ಆಂಡ್ರಾಯ್ಡ್ 11 ಹೊಸತೇನಿದೆ? (What’s new in Android 11 in Kannada)

Share

ಆಂಡ್ರಾಯ್ಡ್ 11ರ ಅಧಿಕೃತ ಆವೃತ್ತಿ ಸೆಪ್ಟೆಂಬರ್ 8ರಿಂದ Google Pixel ಫೋನುಗಳ ಜೊತೆಗೆ ಇನ್ನು ಕೆಲವು ಪ್ರಮುಖ ಮಾದರಿಯ ಮೊಬೈಲುಗಳಿಗೆ ಬಿಡುಗಡೆಯಾಗಲಿದೆ. Apple iOS ಅನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಆಂಡ್ರಾಯ್ಡ್ ಬಳಕೆದಾರರ ಸಂಖ್ಯೆ ಬಹಳ ಹೆಚ್ಚಿದೆ, ಹಾಗಾಗಿ pixel ಮೊಬೈಲುಗಳ ಜೊತೆಗೇ ಬೇರೆ ಕಂಪನಿಯ ಮೊಬೈಲುಗಳಿಗೆ ಒಮ್ಮೆಲೇ ಅಪ್‌ಡೇಟ್ಗಳನ್ನು ನೀಡುತ್ತಿರುವುದು ಒಳ್ಳೆಯ ಬೆಳೆವಣಿಗೆ.

ಇತ್ತೀಚಿನ ವರ್ಷಗಳಲ್ಲಿ ಆಂಡ್ರಾಯ್ಡ್ ಅಪ್ಡೇಟ್ಗಳು ಬಳಕೆದಾರರ ಗೌಪ್ಯತೆಯ ಬಗ್ಗೆ ಹೆಚ್ಚು ಒತ್ತು ನೀಡುವ ಬಗ್ಗೆಯೇ ಇರುತ್ತದೆ. ಈ ನಿಟ್ಟಿನಲ್ಲಿ Appleನವರಿಗೆ ಧನ್ಯವಾದ ಹೇಳಲೇಬೇಕು.

ಎಲ್ಲ OS ಅಪ್‌ಡೇಟ್ಗಳು ಬಂದಾಗ ನಮಗೆ ಮೊದಲು ಆಕರ್ಷಿಸುವುದೇ ಬಳಕೆದಾರರ -ಇಂಟರ್ಫೇಸ್(User-Interface). ಆದರೆ ಈ ಅಪ್‌ಡೇಟಿನಲ್ಲಿ ಕಳೆದಬಾರಿಗೆ ಹೋಲಿಸಿದರೆ ಅಂತಹ ವ್ಯತ್ಯಾಸವೇನು ಕಾಣಸಿಗುವುದಿಲ್ಲವಾದರರೂ, ನೋಟಿಫಿಕೇಶನ್ಗಳು ಬರುವ ಜಾಗದಲ್ಲಿ ಆಗಿರುವ ಬದಲಾವಣೆಗಳು ಚೆನ್ನಾಗಿವೆ.

ಮೊದಲನೆಯದಾಗಿ ಮೊಬೈಲ್ನಲ್ಲಿರುವ ಎಲ್ಲಾ chat ಅಪ್ಲಿಕೇಶನ್ಗಳ ನೋಟಿಫಿಕೇಶನ್ಗಳನ್ನು ಆದ್ಯತೆಗೆ ಅನುಸಾರ, ಪ್ರತ್ಯೇಕ ವಿಭಾಗದಲ್ಲಿ ಬರುವಂತೆ ಮಾಡಿದೆ. ಅದನ್ನು “Conversations”(ಸಂಭಾಷಣೆಗಳು) ಎಂದು ಕರೆದಿದೆ. ಇದರಲ್ಲಿ ನಿಮ್ಮ ಅಗತ್ಯದ ಅಪ್ಲಿಕೇಶನ್ನಿನಲ್ಲಿರುವ ಬೇಕಾದ ವ್ಯಕ್ತಿಗಳ ಸಂಭಾಷಣೆಗೆ ಮಾನ್ಯತೆನೀಡಿ ಅವರ ಮೆಸೇಜ್ಗಳು ಮೊದಲು ಕಾಣುವಂತೆ ಮಾಡಬಹುದು.

