Image by Gerd Altmann from Pixabay
ಇಬ್ಬರು ಮಹಿಳೆಯರು, ಎಮ್ಯಾನುಯೆಲ್ ಕರ್ಪೆಂಟಿಯರ್ ಹಾಗು ಜೆನಿಫರ್ ದೌಡ್ನ ಈ ವರ್ಷದ ರಸಾಯನಶಾಸ್ತ್ರದ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಜೆನೆಟಿಕ್ ಕತ್ತರಿ, ಸಂಕ್ಷಿಪ್ತವಾಗಿ ಹೇಳಬೇಕಂದರೆ ನಮ್ಮ ಪ್ರತಿ ಜೀವಕೋಶದಲ್ಲಿರುವ ಡಿ.ಎನ್.ಎ.(DNA) ಯನ್ನು ಇಚ್ಛೆಯನುಸಾರ ಮಾರ್ಪಡಿಸಲು ಕತ್ತರಿಯ ಹಾಗೆ ಬಳಸಬಹುದಾದ ಸಾಧನ. ಈ ಸಾಧನಕ್ಕೆ ಇವರಿಟ್ಟ ಹೆಸರು Crispr-Cas9 “genetic scissors”.

ಕೃಪೆ: © Nobel Media. Ill. Niklas Elmehed

ಕೃಪೆ: © Nobel Media. Ill. Niklas Elmehed
ಇದರಿಂದ ವ್ಯದ್ಯಕೀಯ ಹಾಗು ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಅನುಕೂಲಗಳಿವೆ. ಡಿಎನ್ಎ ಸರಣಿಯಲ್ಲಿ ಆದ ಯಡವಟ್ಟಿನಿಂದ ಉಂಟಾಗುವ ಖಾಯಿಲೆಗಳನ್ನು Crispr-Cas9 ಬಳಸಿ ಸರಿಯಾದ ಸರಣಿಯನ್ನು ಜೋಡಿಸಬಹುದಾಗಿದೆ. ಕ್ಯಾನ್ಸರ್ ಸೇರಿದಂತೆ ಹಲವಾರು ಅನುವಂಶೀಯ ರೋಗಗಳ ಚಿಕಿತ್ಸೆಗೆ ಈ ಸಾಧನವನ್ನು ಬಳಸಲು ಈಗಾಗಲೇ ಸಂಶೋಧನೆಗಳು ಶುರುವಾಗಿವೆ.
Crispr-Cas9 ಸಿಕೆಲ್ ಸೆಲ್ ಅನಿಮಿಯಾ (Sickle cell anemia) ಗುಣಪಡಿಸಬಲ್ಲ ತಾಕತ್ತು ಹೊಂದಿದ್ದು ಈ ಬಗ್ಗೆಯೂ ಸಂಶೋಧನೆಗಳು ಭರದಿಂದ ಸಾಗಿವೆ.
ಇನ್ನು ಕೃಷಿ ಕ್ಷೇತ್ರಕ್ಕೆ ಬಂದರೆ ಆಹಾರದ ಕೊರತೆ ಎದುರಿಸುತ್ತಿರುವ ಜಗತ್ತಿಗೆ ಹೆಚ್ಚು ಇಳುವರಿ ತರುವ ಮತ್ತು ಅತಿ ಬೇಗ ಬೆಳೆಯುವ ಸಸಿಗಳ ಅವಶ್ಯಕತೆ ಇದೆ. ಈಗಿರುವ ಸಸಿಗಳ ಜೀನ್(gene) ಸಂಯೋಜನೆಯನ್ನು ಮಾರ್ಪಾಡು ಮಾಡುವಲ್ಲಿ Crispr-Cas9 ಮುಖ್ಯ ಪಾತ್ರ ವಹಿಸಲಿದೆ.
ಇದನ್ನು ಅನೈತಿಕವಾಗಿ ಬಳಸಿ ತಮಗಿಷ್ಟ ಬಂದಂತೆ ಜೀವಿಗಳನ್ನು ಸೃಷ್ಟಿಸಬಹುದೆನ್ನುವ ಮಾಹಿತಿಯನ್ನು ತಳ್ಳಿ ಹಾಕುವಂತಿಲ್ಲ. ಡಿಎನ್ಎ ಮಾರ್ಪಾಡಿಗೆ , Crispr-Cas9 ಬಳಕೆಯ ಬಗ್ಗೆ ಈಗಾಗಲೆ ಚರ್ಚೆಗಳು ಆರಂಭವಾಗಿದ್ದು, ನೈತಿಕ ಕಾರ್ಯಕ್ಕೆ ಮಾತ್ರ ಸೀಮಿತವಾದರೆ ಮನುಕುಲಕ್ಕೆ ಒಳ್ಳೆಯದು.
ಸುದ್ದಿಯ ಮೂಲ: Nobel Prize press release