ಫ್ಲಿಪ್ಕಾರ್ಟ್ ನಲ್ಲಿ ಶಾಪಿಂಗ್ ಸುಗ್ಗಿ, ‘ಬಿಗ್ ಬಿಲಿಯನ್ ಡೇಸ್’ ದಿನಾಂಕ ಪ್ರಕಟ( Flipkart “Big Billion Days” sale dates announced)

Share

ಫ್ಲಿಪ್ಕಾರ್ಟ್ ನ ‘ಬಿಗ್ ಬಿಲಿಯನ್ ಡೇಸ್’ ಕಳೆದ ವಾರದಿಂದಲೇ ಸುದ್ದಿ ಮಾಡುತ್ತಿತ್ತು. ಪಕ್ಷಿ ನೋಟಕ್ಕಾಗಿ ಹಲವಾರು ಬಗೆಯ ವಸ್ತುಗಳ ಮೇಲಿರಬಹುದಾದ ಆಫರ್ ಗಳ ಬಗ್ಗೆ ಹಂತ ಹಂತವಾಗಿ ಫ್ಲಿಪ್ಕಾರ್ಟ್ ವೆಬ್ಸೈಟ್ ಹಾಗು ಅಪ್ಲಿಕೇಶನಿನಲ್ಲಿ ಪ್ರಕಟಿಸುತ್ತಿದೆ.

ಕೊನೆಗೂ ‘ಬಿಗ್ ಬಿಲಿಯನ್ ಡೇಸ್’ ನ ದಿನಾಂಕ ನಿಗದಿಯಾಗಿವೆ. ಫ್ಲಿಪ್ಕಾರ್ಟ್ ನ ವೆಬ್ಸೈಟ್ ನಲ್ಲಿರುವ ಮಾಹಿತಿಯ ಪ್ರಕಾರ ಅಕ್ಟೋಬರ್ 16 ರಿಂದ ಆರಂಭವಾಗಲಿದ್ದು 21 ರ ವರೆಗೆ ನಡೆಯಲಿದೆ. ಫ್ಲಿಪ್ಕಾರ್ಟ್ ಪ್ಲಸ್ ಚಂದಾದಾರರಿಗೆ 15 ರಂದೇ ಪ್ರವೇಶ ದೊರೆಯಲಿದೆ.

ಎಂದಿನಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10% ತ್ವರಿತ ರಿಯಾಯಿತಿ ದೊರೆಯಲಿದೆ. ಎಚ್. ಡಿ. ಏಫ್. ಸಿ.(HDFC), ಐಸಿಐಸಿಐ(ICICI) ಬ್ಯಾಂಕ್ ಗಳು ಸೇರಿದಂತೆ ಬಜಾಜ್ ಫಿನ್ ಸರ್ವ್ ನ ಕ್ರೆಡಿಟ್ ಹಾಗು ಡೆಬಿಟ್ ಕಾರ್ಡುಗಳ ಮೇಲೆ ಬಡ್ಡಿ ರಹಿತ ಕಂತಿನ ಅನುಕೂಲ ದೊರೆಯಲಿದೆ. ಪೆಟಿಎಂ ಬಳಸಿ ಪಾವತಿಸುವವರಿಗೆ ಕ್ಯಾಶ್ ಬ್ಯಾಕ್ ಕೂಡ ಸಿಗಲಿವೆ.

ಈಗಾಗಾಲೆ ಹಲವು ಮೊಬೈಲುಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಮತ್ತು ಗೃಹೋಪಯೋಗಿ ವಸ್ತುಗಳ ಬೆಲೆ ಪ್ರಕಟವಾಗಿದ್ದು, ಗ್ರಾಹಕರು ವಿಷಲಿಸ್ಟ್(wish list) ಮಾಡುವುದರಲ್ಲಿ ನಿರತರಾಗಿದ್ದಾರೆ. ಅಮೆಜಾನ್ ನ ಗ್ರೇಟ್ ಇಂಡಿಯನ್ ಸೇಲ್ ನ ದಿನಾಂಕಗಳು ಪ್ರಕಟವಾಗಿಲ್ಲವಾದರೂ ಬಿಗ್ ಬಿಲಿಯನ್ ಡೇಸ್ ಜೊತೆ ಘರ್ಷಣೆಯಾಗುವ ಎಲ್ಲ ಸಾಧ್ಯತೆಗಳಿವೆ.