ಬಿಟ್-ಟೊರೆಂಟ್: ಸಂಕ್ಷಿಪ್ತವಾಗಿ (BitTorrent explained as simple as possible in Kannada)

Share

ಬಿಟ್-ಟೊರೆಂಟ್(BitTorrent) ಒಂದು ಇಂಟರ್ನೆಟ್ ಪ್ರೋಟೋಕಾಲ್(internet protocol ) ಆಗಿದ್ದು peer to peer ನೆಟ್ವರ್ಕ್ಅನ್ನು ಆಧರಿಸಿದೆ. centralized networkನಲ್ಲಿ ಫೈಲುಗಳು(files) ಕೇವಲ ಒಂದೇ ಒಂದು ಸೆಂಟ್ರಲ್ ಸರ್ವರ್( central server)ಗೆ ಸೀಮಿತವಾಗಿರುತ್ತದೆ. ಎಲ್ಲರೂ ಫೈಲುಗಳನ್ನು ಅಲ್ಲಿಂದಲೇ ಇಂಟರ್ನೆಟ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಸರ್ವರ್ ಹಾಗು ನೆಟ್ವರ್ಕ್ ನಲ್ಲಿ ಲೋಡ್(load) ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಫೈಲುಗಳು ಕೇವಲ ಒಂದು ಸರ್ವರ್ ನಲ್ಲಿರುವುದರಿಂದ, delete ಅಥವ corrupt ಆದರೆ, ಆ ಫೈಲ್ ಮತ್ತೆ ಸಿಗಲಾರದು.

centralized network

ಈಗ ಟೊರೆಂಟ್ ಗೆ ಬರೋಣ ಇದು peer to peer ನೆಟ್ವರ್ಕ್ಅನ್ನು ಬಳಸುತ್ತದೆ, ಹಾಗೆಂದರೆ ಈ ನೆಟ್ವರ್ಕ್ ನಲ್ಲಿರುವ ಎಲ್ಲರ ಬಳಿಯೂ ಫೈಲ್ ಅಥವಾ ಫೈಲ್ ನ ಭಾಗಗಳಿರುತ್ತವೆ. ಯಾವುದೇ ಸೆಂಟ್ರಲ್ ಸರ್ವರ್ ಇರುವುದಿಲ್ಲ. ಅದರಿಂದ ನಿಮ್ಮ ಫೈಲ್ ಡಿಲೀಟ್ ಆದರೂ ನೀವು ನೆಟ್ವರ್ಕ್ ನಲ್ಲಿರುವ ಉಳಿದವರ ಸಹಾಯದಿಂದ ಪುನಃ ಪಡೆಯಬಹುದು .

peer to peer network

ಟೊರೆಂಟ್ ನೆಟ್ವರ್ಕ್ ಗೆ ಮೊದಲು ಫೈಲ್ ಅಪ್ಲೋಡ್(upload) ಮಾಡುವ device ಮೊದಲ ಸೀಡ್ (seed) ಆಗುತ್ತದೆ. ಈ ಸೀಡ್ ನಿಂದ ಡೌನ್ಲೋಡ್ ಮಾಡಿದ ಮತ್ತೊಂದು device ಎರಡನೇ ಸೀಡ್ ಆಗುತ್ತದೆ ಅಂದರೆ, ಈಗ ಟೊರೆಂಟ್ ನಲ್ಲಿ 2 ಸೀಡ್ ಗಳು ಫೈಲ್ ಹೊಂದಿದ್ದು ಫೈಲ್ ಹಂಚಿಕೆ (file sharing) ಸುಲಭವಾಗುತ್ತದೆ. ಹೀಗೆಯೇ ಪ್ರತಿ ಡೌನ್ಲೋಡ್ ಗು ಹೊಸ ಸೀಡ್ ಟೊರೆಂಟ್ ನೆಟ್ವರ್ಕ್ ಗೆ ಸೇರ್ಪಡೆಯಾಗಿ ಹೊಸದಾಗಿ ಫೈಲ್ ಡೌನ್ಲೋಡ್ ಮಾಡುವರಿಗೆ ಹೆಚ್ಚಿನ ಸ್ಪೀಡ್ (speed) ದೊರೆಯುತ್ತದೆ. ನೆಟ್ವರ್ಕ್ ನಲ್ಲಿ ಲೋಡ್ ಕೂಡ ಕಡಿಮೆಯಾಗುತ್ತದೆ. ಕೆಲವೊಮ್ಮೆ ನಿಮಗೆ ಬೇಕಾದ ಫೈಲ್ ಉಳ್ಳವರು ಆ ಹೊತ್ತಿಗೆ ನೆಟ್ವರ್ಕ್ನಲ್ಲಿಲ್ಲದಿರಬಹುದು .ಆ ತಕ್ಷಣಕ್ಕೆ ನಿಮಗೆ ಫೈಲ್ ದೊರೆಯದಿಲ್ಲ . ಫೈಲ್ ನ ಮಾಲೀಕನಿಗೆ ನೆಟ್ವರ್ಕ್ ನ ಮೇಲೆ ಯಾವುದೇ ನಿಯಂತ್ರಣ (control) ಇರುವುದಿಲ್ಲ. ಡೌನ್ಲೋಡ್ ಸ್ಪೀಡ್ (download speed) ಒಟ್ಟಾರೆ ನೆಟ್ವರ್ಕ್ ನಲ್ಲಿ ಡೌನ್ಲೋಡ್ ಅಥವಾ ಅಪ್ಲೋಡ್ ಮಾಡುತ್ತಿರುವರ ಮೇಲೆ ಅವಲಂಬಿಸಿರುತ್ತದೆ. ಉದಾಹರಣೆಗೆ ಆ ಕ್ಷಣಕ್ಕೆ ಕೇವಲ 2 ಸೀಡ್ ಗಳು ಟೊರೆಂಟ್ ನಲ್ಲಿದ್ದು , 100 ಸದಸ್ಯರು ಡೌನ್ಲೋಡ್ ಮಾಡಲೆತ್ನಿಸುತ್ತಿದ್ದರೆ ಡೌನ್ಲೋಡ್ ಸ್ಪೀಡ್ ಕಡಿಮೆಯಾಗುತ್ತದೆ. ಒಂದೆರಡು ಭಾದಕಗಳನ್ನು ಕಡೆಗಣಿಸಿದರೆ ಟೊರೆಂಟ್ ಒಂದು ಉತ್ತಮ file sharing ಪ್ರೋಟೋಕಾಲ್ ಆಗಿದೆ.

ಆದರೆ ಟೊರೆಂಟ್ಅನ್ನು ಅನೈತಿಕವಾಗಿ ಫೈಲುಗಳನ್ನು ಹಂಚಲು ಉಪಯೋಗಿಸುವುದರಿಂದ ಇದಕ್ಕೆ ಕೆಟ್ಟ ಹೆಸರು ಬಂದಿದೆ. ಉದಾಹರಣೆಗೆ ಸಿನಿಮಾ, ಹಾಡುಗಳನ್ನು ಹಂಚಲು ಬಳಸಲಾಗುತ್ತಿದೆ ಇದು ಕಾನೂನು ಬಾಹಿರ. ಟೊರೆಂಟ್ಅನ್ನು ನೈತಿಕವಾಗಿ ಬಳಸಿದರೆ ಯಾವುದೇ ಹಾನಿಯಿಲ್ಲ.