ಬೆಂಗಳೂರಿಗೆ ಬರಲಿದೆ ವೇಗದೂತ ಹೈಪರ್ಲೂಪ್(Bengaluru to get Hyperloop)

Share

ಬೆಂಗಳೂರು ರಸ್ತೆಗಳಲ್ಲಿನ ಟ್ರಾಫಿಕ್ ಬಗ್ಗೆ ನಿಮಗೆಲ್ಲ ಪರಿಚಯವಿರುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ತಲುಪಲು ಕನಿಷ್ಠ 2 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ವಿಮಾನಯಾನಕ್ಕಿಂತ ಹೆಚ್ಚು ಸಮಯವನ್ನು ಬೆಂಗಳೂರು ರಸ್ತೆಯಲ್ಲೇ ಕಳೆಯುತ್ತೀರಿ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಕೇವಲ ಹತ್ತು ನಿಮಿಷದ ಪ್ರಯಾಣ ಸಾಧ್ಯವಾಗಲಿದೆ. ಹೌದು ಅಮೆರಿಕಾದ ವರ್ಜಿನ್ ಹೈಪರ್ಲೂಪ್ ಕಂಪನಿ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣ ಮಂಡಳಿ ,ಈ ಬಗ್ಗೆ ಅಧ್ಯಯನ ನಡೆಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಅಧ್ಯಯನವು 6 ತಿಂಗಳಿನ ಎರಡು ಹಂತದಲ್ಲಿ ಆರ್ಥಿಕ, ತಂತ್ರಜ್ಞಾನ ಹಾಗು ಹೈಪರ್ಲೂಪ್ ನ ಮಾರ್ಗದ ಬಗ್ಗೆ ನಡೆಯಲಿದೆ.

ವರ್ಜಿನ್ ಹೈಪರ್ಲೂಪ್ ನ ಮುಖ್ಯಸ್ಥ ಈ ಯೋಜನೆಯು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯವಾಗುವುದಲ್ಲದೆ ಆರ್ಥಿಕ ಉನ್ನತಿ ಹೊಂದಲು ಉಪಯುಕ್ತವಾಗುವುದು ಎಂಬ ಅಭಿಲಾಷೆ ವ್ಯಕ್ತಪಡಿಸಿದರು.

ಎಲ್ಲ ಅಂದುಕೊಂಡಂತೆಯೇ ಆದರೆ ಮುಂಬರುವ ವರ್ಷಗಳಲ್ಲಿ ಗಂಟೆಗೆ 1080 ಕಿಲೋ ಮೀ. ವೇಗದಲ್ಲಿ ಸಾಗುವ ಹೈಪರ್ಲೂಪ್ ರೈಲು ನಮ್ಮ ಬೆಂಗಳೂರಿನಲ್ಲಿ ರಾರಾಜಿಸಲಿದೆ.