ಗೇಮಿಂಗ್ ಕನ್ಸೋಲ್‌ಗಳು: ಸಂಕ್ಷಿಪ್ತವಾಗಿ (gaming consoles explained as simple as possible in kannada)

Share

ಗೇಮಿಂಗ್ ಕನ್ಸೋಲ್‌ಗಳಾದ ಮೈಕ್ರೋಸಾಫ್ಟ್ ನ X-Box, ಸೋನಿ ಯ play station, Nintendoಗಳು ಕಂಪ್ಯೂಟರ್ ಗಳೇ ಆಗಿವೆ. ಇವಕ್ಕೂ ಸ್ಟೋರೇಜ್ ಗೆ ಹಾರ್ಡ್ ಡಿಸ್ಕ್ (hard disc) ಇರುತ್ತದೆ, ಆಪರೇಟಿಂಗ್ ಸಿಸ್ಟಮ್(OS) ಅಳವಡಿಸಲಾಗಿರುತ್ತದೆ. ಇಂದಿನ ಗೇಮಿಂಗ್ ಕನ್ಸೋಲ್‌ಗಳನ್ನು ಇಂಟರ್ನೆಟ್ ಗೆ ಕನೆಕ್ಟ್ ಮಾಡಿ ಆನ್ಲೈನ್ ಗೇಮ್ಸ್ ಗಳನ್ನೂ ಸಹ ಆಡಬಹುದು, Netflix ಹಾಗು ಇನ್ನಿತರ ಸೇವೆಗಳನ್ನು ಸವಿಯಬಹುದು. ಹಾಗಿದ್ದರೆ ಕಂಪ್ಯೂಟರ್ ನಲ್ಲಿ ಗೇಮ್ಸ್ ಆಡುವುದಕ್ಕೂ ಕನ್ಸೋಲ್‌ಗಳಲ್ಲಿ ಆಡುವುದಕ್ಕೂ ವ್ಯತ್ಯಾಸಗಳೇನು? ನಿಮ್ಮ ಈ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ.

ನೀವು ಗೇಮಿಂಗ್ ಕಂಪ್ಯೂಟರ್ ಬಿಲ್ಡ್ ಮಾಡಲು ಅತಿ ಹೆಚ್ಚು ಹಣ ಬೇಕಾಗತ್ತದೆ, ಅತಿ ದುಬಾರಿ ಗ್ರಾಫಿಕ್ಸ್ ಕಾರ್ಡುಗಳ ಅಗತ್ಯವಿರುತ್ತದೆ ಮತ್ತು ಎಲ್ಲ ರೀತಿಯ ಬಿಡಿಭಾಗಗಳನ್ನು ಖರಿದಿಸುವುದು ಕಷ್ಟ ಸಾಧ್ಯ, ಆದರೆ ನೀವು ಲಭ್ಯವಿರುವ ಎಲ್ಲ ಗೇಮುಗಳನ್ನು ಒಮ್ಮೆ ಖರೀದಿಸಿದರೇ ಎಲ್ಲ ಕಾಲಕ್ಕೂ ಆಡಬಹುದು. ಮಲ್ಟಿ ಪ್ಲೇಯರ್ ಆಯ್ಕೆಗಳನ್ನು ಹಣ ಕೊಟ್ಟು ಕೊಳ್ಳಬೇಕಾಗಿಲ್ಲ. ನೀವು ಅತಿ ಹೆಚ್ಚು ಗ್ರಾಫಿಕ್ಸ್ ಅಗತ್ಯವಿರುವ ಗೇಮ್ ಗಳನ್ನು ಕಂಪ್ಯೂಟರ್ ನ ಗ್ರಾಫಿಕ್ಸ್ ಕಾರ್ಡ್ ಮತ್ತು ಸ್ಟೋರೇಜ್ ಅನ್ನು ಹೆಚ್ಚಿಸಿಕೊಂಡು ಆಡುವ ಅನುಕೂಲವಿರುತ್ತದೆ. ಮೊದಲೇ ಹೇಳಿದಂತೆ ಗೇಮಿಂಗ್ ಕಂಪ್ಯೂಟರ್ ಗಳನ್ನು ಸೆಟಪ್(setup ) ಮಾಡುವುದು ಕಷ್ಟದ ಕೆಲಸ ಹಾಗು ದೊಡ್ಡ ಗಾತ್ರದಲ್ಲಿರುದರಿಂದ ಹೆಚ್ಚು ಜಾಗದ ಅವಶ್ಯಕತೆ ಇರುತ್ತದೆ.

