ತು ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.

ಈ ಬಗ್ಗೆ ಭಾರತದ ರಾಷ್ತ್ರೀಯ ರೇಡಿಯೋ ಖಗೋಳಶಾಸ್ತ್ರ ಸಂಸ್ಥೆಯ (NCRA) ನಿರ್ದೇಶಕರಾದ ಯಶವಂತ್ ಗುಪ್ತ ಸರಣಿ ಟ್ವೀಟ್ ಗಳ ಮೂಲಕ ಮಾಹಿತಿ ನೀಡಿದ್ದಾರೆ.

GMRT 45ಮೀ ಸುತ್ತಳತೆಯ 30 ಆಂಟೆನಾಗಳನ್ನು ಒಳಗೊಂಡಿದ್ದು 26 ವರ್ಷಗಳಿಂದ ಖಗೋಳ ವಿಜ್ಞಾನಿಗಳು ಈ ದೂರದರ್ಶಕವನ್ನು ಬಳಸುತ್ತಿದ್ದಾರೆ. “ದೂರದರ್ಶಕದ ನವೀನ ಆಂಟೆನಾ ವಿನ್ಯಾಸ, ರಿಸೀವರ್ ವ್ಯವಸ್ಥೆ, ಆಪ್ಟಿಕ್ ಫೈಬರ್ ಮೂಲಕ ಸಿಗ್ನಲ್ ರವಾನೆ ಮಾಡುವ ತಂತ್ರಜ್ಞಾನ ಅತ್ಯಂತ ಶ್ರೇಷ್ಠ. ಪಲ್ಸರ್ ಸೂಪರ್ನೋವಾ, ಗ್ಯಾಲಕ್ಸಿಗಳ ಅಧ್ಯಯನಕ್ಕೆ GMRTಯ ಕೊಡುಗೆ ಅಪಾರ. ವಿಶ್ವವನ್ನು ಮಾನವ ಅರ್ಥಮಾಡಿಕೊಳ್ಳುವಲ್ಲಿ ಈ ದೂರದರ್ಶಕ ನೆರವಾಗಿದ್ದು ಈ ಮನ್ನಣೆಗೆ ಅರ್ಹ” ಎಂದು IEEE ಹೇಳಿದೆ.