Fortnite ಮತ್ತು ಆಪಲ್ ಜಟಾಪಟಿ

Share

ಹಲವು ದಿನಗಳ ಮುನ್ನ ನೀವು ಆಪಲ್ ಕಂಪನಿಯ ಮಾರುಕಟ್ಟೆ  ಮೌಲ್ಯ ಎರಡು ಟ್ರಿಲಿಯನ್ ಡಾಲರ್ ದಾಟಿದ ಸುದ್ದಿಯನ್ನು ನೋಡಿರಬಹುದು. ಇದಕ್ಕೆ ಮುಖ್ಯ ಕಾರಣ ಆಪಲ್ ಪ್ರಸ್ತುತ ಸೇವೆಗಳ(ಸರ್ವಿಸಸ್) ಬಗ್ಗೆ ಹೆಚ್ಚಿನ ಒತ್ತನ್ನು ನೀಡಿರುವುದು.

ಒಮ್ಮೆ ಮೊಬೈಲ್ ಮಾರುವುದರಿಂದ ಬರುವ ಲಾಭ ವಿರಳ. ಅದೇ ಚಂದಾದಾರಿಕೆ(subscription) ಸೂತ್ರದ ಈ ನಡೆ ಆಪಲ್ ಕಂಪನಿಯು ಕೇವಲ ಎರಡೇ ವರ್ಷಗಳಲ್ಲಿ ಒಂದು ಟ್ರಿಲಿಯನ್ ನಿಂದ ಎರಡು ಟ್ರಿಲಿಯನ್ ಗೆ ತಲುಪಲು ಸಹಾಯ ಮಾಡಿದೆ.

ಈ ಲಾಭಂಶದ ಸಿಂಹಪಾಲು ಆಪಲ್ ನ ಆಪ್ ಸ್ಟೋರ್ (App Store) ನಿಂದ ಬರುತ್ತಿದೆ. ನೀವು ಯಾವುದೇ App ಅನ್ನು ಸ್ಟೋರಿನಲ್ಲಿ ಕೊಳ್ಳುವಾಗ ಆಪಲ್ ಶೇಖಡ 30%ರಷ್ಟು ಮೊತ್ತವನ್ನು ಪ್ರೊಸೆಸಿಂಗ್ ಶುಲ್ಕವನ್ನಾಗಿ ಪಡೆಯುತ್ತಿದೆ.

ಆದರೆ ಜನಪ್ರಿಯ ಗೇಮ್ ಆದ fortnite ಆಪಲ್ ನ ವಿರುದ್ಧ ಕೋರ್ಟ್ ಕೇಸ್ ಹಾಕಿದ್ದು, 30% ಶುಲ್ಕ ಪಾವತಿಸಲು ನಿರಾಕರಿಸಿದೆ.

ಇದಕ್ಕೆ ಉತ್ತರವಾಗಿ ಆಪಲ್ ಮತ್ತು ಗೂಗಲ್ ಎರಡೂ ಕಂಪನಿಗಳು Fortnite app ಅನ್ನು ನಿಷೇಧಿಸಿವೆ.

ಅನೇಕ ಕಂಪನಿಗಳು ಕೂಡ Fortnite ನ ದಾರಿ ಹಿಡಿದು ಆಪಲ್ ಗೆ ಶುಲ್ಕದ ದರವನ್ನು ಕಮ್ಮಿ ಮಾಡುವಂತೆ ಒತ್ತಾಯಿಸಿವೆ . ಈ ಎರಡೂ ಕಂಪೆನಿಗಳಲ್ಲಿ ಹಣದ ಸಾಮರ್ಥ್ಯ ಚೆನ್ನಾಗಿದ್ದು, ಧೀರ್ಘವಾದ ವಾದ-ವಿವಾದ ನಡೆಯುವ ಸಂಭವವಿದೆ.

ಒಟ್ಟಿನಲ್ಲಿ , ನೀವು iPhone ಬಳಕೆದಾರರಾಗಿದ್ದಲ್ಲಿ ಈ ನ್ಯೂಸ್ Fortnite ಪರವಾಗಿ ಬಂದರೆ ನಿಮಗೆಲ್ಲ App store ನ Paid ತಂತ್ರಾಂಶಗಳು ಕಡಿಮೆ ದರದಲ್ಲಿ ಡೌನ್ಲೋಡ್ ಮಾಡುವುದಕ್ಕೆ ಸಿಗಬಹುದು.