ಭಾರತದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಉತ್ಪಾದನೆಯನ್ನು ಹೆಚ್ಚಿಸಲು ಹಾಗು ಈ ಕ್ಷೇತ್ರದಲ್ಲಿ ಭಾರತವನ್ನು ರಫ್ತ್ತು ನಾಯಕನನ್ನಾಗಿಸಲು ಕಳೆದ ಜೂನ್ ನಲ್ಲಿ ಕೇಂದ್ರ ಸರ್ಕಾರ “ಉತ್ಪಾದನೆ ಸಂಬಂಧಿತ ಪ್ರೋತ್ಸಾಹ” ಯೋಜನೆಯಡಿಯಲ್ಲಿ 50000 ಕೋಟಿ ರೂ.ಗಳನ್ನು ಘೋಷಿಸಿತ್ತು . ಈ ಯೋಜನೆಯಡಿಯಲ್ಲಿ 5 ಜಾಗತಿಕ ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿಗಳಿಗೆ ಭಾರತದಲ್ಲಿ ತಮ್ಮ ಉತ್ಪಾದನಾ ಕೇಂದ್ರ ಸ್ಥಾಪಿಸಲು ಅಥವಾ ಈಗಾಗಲೇ ಇರುವ ಕೇಂದ್ರಗಳನ್ನು ಉತ್ತಮಗೊಳಿಸಲು ಬೇಕಾದ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು. ಇದಲ್ಲದೆ ಮುಂದಿನ 5 ವರ್ಷದಲ್ಲಿ ಭಾರತದಲ್ಲೇ ಉತ್ಪಾದಿಸಿದ ಗ್ಯಾಜೆಟ್ ಗಳಿಂದಾಗುವ ಲಾಭದಲ್ಲಿ ಕಂಪನಿ ಗೆ ಹೆಚ್ಚಿನ ಪಾಲನ್ನು ನೀಡುವುದಾಗಿ ಹೇಳಲಾಗಿತ್ತು
ಆಪಲ್ ಹಾಗು ಹಲವು ಪ್ರಮುಖ ಕಂಪನಿಗಳ ಬಿಡಿಭಾಗಗಳ ಉತ್ಪಾದನೆ ಮತ್ತು ಜೋಡಣೆಯಲ್ಲಿ ಸಿಂಹಪಾಲು ಹೊಂದಿರುವ ಫಾಕ್ಸ್ ಕಾನ್(FoxConn), ವಿಸ್ಟ್ರೋನ್ (Wistron) ಹಾಗು ಪೆಗಟ್ರಾನ್(Pegatron) ಕಂಪನಿಗಳು ಈ ಯೋಜನೆಯಡಿಯಲ್ಲಿ 900 ಮಿಲಿಯನ್ ಡಾಲರ್(ಸುಮಾರು 6700 ಕೋಟಿ ರೂ.) ಹೂಡಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
Gadget360 ವರದಿಯ ಪ್ರಕಾರ ಫಾಕ್ಸ್ ಕಾನ್ 4000ಕೋಟಿ ರೂ., ವಿಸ್ಟ್ರೋನ್ 1300 ಕೋಟಿ ರೂ. ಮತ್ತು ಪೆಗಟ್ರಾನ್ 1200 ಕೋಟಿ ರೂ. ಹೂಡಲಿವೆ. ಮೂರು ಕಂಪನಿಗಳು ಜಾಗತಿಕವಾಗಿ ಹಲವು ಕಂಪನಿಯ ಸ್ಮಾರ್ಟ್ ಫೋನ್ ಗಳನ್ನು ಉತ್ಪಾದಿಸುತ್ತಿದ್ದು ಭಾರತದಲ್ಲಿ ಆಪಲ್ ಗ್ಯಾಜೆಟ್ ಗಳ ಮೇಲೆ ಹೆಚ್ಚು ಗಮನಹರಿಸಲಾಗುವುದೆಂದು ತಿಳಿಸಿವೆ.
ಎಲ್ಲ ಅಂದುಕೊಂಡಂತೆ ಆದರೆ ಮುಂಬರುವ ದಿನಗಳಲ್ಲಿ ಭಾರತೀಯರಿಗೆ ಆಪಲ್ ಗ್ಯಾಜೆಟ್ ಗಳು ಜಾಗತಿಕ ಮಟ್ಟದ ದರದಲ್ಲೇ ದೊರೆಯಲಿವೆ ಎಂಬುದು ಸಂತಸದ ಸುದ್ದಿ.
1 Response
[…] ವ್ಯತ್ಯಾಸ ಆಗಬಹುದು. ಅದು ಹೇಗೆ ಎಂಬುದಕ್ಕೆ ಭಾರತದಲ್ಲಿ ಆಪಲ್ ಗ್ಯಾಜೆಟ್ಸ್ ಕಡಿಮೆ ಬೆಲೆ… […]