ಕೃಪೆ: ಗೂಗಲ್

ಎರಡನೆಯದಾಗಿ Bubbles chat ಹೆಡ್. ಇದು ನಿಮಗೆ ಹೊಸದೇನಲ್ಲ, Facebook messenger ಅಪ್ಲಿಕೇಶನ್ ಬಳಸಿರುವವರಿಗೆ ಇದರ ಅನುಭವಿರುತ್ತದೆ. ಆಂಡ್ರಾಯ್ಡ್ 11ರ Bubbles ನಿಮ್ಮ ಮೊಬೈಲ್ನಲ್ಲಿರುವ ಎಲ್ಲಾ chat ಅಪ್ಲಿಕೇಶನ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಗೇಮ್ ಆಡುವಾಗ ಇಲ್ಲವೇ ಇನ್ನಿತರೆ ಕೆಲಸ ಮಾಡುವಾಗ ವೇಗವಾಗಿ ಪ್ರತಿಯುತ್ತರ ನೀಡಲು ಈ ಸವಲತ್ತು ಸಹಕಾರಿಯಾಗಿದೆ.

ಕೃಪೆ: ಗೂಗಲ್

ಮೊಬೈಲ್ನಲ್ಲಿರುವ ಪವರ್ ಬಟನ್ ಸ್ವಾಭಾವಿಕವಾಗಿ ಪರದೆಯನ್ನು lock/un-lock ಮಾಡಲು ಮತ್ತು ಲಾಂಗ್ ಪ್ರೆಸ್ ಮಾಡಿ shutdown ಮಾಡಲು ಬಳಸುತ್ತೇವೆ. ಆದರೆ ಹೊಸ ಅಪ್‌ಡೇಟಿನಲ್ಲಿ ನೀವು ಲಾಂಗ್ ಪ್ರೆಸ್ ಮಾಡಿದರೆ Power ಮೆನು ತೋರಿಸುತ್ತದೆ. ಇದರಲ್ಲಿ shutdown, restart ಮತ್ತು emergency optionಗಳ ಜೊತೆಗೆ Google Payಇಂದ ಹಣ ಪಾವತಿ, ಮನೆಯಲ್ಲಿರುವ ಸ್ಮಾರ್ಟ್ ಪರಿಕರಗಳನ್ನು ನಿಯಂತ್ರಿಸುವ ಆಯ್ಕೆಗಳಿವೆ.NFC ಮೂಲಕ ಹಣ ಪಾವತಿಯ ಸೌಲಭ್ಯ ಇಲ್ಲದಿರುವ ಮೊಬೈಲ್ನಲ್ಲಿ ಸುಲಭವಾಗಿ ಒಂದೇ ಬಟನ್ ಒತ್ತಿ ಪಾವತಿಸಲು ಸಹಕಾರಿಯಾಗಿದೆ.

ಯಾವುದಾದರೂ ಮ್ಯೂಸಿಕ್ ಅಪ್ಲಿಕೇಶನ್ ಬಳಸಿದಾಗ, ಅದನ್ನು ನಿಯಂತ್ರಣ ಮಾಡುವ ಆಯ್ಕೆಗಳನ್ನು ಈಗ Quick settings ಜಾಗದಲ್ಲಿ ಅಳವಡಿಸಲಾಗಿದೆ. ಇದರಿಂದ ಎಲ್ಲಾ ರೀತಿಯ ಸಂಪರ್ಕಗೊಂಡಿರುವ ಸಾಧನಗಳನ್ನು ಸುಲಭವಾಗಿ ಬದಲಾಯಿಸಬಹುದು.

ಕೃಪೆ: ಗೂಗಲ್

ಆರಂಭದಲ್ಲೇ ಹೇಳಿದ ಹಾಗೆ ಬಹುಮುಖ್ಯವಾದ ಬದಲಾವಣೆ ಮಾಡಿರುವುದು ಬಳಕೆದಾರರ ಗೌಪ್ಯತೆ ಕಾಪಾಡುವ ವಿಷಯದ ಬಗ್ಗೆ. ನೀವು ಯಾವುದಾದರೂ ಅಪ್ಲಿಕೇಶನ್ ಇನ್ಸ್ಟಾಲ್(install) ಮಾಡಿ ಮೊದಲಬಾರಿ ಲಾಂಚ್ ಮಾಡಿದಾಗ ತರತರದ ಸೆನ್ಸಾರ್(sensor)ಗಳನ್ನು ಉಪಯೋಗಿಸಲು ಅನುಮತಿ ಕೊಟ್ಟಿರುತ್ತೀರಿ. ಉದಾಹರಣೆಗೆ ಲೊಕೇಶನ್, ಮೈಕ್ರೋಫೋನ್ ಮತ್ತು ಕ್ಯಾಮೆರಾ. ಈ ರೀತಿ ಕೊಟ್ಟಿರುವ ಅನುಮತಿಗಳಿಗೆ ಆಂಡ್ರಾಯ್ಡ್ 11ನಲ್ಲಿ ನಾವು ಯಾವಾಗ ಅಪ್ಲಿಕೇಶನ್ ಬಳಸುವೆವೋ ಆ ಸಮಯದಲ್ಲಿ ಮಾತ್ರ ಸೆನ್ಸಾರುಗಳನ್ನು ಉಪಯೋಗಿಸುವಂತೆ ಅಥವಾ ಪ್ರತಿಬಾರಿ ಅಪ್ಲಿಕೇಶನ್ ಲಾಂಚ್ ಮಾಡಿದಾಗಲೂ ಅನುಮತಿ ಕೇಳುವಂತೆ ಮಾಡಬಹುದಾಗಿದೆ.

ಅನುಮತಿ ಕೊಟ್ಟ ಅಪ್ಲಿಕೇಶನ್ನುಗಳನ್ನು ಬಹುದಿನಗಳಿಂದ ಉಪಯೋಗಿಸದೆ ಇದ್ದರೆ ಸ್ವಯಂ ಪ್ರೇರಣೆಯಿಂದ ಆಯಾ ಆಪ್ ನ ಅನುಮತಿಗಳೆಲ್ಲ ನಿಷ್ಕ್ರಿಯಗೊಳ್ಳುತ್ತದೆ. ಮತ್ತೊಮ್ಮೆ ನೀವು ಈ ಆಪ್ ಲಾಂಚ್ ಮಾಡಿದಾಗ ಮರು ಅನುಮತಿಗೆ ಕೊಡಬೇಕಾಗುತ್ತದೆ.

ಇದಲ್ಲದೆ ಸಾಕಷ್ಟು ಸಣ್ಣ ಸಣ್ಣ ಬದಲಾವಣೆಯೊಂದಿಗೆ ಆರಂಭಿಕ ಹಂತದಲ್ಲಿ ಪಿಕ್ಸೆಲ್ 2 ಮತ್ತು ಮತ್ತು ಅದರ ನಂತರದ ಎಲ್ಲ ಪಿಕ್ಸೆಲ್ ಫೋನುಗಳಿಗೆ, OnePlus 8, OnePlus 8 Pro, Oppo Find X2 Pro ಮತ್ತು Find X2, Realme X50 Pro, Xiaomi Mi 10 ಮತ್ತು Mi 10 Pro ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ 11 OS ಅಪ್‌ಡೇಟ್ ಲಭ್ಯವಾಗುತ್ತಿದೆ. ನವೀಕರಣಗೊಂಡ OSನಲ್ಲಿ ಮುಖ್ಯವಾದವುಗಳನ್ನು ಮಾತ್ರ ಹಂಚಿಕೊಂಡಿದ್ದೇನೆ. ಈ ಅಪ್‌ಡೇಟೆನಲ್ಲಿ ನಿಮಗೆ ಇಷ್ಟವಾದ/ಇಷ್ಟವಾಗದ ಯಾವುದಾದರೂ ಲಕ್ಷಣಗಳಿದ್ದಲ್ಲಿ ಕಾಮೆಂಟ್ಸ್ ನಲ್ಲಿ ತಿಳಿಸಿ.