ಯಾವುದೇ ಕಟ್ಟೆಳೆಗೊಳಪಡದೆ ಬಳಸಿ Grok!

Share

X ಬಳಸುಗನು ಯಾವುದೇ ಮುನ್ಗಾಪಿನ ಕಂತಿಲ್ಲದೆ ಅವರ ಸೇವೆಯಾದ ಅಣಕು ಜಾಣ್ಮೆಯ ಚಾಟ್‌ಬಾಟ್ Grok ಅನ್ನು ಬಳಸಬಹುದಾಗಿದೆ. ಈಗ ಪ್ರತಿ ಎರಡು ಗಂಟೆಗೆ ಹತ್ತು ಪ್ರಾಂಪ್ಟ್‌ಗಳನ್ನು ಎಡೆಗೊಡಲಾಗಿದೆ.

ಕೆಲ ಬಳಸುಗರು Grokನ ಕಟ್ಟೆಳೆಗೊಳಪಡದ ವರಸೆಯ ಇತ್ತೇದಿಕೆಯನ್ನು ಗಮನಿಸಿದ್ದಾರೆ. ಇದನ್ನು ಭಾರತದಲ್ಲೂ ಬಳಸಬಹುದಾಗಿದೆ.

ಈ ವರಸೆ ಎಲ್ಲೆಯೆಣಿಕೆಯಲ್ಲಿರುವುದರಿಂದ, ದಿನದಲ್ಲಿ ಮೂರು ತಿಟ್ಟಗಳನ್ನು ಬಗೆಯರಿಯುತ್ತದೆ. ಹಾಗು ಹತ್ತು ತಿಟ್ಟಗಳನ್ನು ಉತ್ಪಾದಿಸಬಹುದು. ಹೆಚ್ಚಿಗೆ ಬೇಕಿದ್ದಲ್ಲಿ ಹಣನೀಡಬೇಕಾಗುತ್ತದೆ.

Grok page

ಇದೇ ಮೊದಲು OpenAIನ ರೀತಿಯಲ್ಲೇ Grokನ ಬೆಲೆಯಿಲ್ಲದ ಆಯ್ಕೆ ನೀಡಲಾಗಿದೆ. ಮುಂಚೆ ಮುನ್ಗಾಪಿನ ಕಂತು ವರ್ಶಕ್ಕೆ ₹6,800 ಇಲ್ಲಾ ₹13,600 ಕಟ್ಟಿದ್ದ X ಬಳಕೆದಾರರು ಮಾತ್ರ ಬಳಸಬುಹುದಿತ್ತು.


ಇದು ಇಲಾನ್ ಮಸ್ಕ್ ಒಡೆತನ xAIನ ಹಂಚಿಕೆಯಾಗಿದೆ.