ವಿಂಡೋಸ್ 11 (ಮತ್ತು 10) ರಲ್ಲಿ ಹೆಚ್ಚು ಕಾಡುವುದೆಂದರೆ ಆಪರೇಟಿಂಗ್ ಸಿಸ್ಟಂನಲ್ಲಿನ ಹುಡುಕಾಟದಲ್ಲಿ ಬಿಂಗ್’ನಿಂದ ದೊರೆತದನ್ನು ತೋರಿಸುವುದು. ನಿಮ್ಮ ಮೆಚ್ಚಿನ ಅಪ್ಲಿಕೇಶನ್ ಅಥವಾ ನೀವು ಕೆಲಸ ಮಾಡುತ್ತಿರುವ ವರ್ಡ್ ಡಾಕ್‌ಗೆ ಶಾರ್ಟ್‌ಕಟ್ ಅನ್ನು ಹುಡುಕಲು ಬಯಸಿದರೆ, PCಯಲ್ಲಿರುವುದನ್ನು ತೋರುವ ಬದಲು ಬಿಂಗ್’ನಿಂದ ಪಟ್ಟಿಮಾಡಿ ತೋರಿಸುತ್ತದೆ.
ಇದನ್ನು ನಿಲ್ಲಿಸಲು ನಿಮ್ಮ PCನಲ್ಲಿ ಈ ಕೆಳಗಿನಂತೆ ಮಾರ್ಪಾಡು ಮಾಡಿ.
1. “Registry Editor”ಅನ್ನು ತೆರೆಯಿರಿ. Search tabನಲ್ಲಿ “regedit” ಅನ್ನು ಹುಡುಕಿ ಮೊದಲಿಗೆ ದೊರೆತದನ್ನು ಕ್ಲಿಕ್ ಮಾಡುವ ಮೂಲಕ ನೀವು ಅಲ್ಲಿಗೆ ಹೋಗಬಹುದು. ಬಳಕೆದಾರರ ಸೆಲುವಿನ ಅಂಕೆಯನ್ನು ಕೇಳಿದರೆ ಹೌದು ಎಂದು ಕ್ಲಿಕ್ ಮಾಡಿ.

2. HKEY_CURRENT_USER\Software\Policies\Microsoft\Windows ಗೆ ಹೋಗಿ

3. “Explorer” ಹೆಸರಿನ ಹೊಸ ಕೀ ಅನ್ನು ಹುಟ್ಟಿಸಿ. ಹೊಸ ಕೀ ಹುಟ್ಟಿಸಲು “Windows” ಕೀ/ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ, New->Key ಆರಿಸಿ, “Explorer” ಎಂದು ಹೆಸರಿಸಿ.

4. ಹೊಸ DWORD (32-bit) ರಿಜಿಸ್ಟ್ರಿ ಕೀಯನ್ನು ರಚಿಸಿ ಮತ್ತು ಅದಕ್ಕೆ DisableSearchBoxSuggestions ಎಂದು ಹೆಸರಿಸಿ. ಬಲಬದಿಯಲ್ಲಿ ಬಲ ಕ್ಲಿಕ್ ಮಾಡಿ, New->DWORD (32-bit) Value ಅನ್ನು ಆಯ್ಕೆ ಮಾಡುವ ಮೂಲಕ ನೀವು ಹೊಸ ನೋಂದಾವಣೆ ಕೀಲಿಯನ್ನು ರಚಿಸಬಹುದು.

5. DisableSearchBoxSuggestions ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು Value data: ಜಾಗದಲ್ಲಿ 1 ಅನ್ನು ತುಂಬಿ, OK ಕ್ಲಿಕ್ ಮಾಡಿ

6. “Registry Editor”ಅನ್ನು ಮುಚ್ಚಿ, reboot ಮಾಡಿ
ಈ ಮೇಲಿನ ರೀತಿ ಮಾಡುವುದರಿಂದ MSN ನಿಂದ ಬರುವ ಮೇಲೇರಿಕೆ ಬರಹಗಳು ಮತ್ತು ಥಂಬ್‌ನೇಲ್‌ಗಳನ್ನು ತೋರದೆ, ವೇಗದ ಲೋಡ್ ಹುಡುಕಾಟ ಮೆನುವನ್ನು ಪಡೆಯುವಿರಿ.

ಮತ್ತು ನಿಮ್ಮ PC ಯಲ್ಲಿ ಇರದಿರುವುದನ್ನು ನೀವು ಹುಡುಕಿದರೆ ಕೆಲವು ಸೆಕೆಂಡುಗಳನ್ನು ತೆಗೆದುಕೊಂಡು ಇಂಟರ್ನೆಟ್‌ನಿಂದ ಪಡೆದ ಪಟ್ಟಿಯನ್ನು ತೋರುವಬದಲು, ಈಗ ನೇರವಾಗಿ “No results found for …” ಎಂದು ತೋರುತ್ತದೆ.

ಮೂಲ: How to Disable Windows Web Search and Speed Up Your PC | Tom’s Hardware