Apple one: ಒಂದು ಬೆಲೆ, ಹಲವು ಸೇವೆಗಳು

Share

ಆಪಲ್ ಒನ್, ಹಲವು ಆಪಲ್ ಸೇವೆಗಳನ್ನು ಒಂದೇ ಬೆಲೆಯಲ್ಲಿ ನೀಡುವ ಚಂದಾದಾರಿಕೆಯಾಗಿದೆ. ಇದು ಆಪಲ್ ಮ್ಯೂಸಿಕ್(Apple Music), ಆಪಲ್ ಟಿವಿ+(Apple TV+), ಆಪಲ್ ಆರ್ಕೇಡ್(Apple Arcade) ಮತ್ತು ಐಕ್ಲೌಡ್(iCloud) ಸೇವೆಗಳನ್ನು ಒಳಗೊಂಡಿದೆ. ಕಂಪನಿಯ ಅಧಿಕೃತ ವೆಬ್ಸೈಟಿನಲ್ಲಿರುವ ಮಾಹಿತಿ ಪ್ರಕಾರ ಆಪಲ್ ಒನ್, ಈ ವರ್ಷದ ಕೊನೆಯಲ್ಲಿ ಲಭ್ಯವಾಗಲಿದೆ.

ಆಪಲ್ ಒನ್ ನ ಮೂರು ಹಂತದ ಪ್ಲಾನುಗಳು

  • ವೈಯಕ್ತಿಕ: ಆಪಲ್ ಮ್ಯೂಸಿಕ್, ಆಪಲ್ ಟಿವಿ+, ಆಪಲ್ ಆರ್ಕೇಡ್ ಮತ್ತು 50GB ಐಕ್ಲೌಡ್ ಸಂಗ್ರಹಕ್ಕೆ ತಿಂಗಳಿಗೆ 195 ರೂ.
  • ಫ್ಯಾಮಿಲಿ: ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್ ಮತ್ತು 200GB ಐಕ್ಲೌಡ್ ಸಂಗ್ರಹಕ್ಕೆ ತಿಂಗಳಿಗೆ 365 ರೂ. ಮತ್ತು ಇದನ್ನು ಆರು ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾಗಿದೆ.
  • ಪ್ರೀಮಿಯರ್: ಆಪಲ್ ಮ್ಯೂಸಿಕ್, ಆಪಲ್ ಟಿವಿ +, ಆಪಲ್ ಆರ್ಕೇಡ್, ಆಪಲ್ ನ್ಯೂಸ್ +, ಆಪಲ್ ಫಿಟ್ನೆಸ್ +, ಮತ್ತು 2 ಟಿಬಿ ಐಕ್ಲೌಡ್ ಸಂಗ್ರಹವನ್ನು ಒಳಗೊಂಡಿದೆ ಮತ್ತು ಇದನ್ನು ಆರು ಸದಸ್ಯರೊಂದಿಗೆ ಹಂಚಿಕೊಳ್ಳಬಹುದು.
ಕೃಪೆ: ಆಪಲ್

ಆಪಲ್ ಮ್ಯೂಸಿಕ್, ಆಪಲ್ ಆರ್ಕೇಡ್ ಮತ್ತು ಆಪಲ್ ಟಿವಿ+ ಮಾಸಿಕ ಚಂದಾದಾರಿಕೆಗೆ 99 ರೂ. ಮತ್ತು ಐಕ್ಲೌಡ್ ಸಂಗ್ರಹಣೆ ಮೂರು ಹಂತಗಳಲ್ಲಿ 50 ಜಿಬಿ ಗೆ 75 ರೂ., 200 ಜಿಬಿ ಗೆ 219 ರೂ. ಮತ್ತು 2 ಟಿಬಿ ಗೆ 749 ರೂ.ಗೆ ದೊರೆಯಲಿದೆ. 50 ಜಿಬಿ ಐಕ್ಲೌಡ್ ಸಂಗ್ರಹಣೆಯೊಂದಿಗೆ ಆಪಲ್ ಮ್ಯೂಸಿಕ್, ಆರ್ಕೇಡ್ ಮತ್ತು ಟಿವಿ + ಯೋಜನೆಗಳು ಸೇರಿದರೆ ಒಟ್ಟು 372 ರೂ. ಆಗಲಿದೆ.

ಆದರೆ ಆಪಲ್ ಒನ್ ವೈಯಕ್ತಿಕ ಪ್ಲಾನಿನ ಬೆಲೆ 195 ರೂ. ಅಂದರೆ 177 ರೂ. ಉಳಿತಾಯವಾಗಲಿದೆ. ಅದೇ ರೀತಿ, ನಿಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರಲ್ಲಿ ಆಪಲ್ ಬಳಕೆದಾರರಿದ್ದರೆ, ಫ್ಯಾಮಿಲಿ ಪ್ಲಾನ್ ಆರಿಸುವ ಮೂಲಕ ತಿಂಗಳಿಗೆ 200 ರೂ. ಉಳಿಸಬಹುದು.