Photo by Jorge Salvador on Unsplash
ನೀವು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಕೊಳ್ಳುವಾಗ ಮೆಮೊರಿ ಎಂದರೆ, ಸಾಮಾನ್ಯವಾಗಿ system RAM ಮತ್ತು ಹಾರ್ಡ್ ಡಿಸ್ಕ್ ಕಡೆ ಮಾತ್ರ ಗಮನಹರಿಸಿರುತ್ತೀರಿ. ಈ ಲೇಖನದಲ್ಲಿ ಸಿಪಿಯುನಲ್ಲಿರುವ ಮೆಮೊರಿ, ಕ್ಯಾಶೆ(cache) ಬಗ್ಗೆ ತಿಳಿಯೋಣ.

ಸಿಪಿಯು ತನ್ನ ಪ್ರೊಸೆಸಿಂಗ್ ಕಾರ್ಯ ನಿರ್ವಹಿಸಲು ಬೇಕಾದ ಡೇಟಾವನ್ನು ಕ್ಯಾಶೆ ಮೆಮೊರಿಯಲ್ಲಿ ಇರಿಸಲಾಗುತ್ತದೆ. ಕ್ಯಾಶೆ static RAM ಆಗಿದ್ದು ಬಹಳಷ್ಟು ಜಾಗ ಆಕ್ರಮಿಸುತ್ತದೆ. dynamic RAM ರೀತಿ ಆಗಾಗ ರಿಫ್ರೆಶ್ ಮಾಡುವ ಅವಶ್ಯಕತೆ ಇಲ್ಲದಿರುವ ಕಾರಣ static RAM ವೇಗವಾಗಿರುತ್ತದೆ. ಈ ಎಲ್ಲ ಕಾರಣಗಳಿಂದ ಕ್ಯಾಶೆ ದುಬಾರಿಯಾಗಿದ್ದು ಕೇವಲ ಮೆಗಾ ಬೈಟ್ ಗಾತ್ರದಲ್ಲಿ (MB) ಮಾತ್ರ ಲಭ್ಯವಿರುತ್ತದೆ ಆದರೆ ಅಷ್ಟೇ ಅಚ್ಚುಕಟ್ಟಾಗಿ ಉಪಯೋಗಿಸಿ ಸಿಪಿಯುವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗುತ್ತದೆ.
ಸಿಪಿಯು ನ ಮುಂದಿನ ನಡೆಗೆ ಬೇಕಾದ ಡೇಟಾ ಯಾವುದಿರಬಹುದೆಂದು ಊಹಿಸುವುದು ಕಷ್ಟಸಾಧ್ಯ, algorithm ಗಳ ಬಳಕೆಯಿಂದ system RAMನಲ್ಲಿ ಡೇಟಾವನ್ನು ಹುಡುಕಿ ಕ್ಯಾಶೆ ಗೆ ರವಾನಿಸಲಾಗುತ್ತದೆ. ಈ ಡೇಟಾ ಪ್ರೋಸೆಸ್ ಆದ ತಕ್ಷಣ ಕ್ಯಾಶೆನಿಂದ ಹೊರಹಾಕಿ ಮುಂದಿನ ಡೇಟಾಗೆ ಜಾಗ ಮಾಡಿಕೊಡಲಾಗುತ್ತದೆ.

ಕ್ಯಾಶೆ ಮೆಮೊರಿ ಹೆಚ್ಚಿದ್ದಷ್ಟೂ ಸಿಪಿಯುವಿನ ಕಾರ್ಯಕ್ಷಮತೆ ಹೆಚ್ಚಿರುತ್ತದೆ. ಮುಂದಿನ ಬಾರಿ ಸಿಪಿಯು ಅಥವಾ ಲ್ಯಾಪ್‌ಟಾಪ್/ಕಂಪ್ಯೂಟರ್ ಕೊಳ್ಳುವ ಮುನ್ನ ಕ್ಯಾಶೆ ಬಗ್ಗೆ ಗಮನಹರಿಸಿದರೆ ಒಳಿತು.