ಮಸ್ಕ್ ಈಗ ವಿಶ್ವದ 3ನೇ ಅತೀ ಶ್ರೀಮಂತ ವ್ಯಕ್ತಿ

Share

ಇವತ್ತಿಗೆ ಮಸ್ಕ್ ಅವರ ಒಟ್ಟು ಮೌಲ್ಯ 115.4 ಬಿಲಿಯನ್ ಡಾಲರ್. ಈ ವರ್ಷದಲ್ಲಿ ಟೆಸ್ಲಾ (Tesla) ಕಂಪನಿಯ ಶೇರ್ ದರದಲ್ಲಿ ಶೇಕಡಾ 500 ರಷ್ಟು ಹೆಚ್ಚಳದ ಪರಿಣಾಮ ಮಸ್ಕ್ ಅವರ ಮೌಲ್ಯ ಕಳೆದ ವರ್ಷಕ್ಕಿಂತ 87.8 ಬಿಲಿಯನ್ನಷ್ಟು ಹೆಚ್ಚಳವಾಗಿದೆ . ಈ ಮೂಲಕ ಮಸ್ಕ್ , ಫೇಸ್ಬುಕ್ (Facebook) ನ ಮಾರ್ಕ್ ಝುಕರ್ಬೆರ್ಗ್( ಒಟ್ಟು ಮೌಲ್ಯ 110.8 ಬಿಲಿಯನ್ ಡಾಲರ್ ) ಅವರನ್ನು ಹಿಂದಿಕ್ಕಿ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ .

ಮಸ್ಕ್ ಅವರ ಟೆಸ್ಲಾ ಕಂಪನಿ ಯಾ ಒಟ್ಟು ಮೌಲ್ಯ 464 ಬಿಲಿಯನ್ ಡಾಲರ್. ವಿಶ್ವದೆಲ್ಲೆಡೆ ಟೆಸ್ಲಾ ದ ಶೇರ್ ಗೆ ಬೇಡಿಕೆ ಹೆಚ್ಚಿದ್ದು ಜನರು ಟೆಸ್ಲಾ ಮೇಲಿಟ್ಟಿರುವ ವಿಶ್ವಾಸವನ್ನು ತೋರುತ್ತದೆ . ಮಸ್ಕ್ ನ್ಯೂರಾಲಿಂಕ್ (neuralink) ಎಂಬ ಕಂಪೆನಿಯನ್ನೂ ಪ್ರಾರಂಭಿಸಿದ್ದು ಮಾನವ ಮೆದುಳಿಗೆ ಕಂಪ್ಯೂಟರ್ ಚಿಪ್(Link) ಜೋಡಿಸಿ , ಮೆದುಳಿನ ಸಂಬಂಧಿತ ರೋಗಿಗಳಿಗೆ (Alzheimer disease, Paraplegia) ನೆರವಾಗುವಂತೆ ಮಾಡುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ . ಪ್ರಯೋಗಾತ್ಮಕವಾಗಿ Link ಅನ್ನು ಹಂದಿ ಮೆದುಳಿಗೆ ಅಳವಡಿಸಿದ್ದು ಅದರ ಮೆದುಳಿನ ಸಿಮ್ಯುಲೇಷನ್ಸ್(simulations) ಭರವಸೆ ಮೂಡಿಸಿವೆ.

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಮೆಜಾನ್( Amazon) ಕಂಪನಿ ಮಾಲೀಕ ಜೆಫ್ ಬೆಝೋಸ್ ಮೊದಲ ಸ್ಥಾನದಲ್ಲಿದ್ದಾರೆ (ಒಟ್ಟು ಮೌಲ್ಯ 200 ಬಿಲಿಯನ್ ಡಾಲರ್ ) . ಮಸ್ಕ್ ಅವರ ಸ್ಪೇಸ್ ಎಕ್ಸ್ (SpaceX), ಟೆಸ್ಲಾ (Tesla) ಮತ್ತು ನ್ಯೂರಾಲಿಂಕ್ (neuralink) ಕಂಪನಿಗಳ ವಹಿವಾಟು ಮತ್ತು ಬೆಳವಣಿಗೆಗಳನ್ನು ಗಮನಿಸಿದರೆ ಮಸ್ಕ್ ಅಗ್ರಸ್ಥಾನಕ್ಕೇರುವ ಕಾಲ ದೂರವಿಲ್ಲ .