ಬೌನ್ಸರ್ – ನಿಮ್ಮ ಗೌಪ್ಯತೆ ನಿಮ್ಮ ಕೈಯಲ್ಲಿ

Share

ನೀವು ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಾಗಿದ್ದರೆ ಸಾಮಾನ್ಯವಾಗಿ ಯಾವುದಾದರೊಂದು ತಂತ್ರಾಂಶ ಡೌನ್ಲೋಡ್ ಆದ ನಂತರ ಆ ಅಪ್ಲಿಕೇಶನ್ ಗೆ ಕೊಡಬೇಕಾದ ಅನುಮತಿಗಳನ್ನು (App Permissions) ಕೂಲಂಕುಷವಾಗಿ ನೋಡದಿರುವುದೇ ಹೆಚ್ಚು.

ಉದಾಹರಣೆಗೆ ನೀವು ಡೌನ್ಲೋಡ್ ಮಾಡಿದ ಅಪ್ಲಿಕೇಶನ್ ಒಂದು ಕ್ಯಾಲ್ಕುಲೇಟರ್ ಅಥವಾ ವಾಯ್ಸ್ ರೆಕಾರ್ಡರ್ ಆಗಿದ್ದಲ್ಲಿ ಅದಕ್ಕೆ ಕ್ಯಾಮೆರಾ ಅನುಮತಿ ಬೇಕಿರುವುದಿಲ್ಲ. ಈ ರೀತಿ ನೀವು ಬಳಸುವ ಅಪ್ಲಿಕೇಶನ್ ಕೇಳುವ ಅನುಮತಿಗಳನ್ನು ಪರಿಶೀಲಿಸಿ ಕೊಡುವುದು ಒಳ್ಳೆಯ ವಿಚಾರ.

ಇದಲ್ಲದೆ ಹಲವು ಅಪ್ಲಿಕೇಶನ್ ಗಳು ಕೆಲ ಸಮಯದ ನಂತರ ಬಳಸದೇ ಉಳಿದುಬಿಡುತ್ತವೆ. ಆದರೆ ಅವುಗಳಿಗೆ ಕೊಟ್ಟ ಅನುಮತಿಗಳಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಓದುವ ಸಾಧ್ಯತೆಗಳು ಹೆಚ್ಚು.

ಇದಕ್ಕೆ ಪೂರಕವಾಗಿ ಬೌನ್ಸರ್ ಎಂಬ ಅಪ್ಲಿಕೇಶನ್ ಉಪಯುಕ್ತ. ಬೌನ್ಸರ್ ತಂತ್ರಾಂಶದಲ್ಲಿ ಅವಶ್ಯಕತೆ ಇಲ್ಲದಿರುವ ಅನುಮತಿಗಳನ್ನು ತಾನಾಗೇ ತೆಗೆದು ಹಾಕುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ :

ಬೌನ್ಸರ್ ಇನ್ಸ್ಟಾಲ್ ಮಾಡಿದ ನಂತರ Help ವಿಭಾಗಕ್ಕೆ ಹೋಗಿ battery optimization setting ಇಂದ ಹೊರಗಿಡಿ. ಇದರಿಂದ ಬೌನ್ಸರ್ ಸದಾ ಕೆಲಸ ಮಾಡುತ್ತದೆ ಹಾಗು ಪ್ರತಿ ಬಾರಿ ಹೊಸ ಅಪ್ಲಿಕೇಶನ್ install ಮಾಡಿದಾಗ, ಪ್ರತಿ ಅನುಮತಿಗಳಿಗೆ ನೋಟಿಫಿಕೇಶನ್ ಕೇಳಿ allow ಅಥವಾ decline ಎಂದು ಆಯ್ಕೆಗಳನ್ನು ನೀಡುತ್ತದೆ.

Auto Remove ಆಯ್ಕೆಯನ್ನು ಆನ್ ಮಾಡಲು ಮರೆಯದಿರಿ .

ನೀವು ಕೊಟ್ಟ ಆಯ್ಕೆಗಳನ್ನು ಬೌನ್ಸರ್ ನೆನಪಿಟ್ಟುಕೊಳ್ಳುತ್ತದೆ. ಮುಂದೊಂದು ಬಾರಿ ನೀವು ಮರಳಿ ಬಳಸುವಾಗ decline ಮಾಡಿದ ಅಪ್ಲಿಕೇಶನ್ನಿನ permission allow ಮಾಡಿದ್ದರೆ, ಆ ಅಪ್ಲಿಕೇಶನ್ close ಮಾಡುವಾಗ ಮತ್ತೊಮ್ಮೆ ಈ permisson ಉಳಿಸುವುದೋ ಅಥವಾ decline ಮಾಡಬೇಕೋ ಎಂದು ಕೇಳುತ್ತದೆ.

ನಾನು ಬೌನ್ಸರ್ ಅನ್ನು ವಿಶೇಷವಾಗಿ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಇತರೆ ಅಪ್ಲಿಕೇಶನ್ ಗಳಲ್ಲಿ ಮೈಕ್ರೋಫೋನ್ ಮತ್ತು ಕ್ಯಾಮೆರಾ permission ಆಫ್ ಮಾಡಲು ಬಳಸುತ್ತೇನೆ. ನೀವು ವಿಡಿಯೋ ರೆಕಾರ್ಡ್ ಮಾಡಬೇಕಾದಲ್ಲಿ “only when open” ಆಯ್ಕೆ ಮಾಡಿದರೆ, ನೀವು ಆ ಅಪ್ಲಿಕೇಶನ್ ಬಳಸುವ ಹೊತ್ತು ಅಷ್ಟೇ ಅನುಮತಿಗಳು ಸಕ್ರಿಯವಾಗಿರುತ್ತವೆ ಮತ್ತು close ಮಾಡಿದ ತಕ್ಷಣ ಪುನಃ ತೆಗೆಯಲ್ಪಡುತ್ತವೆ.

ಪ್ಲೇ ಸ್ಟೋರ್ ನಲ್ಲಿ ಇಲ್ಲದೆ ಇರುವ ಯಾವುದಾದರೊಂದು ಅಪ್ಲಿಕೇಶನ್ ಅನ್ನು ನೀವು ಹಾಕಿಕೊಂಡಿದ್ದಲ್ಲಿ, ಬೌನ್ಸರ್ ತುಂಬಾ ಉಪಯುಕ್ತ. ವಿಶ್ವಾಸಾರ್ಹ ಅಲ್ಲದ ಜಾಲತಾಣಗಳಿಂದ ಡೌನ್ಲೋಡ್ ಮಾಡಿದ ಅಪ್ಪ್ಲಿಕೇಷನ್ ಗಳನ್ನು ನೀವು ಬಳಸದಿರುವಾಗ ನಿಯಂತ್ರಿಸಲು ಈ ತಂತ್ರಾಂಶ ಸುಲಭವಾದ ದಾರಿ.

ಬೌನ್ಸರ್ ಅಪ್ಲಿಕೇಶನ್ ನ ಕೊಂಡಿ . ಈ ತಂತ್ರಾಂಶದ ಬೆಲೆ 99 ರೂಪಾಯಿಗಳಾಗಿದ್ದು, ಒಂದೇ ಬಾರಿ ಪಾವತಿಸಿ ಬಳಸಬಹುದಾಗಿದೆ.