ನಿಮ್ಮ ಫೋನ್ ನಂಬರ್ ಗಳು ಮಾರಾಟಕ್ಕಿವೆ!

Share

ಫೇಸ್ಬುಕ್ ನ ಬರೋಬ್ಬರಿ 500 ಮಿಲಿಯನ್ ಬಳಕೆದಾರರ ಡೇಟಾವನ್ನು ಟೆಲಿಗ್ರಾಂನಲ್ಲಿ ಬೋಟ್(Bot)ನ ಮೂಲಕ ಪ್ರತಿಯೊಂದು ವೈಯಕ್ತಿಕ ಡೇಟಾಗೆ, 20 ಡಾಲರ್ ನಂತೆ ಮಾರಾಟ ಮಾಡಲಾಗುತ್ತಿದೆ .

ಆನ್ಲೈನ್ ಭದ್ರತಾ ಸಂಶೋಧಕ ಅಲೋನ್ ಗಲ್ ಪ್ರಕಾರ, ಬೋಟ್ ರಚಿಸಿದವನಿಗೆ ಶುಲ್ಕ ನೀಡುವ ಮೂಲಕ ಯಾರಾದರೂ ಸಹ ಫೇಸ್ಬುಕ್ ನ ಲಕ್ಷಾಂತರ ಮಂದಿಯ ಫೋನ್ ನಂಬರ್ ಗಳನ್ನು ಸಂಗ್ರಹಿಸಿಡಲಾದ databaseಗೆ ಸುಲಭವಾಗಿ ಪ್ರವೇಶ ಪಡೆಯಬಹುದು ಎಂದು Motherboard ಪತ್ರಿಕೆಗೆ ವರದಿ ನೀಡಿದ್ದಾರೆ.

Motherboard ನಡೆಸಿದ ಪರೀಕ್ಷೆಯಲ್ಲಿ ಬೋಟ್ “ಇದು ಫೇಸ್ಬುಕ್ ಬಳಕೆದಾರರ ಮೊಬೈಲ್ ನಂಬರ್ ಗಳನ್ನು ಹುಡುಕುವಲ್ಲಿ ಸಹಕರಿಸಲಿದೆ” ಎಂಬ ಸಂದೇಶ ನೀಡಲಿದ್ದು, ನಂತರದಲ್ಲಿ ನಿಮಗೆ ಬೇಕಾದ ಫೇಸ್ಬುಕ್ ಬಳಕೆದಾರರ user idಯನ್ನು ಹಂಚಿಕೊಳ್ಳುವುದರ ಮೂಲಕ ಅದಕ್ಕೆ ಸಂಭಂದಿಸಿದ ಮೊಬೈಲ್ ನಂಬರ್ ತೆಗೆದುಕೊಳ್ಳಬಹುದಾಗಿದೆ. ವಿಶೇಷವೆಂದರೆ ಮೊಬೈಲ್ ನಂಬರ್ ಬಳಸಿ ಅದಕ್ಕೆ ಹೊಂದಿಕೆಯಾಗುವ user id ಕೂಡ ಪಡೆಯಬಹುದಾಗಿದೆ.

ಪರೀಕ್ಷೆಯಲ್ಲಿ ಒಬ್ಬ ಫೇಸ್ಬುಕ್ ಬಳಕೆದಾರನ ಮೊಬೈಲ್ ನಂಬರ್ ನಿಖರವಾಗಿ ತಿಳಿಸಿದೆ. ಈ ಬೋಟ್ ತನ್ನ ಬಳಿ ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 15 ದೇಶಗಳ ಫೇಸ್ಬುಕ್ ಬಳಕೆದಾರರ ಡೇಟಾ ಇರುವುದಾಗಿ ಹೇಳಿಕೊಂಡಿದೆ.

2019 ರಲ್ಲಿ ಇದೆ ರೀತಿ ಫೇಸ್ಬುಕ್ ನ ಡೇಟಾ ಭದ್ರತೆ ಅಸ್ತವ್ಯಸ್ತವಾಗಿದ್ದು, ಅದನ್ನು ಸರಿಪಡಿಸಿದ್ದಾಗಿ ಹೇಳಿಕೊಂಡಿತ್ತು. Motherboard ಕಂಪನಿ ಫೇಸ್ಬುಕ್ ಗೆ ಈ ಬಗ್ಗೆ ಪ್ರತಿಕ್ರಿಯಿಸಲು ಸಂಪರ್ಕಿಸಿದಾಗ ಈ ಡೇಟಾ 2019 ಅಥವಾ ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಸೃಷ್ಟಿಯಾದ ಖಾತೆಗಳ ಡೇಟವಾಗಿದ್ದು ಇತ್ತೀಚಿನ ಡೇಟಾ ಭದ್ರವಾಗಿದೆ ಎಂದು ಪ್ರತಿಕ್ರಿಯೆ ನೀಡಿದೆ.

ಫೇಸ್ಬುಕ್ ನಲ್ಲಿ ಸದ್ಯಕ್ಕೆ 2 ಬಿಲಿಯನ್ ಸಕ್ರಿಯ ಬಳಕೆದಾರರಿದ್ದು, ಈ ರೀತಿ ಜನರ ಡೇಟಾ ಸುರಕ್ಷತೆಗೆ ನಿರ್ಲಕ್ಷ ಮಾಡುವುದು ಸರಿಯಲ್ಲ. ಫೇಸ್ಬುಕ್ ಬಳಕೆದಾರರು ಎಚ್ಚರದಿಂದಿರುವುದು ಒಳ್ಳೆಯದು.

ಮೂಲ ಸುದ್ದಿ: Motherboard blog