Google mapsನಲ್ಲಿ ಈಗ COVID-19 ಅಂಕಿಅಂಶಗಳನ್ನು ತೋರಿಸುತ್ತವೆ

Share

ಗೂಗಲ್ maps ಶೀಘ್ರದಲ್ಲೇ covid-19ಗೆ ಸಂಬಂಧಿಸಿದ ಮಾಹಿತಿಯನ್ನು ತೋರಿಸಲಿದ್ದು, ಬಳಕೆದಾರರು ಪ್ರಯಾಣಿಸಲು ಬಯಸುವ ಪ್ರದೇಶದಲ್ಲಿ ವೈರಸ್‌ನ ಹೊಸ ಪ್ರಕರಣಗಳು ಹೆಚ್ಚಾಗುತ್ತಿದೆಯೇ ಎಂದು ತಿಳಿಸುತ್ತದೆ.

ಅಪ್ಲಿಕೇಶನ್‌ನಲ್ಲಿರುವ ‘covid-19 info’ ಲೇಯರ್ ನಲ್ಲಿ ಒಂದು ಲಕ್ಷ ಜನಕ್ಕೆ ಏಳು ದಿನಗಳಲ್ಲಿ ವರಿದಿಯಾಗುವ ಹೊಸ covid-19 ಪ್ರಕರಣಗಳ ಅಂಕಿಗಳನ್ನು ಪ್ರದರ್ಶಿಸುತ್ತದೆ ಮತ್ತು ಆ ಸೋಂಕಿನ ಪ್ರಮಾಣವು ಹೆಚ್ಚಾಗುತ್ತಿದೆಯೇ ಅಥವಾ ಕಡಿಮೆಯಾಗುತ್ತಿದೆಯೇ ಎಂಬುದನ್ನು ತಿಳಿಸುತ್ತದೆ. ಈ ಲೇಯರ್ ನಲ್ಲಿರುವ ಡೇಟಾ, ಸರ್ಕಾರಗಳ ಸುತ್ತೋಲೆಯಿಂದ ಪಡೆಯುತ್ತದೆ ಎಂದು ಗೂಗಲ್ ತನ್ನ blog postನಲ್ಲಿ ಹೇಳಿದೆ.

ಈ ಹೊಸ ಅಪ್ಡೇಟ್ ಇದೇ ವಾರದಲ್ಲಿ ಆಂಡ್ರಾಯ್ಡ್ ಮತ್ತು iOS ಸಾಧನಗಳಿಗೆ ಲಭ್ಯವಾಗಲಿದೆ.