ಬೆಂಗಳೂರಿನಲ್ಲಿ ಟೆಸ್ಲಾದ ಸಂಶೋಧನ ಕೇಂದ್ರ (Bengaluru to get Tesla’s research center)

Share

ವಿಶ್ವದ ಅತಿ ಹೆಚ್ಚು ಬೆಲೆ ಬಾಳುವ ಕಾರ್ ಕಂಪನಿ ಟೆಸ್ಲಾ ಭಾರತದ ಮಾರುಕಟ್ಟೆಗೆ ಬರಲು ಉತ್ಸುಕವಾಗಿದೆ. ಕಳೆದ 5 ವರ್ಷಗಳಿಂದ ಟೆಸ್ಲಾ ಭಾರತದ ಮಾರುಕಟ್ಟೆಗೆ ಬರಲು ಮಾತುಕತೆ ನಡೆಯುತ್ತಿದ್ದರೂ, ಸರ್ಕಾರದ ರೀತಿ ರಿವಾಜುಗಳು ಕಠಿಣವಾಗಿರುವುದರಿಂದ ಇಲ್ಲಿಯವರೆಗೆ ಯಾವುದೇ ಬೆಳವಣಿಗೆ ಕಂಡಿರಲಿಲ್ಲ.

ಭಾರತ ವಿಶ್ವದ 2ನೇ ಅತಿ ದೊಡ್ಡ ಕಾರ್ ಮಾರುಕಟ್ಟೆಯಾದ ಕಾರಣ ಟೆಸ್ಲಾ ಭಾರತದತ್ತ ಮತ್ತೆ ಒಲವು ತೋರಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅತಿ ಶೀಘ್ರದಲ್ಲಿ ಟೆಸ್ಲಾದ ಸಂಶೋಧನಾ ಕೇಂದ್ರ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿದೆ. ಎಕನಾಮಿಕ್ ಟೈಮ್ಸ್ ನ ಮಾಹಿತಿ ಪ್ರಕಾರ ಸೆಪ್ಟೆಂಬರ್ 10 ರಂದು ಟೆಸ್ಲಾ, ಕರ್ನಾಟಕ ಸರ್ಕಾರದ ಅಧಿಕಾರಿಗಳೊಂದಿಗೆ ಮೊದಲ ಹಂತದ ಮಾತುಕತೆ ನಡೆಸಿದೆ.

ಇದೇ ತಿಂಗಳ ಕೊನೆಯಲ್ಲಿ 2ನೇ ಹಂತದ ಮಾತುಕತೆ ನಡೆಯಲಿದೆ. ಬೆಂಗಳೂರು ಈಗಾಗಲೇ ಹಲವು ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ (start up) ಕಂಪನಿಗಳಾದ ಅಥರ್, ಸನ್ ಮೊಬಿಲಿಟಿ ಇತ್ಯಾದಿಗಳ ತವರು. ಈ ಮಾತುಕತೆ ಯಶಸ್ವಿಯಾದಲ್ಲಿ ಶೀಘ್ರದಲ್ಲೇ ಟೆಸ್ಲಾ ಕಾರುಗಳು ಕೈಗೆಟಕುವ ಬೆಲೆಯಲ್ಲಿ ಭಾರತೀಯರಿಗೆ ಸಿಗಲಿವೆ.

ಮೂಲ ಸುದ್ದಿ : ಎಕನಾಮಿಕ್ ಟೈಮ್ಸ್