ಅಮೆಜಾನ್ ನಲ್ಲಿ ಈಗ ರೈಲು ಟಿಕೆಟ್ ಬುಕ್ ಮಾಡಬಹುದು(You can book train ticket in Amazon now)

Share

ಭಾರತೀಯ ರೈಲ್ವೇಸ್ ನ ಉಪಭಾಗವಾದ IRCTC, ರೈಲುಗಳ ಆನ್ಲೈನ್ ಟಿಕೆಟ್ ಬುಕಿಂಗ್ ಮತ್ತು ಪ್ರವಾಸೋದ್ಯಮದ ಜವಾಬ್ದಾರಿಯನ್ನುನಿರ್ವಹಿಸುತ್ತದೆ. IRCTCಯ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ , ಫೋನ್ ಪೇ(Phone Pe), ಗೂಗಲ್ ಪೇ(Google pay) ಸೇರಿದಂತೆ ಪೆಟಿಎಂ(Paytm)ನಲ್ಲಿ ಟಿಕೆಟುಗಳನ್ನು ಮುಂಗಡ ಬುಕ್ ಮಾಡುವ ಮೂಲಕ ಕಾಯ್ದಿರಿಸಬಹುದಾಗಿತ್ತು.

ಈ ಗುಂಪಿಗೆ ಹೊಸ ಸೇರ್ಪಡೆ ಅಮೆಜಾನ್. ಬುಕಿಂಗ್ ಸೇವೆಯು ಈಗಾಗಲೇ ಅಮೆಜಾನ್ ಅಪ್ಲಿಕೇಶನಿನ “Amazon Pay > Travel > Trains” ಆಯ್ಕೆಯಡಿಯಲ್ಲಿ ಲಭ್ಯವಿದ್ದು ಮೊದಲ ಬುಕಿಂಗ್ ಗೆ 10% ಗರಿಷ್ಟ100 ರೂ. ಮತ್ತು ಪ್ರೈಮ್ ಚಂದಾದಾರರಿಗೆ 12% ಗರಿಷ್ಟ 120 ರೂ. ಕ್ಯಾಶ್ ಬ್ಯಾಕ್ ದೊರೆಯಲಿದೆ.

ಕೆಲವು ದಿನಗಳವರೆಗೆ ಬುಕಿಂಗ್ ಪ್ರಕ್ರಿಯೆಗೆ ತಗಲುವ ಶುಲ್ಕವನ್ನು ಬಳಕೆದಾರರಿಗೆ ಹೇರುವುದಿಲ್ಲ.ಅಮೆಜಾನ್ ಪೇ ಬಳಕೆದಾರರಿಗೆ, ಟಿಕೆಟ್ ರದ್ದುಪಡಿಸಲಾದಾಗ ಮತ್ತು ಬುಕಿಂಗ್ ಸಂದರ್ಭದಲ್ಲಿ ಆಗುವ ಅವಘಡಗಳಲ್ಲಿ ಆ ಕ್ಷಣದಲ್ಲೇ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಿದೆ.

ಮೂಲ ಸುದ್ದಿ: Amazon Blog post