ಈಗ ಕನ್ಸೋಲ್ ಗೇಮಿಂಗ್ ಗೆ ಬರೋಣ , ಗೇಮಿಂಗ್ ಕನ್ಸೋಲ್‌ಗಳು ಗೇಮಿಂಗ್ ಕಂಪ್ಯೂಟರ್ಗಳಷ್ಟು ದುಬಾರಿಯೇನಿಲ್ಲ, ಎಲ್ಲ ದರಗಳಲ್ಲೂ ಲಭ್ಯವಿದೆ. ಗೇಮಿಂಗ್ ಕನ್ಸೋಲ್‌ಗಳು ಚಿಕ್ಕ ಪೆಟ್ಟಿಗೆಯಂತಿರುವುದರಿಂದ ಹೆಚ್ಚು ಜಾಗದ ಅವಶ್ಯಕತೆ ಇಲ್ಲ ಹಾಗು ನೀವು ಸುಲಭವಾಗಿ ಸೆಟಪ್ ಮಾಡಬಹುದು ಆದರೆ ಯಾವ ಗೇಮ್ ಗಳನ್ನು ಆಡಲು ಇಷ್ಟ ಪಡುವಿರೋ ಆ ಕಂಪನಿಯ ಕನ್ಸೋಲ್‌ಗಳನ್ನೇ ಖರೀದಿಸಬೇಕು, ಉದಾಹರಣೆಗೆ X-Box ನಲ್ಲಿ ಲಭ್ಯವಿರುವ ಗೇಮ್ ಗಳು play stationನಲ್ಲಿ ಲಭ್ಯವಿರುವುದಿಲ್ಲ . ನಿಮ್ಮ ಮನೆಗಳಲ್ಲಿ ಗೇಮಿಂಗ್ ಕನ್ಸೋಲ್ ಅನ್ನು ಟಿವಿಗೆ ಕನೆಕ್ಟ್ ಮಾಡಿ ಒಟ್ಟಿಗೆ ಕುಳಿತು joystick ಬಳಸಿ ಮಲ್ಟಿ ಪ್ಲೇಯರ್ ಗೇಮುಗಳನ್ನು ಸವಿಯಬಹುದು ಆದರೆ ಗೇಮುಗಳ ಅನುಸಾರ ನೀವು ಮಲ್ಟಿ ಪ್ಲೇಯರ್ ಆಯ್ಕೆಗೆ ಪ್ರತ್ಯೇಕವಾಗಿ ಹಣ ಪಾವತಿಸಬೆಕಾಗುತ್ತದೆ. ಕನ್ಸೋಲ್ ಗೇಮ್ ಗಳನ್ನು ನೀವು ಆಯಾ ಗೇಮ್ ಅನುಸಾರ ವರ್ಷಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಂದಾದಾರಿಕೆ(subscription) ಪಡೆಯಬೇಕಾಗುತ್ತದೆ. ಸ್ಟೋರೇಜ್ ಅನ್ನು ಒಂದು ಮಟ್ಟದ ವರೆಗೆ ಮಾತ್ರ ಹೆಚ್ಚಿಸಬಹುದಾದ್ದರಿಂದ ಕನ್ಸೋಲ್‌ಗಳಲ್ಲಿ ಅತಿ ಹೆಚ್ಚು ಗೇಮ್ ಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ.

ಎರಡೂ ವೇದಿಕೆಗಳಲ್ಲೂ ಸಾಧಕ ಭಾದಕಗಳಲಿದ್ದು ನಿಮ್ಮ ಅಗತ್ಯತೆಯನುಸಾರ ಆಯ್ದುಕೊಳ್ಳುವುದು ಉತ್ತಮ. ಮೈಕ್ರೋಸಾಫ್ಟ್ ನಿನ್ನೆಯಷ್ಟೇ Xbox Series X ಮತ್ತು Xbox Series S ಗೇಮಿಂಗ್ ಕನ್ಸೋಲ್ ಗಳ ಬಿಡುಗಡೆಯ ದಿನಾಂಕ ಮತ್ತು ಬೆಲೆಯನ್ನು ಪ್ರಕಟಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: ಮೈಕ್ರೋಸಾಫ್ಟ್ ನ Xbox Series X vs Xbox Series S