ಭಾರತ ಸರ್ಕಾರ ಮತ್ತೆ 43 ಚೈನಾ ಆ್ಯಪ್‌ಗಳನ್ನು ನಿಷೇಧಿಸಿದೆ!

Share

ಭಾರತದಲ್ಲಿ ನಿಷೇಧಿತ ಚೈನಾ ಅಪ್ಲಿಕೇಶನ್‌ಗಳ ಪಟ್ಟಿಗೆ ಭಾರತ ಸರ್ಕಾರ ಈಗ ಇನ್ನೂ 43 ಅಪ್ಲಿಕೇಶನ್‌ಗಳನ್ನು ಸೇರಿಸಿದೆ. ಈ ಹಿಂದೆ ನಿಷೇದಿಸಲಾದ ಟಿಕ್‌ಟಾಕ್ ಮತ್ತು Mi Community app ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು, ನಂತರ 47, ಮತ್ತೊಮ್ಮೆ PUBG mobile ಸೇರಿದಂತೆ 118 appಗಳಿಗೆ ಈಗ 43 ಅಪ್ಲಿಕೇಶನುಗಳು ಹೊಸ ಸೇರ್ಪಡೆ. ಒಟ್ಟು ಭಾರತದಲ್ಲಿ ನಿಷೇಧಿಸಲಾಗಿರುವ ಅಪ್ಲಿಕೇಶನ್‌ಗಳ ಸಂಖ್ಯೆ 267 ಕ್ಕೆ ಏರಿದೆ.

ಹಿಂದಿನ ಆದೇಶಗಳಂತೆಯೇ, ಈ ಸುತ್ತಿನ 43 ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತವಾಗಿದೆ” ಎಂದು ಕಂಡುಬಂದಿದೆ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69 ಎ ಅನ್ನು ಮತ್ತೊಮ್ಮೆ ನಿಷೇಧದ ಆದೇಶವನ್ನು ಅಂಗೀಕರಿಸುವ ಕಾನೂನಿನ ನಿಬಂಧನೆಯಾಗಿ ಬಳಸಲಾಗುತ್ತಿದೆ.

Rich result on Google's SERP when searching "app ban in India"

ಈ ಪಟ್ಟಿಯಲ್ಲಿ ಗಮನಿಸಿದರೆ AliExpress ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಒಂದನ್ನು ಬಿಟ್ಟು ಇನ್ನುಳಿದವು ಅಷ್ಟೇನು ಜನಪ್ರಿಯವಾಗಿರಲಿಲ್ಲ. ಆದರೆ ಇತ್ತೀಚಿಗೆ ಬೆಂಗಳೂರಿನ ಆಟೋಗಳ ಹಿಂದೆ Lalamove appನ ಜಾಹಿರಾತುಗಳು ಕಂಡುಬಂದಿದ್ದವು. ಇದೊಂದು ಬಾರಿ ಹಾಗು ಸಣ್ಣ ಮಟ್ಟದ ವಸ್ತುಗಳ ಸಾಗಾಣಿಕೆಗಾಗಿ ಟ್ರಕ್ ಚಾಲಕರೊಂದಿಗೆ ಸಂಪರ್ಕಿಸುವುದಾಗಿತ್ತು. 

ಇಷ್ಟೆಲ್ಲಾ ಅಪ್ಲಿಕೇಶನ್‌ಗಳು ನಿಷೇಧಗೊಂಡ ಬೆನ್ನಲ್ಲೇ ಯಾವೊಂದು ಕಂಪನಿಯು ಮರಳಿ ಭಾರತದ ಮಾರುಕಟ್ಟೆಗೆ ಬರುವ ಸೂಚನೆಗಳು ನೀಡಿಲ್ಲ ಆದರೆ PUBG mobile ಮಾತ್ರ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಬರಲಿದೆ.