Apple Store Online: ಕೊನೆಗೂ ಬಂತು ಆಪಲ್ ಸ್ಟೋರ್ ಆನ್‌ಲೈನ್ ಭಾರತಕ್ಕೆ!

Share

ಇದೇ ಸೆಪ್ಟೆಂಬರ್ 23ರಿಂದ, Apple ತನ್ನ ಸಂಪೂರ್ಣ ಶ್ರೇಣಿಯ ಉತ್ಪನ್ನಗಳನ್ನು ಮತ್ತು ಅದರ ತಾಂತ್ರಿಕ ಬೆಂಬಲವನ್ನು ಮೊದಲ ಬಾರಿಗೆ ದೇಶಾದ್ಯಂತದ ಗ್ರಾಹಕರಿಗೆ ನೇರವಾಗಿ ನೀಡುತ್ತಿದೆ. Apple ಉತ್ಪನ್ನಗಳನ್ನು ಇಷ್ಟಪಡುವವರಿಗೆ ಇದೊಂದು ಸಿಹಿ ಸುದ್ದಿ.

ಇಲ್ಲಿಯವರೆಗೆ Apple ಉತ್ಪನ್ನಗಳನ್ನು ಮರುಮಾರಾಟಗಾರರು ಅಥವಾ ಅಧಿಕೃತ ವಿತರಕರಲ್ಲಿ ಕೊಳ್ಳಬೇಕಾಗಿತ್ತು. ಇದರಿಂದ ನಮಗೆ ಹೊರದೇಶಗಳಲ್ಲಿರುವಂತೆ ಬೇಕಾದ ಮಾದರಿಯಲ್ಲಿ ಯಾವುದೇ Macನ(ಕಂಪ್ಯೂಟರ್ ಶ್ರೇಣಿಗಳ) ಮಾರ್ಪಾಡು ಮಾಡುವ ಆಯ್ಕೆಗಳು ಇರುತ್ತಿಲಿಲ್ಲ.

ಆಪಲ್ ಸ್ಟೋರ್ ಆನ್‌ಲೈನ್ ನಲ್ಲಿ ಹಣಕಾಸಿನ ಆಯ್ಕೆಗಳು ಮತ್ತು ಟ್ರೇಡ್-ಇನ್ ಪ್ರೋಗ್ರಾಂ ಲಭ್ಯವಿರುವುದರಿಂದಾಗಿ, ಕೊಳ್ಳಲು ಹಲವಾರು ಕೈಗೆಟುಕುವ ಆಯ್ಕೆಗಳು ಸಿಗುತ್ತದೆ. ವಿದ್ಯಾರ್ಥಿಗಳಿಗೆ ವಿಶೇಷ ಬೆಲೆಯೊಂದಿಗೆ ಮ್ಯಾಕ್ ಅಥವಾ ಐಪ್ಯಾಡ್‌(iPad)ಗಳು ಲಭ್ಯವಿರುತ್ತದೆ ಹಾಗು ಬಿಡಿಭಾಗಗಳು ಮತ್ತು ಆಪಲ್‌ಕೇರ್+ ಮೇಲೆ ರಿಯಾಯಿತಿಯನ್ನು ಕೂಡಾ ಪಡೆಯಬಹುದಾಗಿದೆ.

ಅಕ್ಟೋಬರ್‌ನಲ್ಲಿ ಚಾಯಾಗ್ರಹಣ ಮತ್ತು ಸಂಗೀತಕ್ಕೆಸಂಬಂಧಪಟ್ಟ ವೃತ್ತಿಪರರ ನೇತೃತ್ವದಲ್ಲಿ ನಡೆಯುವ ‘Today at Apple’ ಸೆಷನ್‌ಗಳನ್ನು ಉಚಿತವಾಗಿ ಆನ್‌ಲೈನ್ ನಲ್ಲಿ ನಿರೀಕ್ಷಿಸಬಹುದು. ಇದು ಹೊಸದಾಗಿ ಕಲಿಯಲು ಶುರು ಮಾಡುವವರಿಗೆ ಉಪಯೋಗವಾಗುತ್ತದೆ.

ಹಬ್ಬದ ಸಮಯದಲ್ಲಿ ಉಡುಗೊರೆಯಾಗಿ ಕೊಡಲು ಏರ್‌ಪಾಡ್‌ಗಳಿಗೆ ಇಂಗ್ಲಿಷ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಎಮೋಜಿ ಅಥವಾ ಹೆಸರುಗಳನ್ನು ಬರೆಸುವ ಸೌಲಭ್ಯವಿದೆ. ಆದರೆ ಐಪ್ಯಾಡ್ ಮತ್ತು ಆಪಲ್ ಪೆನ್ಸಿಲ್ಗಳಿಗೆ ಇಂಗ್ಲಿಷ್ ನಲ್ಲಿ ಮಾತ್ರ ಈ ಸೇವೆ ಲಭ್ಯವಿರುತ್ತದೆ.

ಕೃಪೆ: ಆಪಲ್

ಮೂಲ: Apple brings online store to India September 23